ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಮಗಳ ಜೊತೆಗಿನ ಮುದ್ದಾದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ನಮ್ಮ ಪುಟ್ಟ ರಾಜಕುಮಾರಿ ಎಂದು ನಟಿ ರಾಧಿಕಾ ಪೋಸ್ಟ್ ಮಾಡಿದ್ದಾರೆ. ಮಗಳ ಕಾಲಿಗೆ ಬೂಟ್ ಹಾಕ್ತಿರೋ ಚೆಂದದ ಫೋಟೋ ಶೇರ್ ಮಾಡಿದ್ದಾರೆ.
View this post on Instagram
ಸೆ.24 ಹೆಣ್ಣು ಮಗಳ (Daughters Day 2023) ದಿನಾಚರಣೆಯಾಗಿದ್ದು, ಈ ಸಂದರ್ಭದಲ್ಲಿ ಮಗಳ ಜೊತೆಗಿನ ಕ್ಯೂಟ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಜೊತೆಗೆ ಯಶ್- ರಾಧಿಕಾ ಇಬ್ಬರು ಐರಾಗೆ ಮುತ್ತು ಕೊಡುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿದೆ. ನಟಿಯ ಪೋಸ್ಟ್ ವೈರಲ್ ಆಗ್ತಿದ್ದಂತೆ ಯಶ್ 19 (Yash 19) ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು
ಇತ್ತೀಚಿಗೆ ಯಶ್ (Yash) ಕುಟುಂಬ ಗೋವಾದಲ್ಲಿ ಬೀಡು ಬಿಟ್ಟಿತ್ತು. ಕೆಲದಿನಗಳ ಕಾಲ ಕುಟುಂಬದ ಜೊತೆ ಒಂದೊಳ್ಳೆಯ ಸಮಯ ಕಳೆದಿದ್ದರು. ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದ ನಟ ಮತ್ತೆ ಸಿನಿಮಾ ಕೆಲಸಗಳತ್ತ ಗಮನ ನೀಡುತ್ತಿದ್ದಾರೆ.
ಯಶ್ 19 (Yash 19) ಸಿನಿಮಾ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ 2 ಬಳಿಕ ಇಡೀ ದೇಶವೇ ಯಶ್ ಮುಂದಿನ ಸಿನಿಮಾಗಾಗಿ ಕಾಯ್ತಿದ್ದಾರೆ.