ನ್ಯಾಷನಲ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಜೋಡಿಯ ದಾಂಪತ್ಯಕ್ಕೆ ಇಂದು (ಡಿ.9) 8ನೇ ವರ್ಷ. ಇದೇ ಖುಷಿಯಲ್ಲಿ ನಟಿ ಪತಿ ಯಶ್‌ಗೆ ವಿಶೇಷವಾಗಿ ಶುಭಕೋರಿದ್ದಾರೆ. ನಟಿಯ ಲವ್ಲಿ ವಿಶ್ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ತಾಯ್ತನದ ಖುಷಿಯಲ್ಲಿ ಹರಿಪ್ರಿಯಾ
ದಾಂಪತ್ಯ ಎಂದಿಗೂ ಇಬ್ಬರೂ ಪರಿಪೂರ್ಣ ವ್ಯಕ್ತಿಗಳಿಂದ ಅಲ್ಲ. ಇಬ್ಬರೂ ತದ್ವೀರುದ್ಧ ವ್ಯಕ್ತಿಗಳು ಪರಸ್ಪರ ಬಿಟ್ಟು ಕೊಡಲು ನಿರಾಕರಿಸಿದಾಗ ಎಂದು ನಟಿ ಬರೆದುಕೊಂಡಿದ್ದಾರೆ. ನನ್ನ ಪ್ರೀತಿಯ ಪತಿಗೆ 8ನೇ ವಿವಾಹ ಮಹೋತ್ಸವದ ಶುಭಾಶಯಗಳು ಎಂದು ರಾಧಿಕಾ ವಿಶ್ ಮಾಡಿದ್ದಾರೆ.
View this post on Instagram
ಇನ್ನೂ ಯಶ್ ಮತ್ತು ರಾಧಿಕಾ ಮೊದಲು ‘ನಂದಗೋಕುಲ’ ಎಂಬ ಸೀರಿಯಲ್ ಸೆಟ್‌ನಲ್ಲಿ ಭೇಟಿಯಾದರು. ಆ ನಂತರ ಮೊಗ್ಗಿನ ಮನಸ್ಸು, ಡ್ರಾಮಾ ಸಿನಿಮಾ ವೇಳೆ ಸ್ನೇಹ ಪ್ರೀತಿಗೆ ತಿರುಗಿತ್ತು. ಆ ನಂತರ ಗುರುಹಿರಿಯರ ಸಮ್ಮತಿ ಪಡೆದು 2016ರ ಡಿ.9ರಂದು ಯಶ್ ಜೊತೆ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಕ್ಸಸ್‌ಫುಲ್ ನಾಯಕಿಯಾಗಿ ಚಿತ್ರರಂಗ ಆಳುತ್ತಿರುವಾಗಲೇ ರಾಧಿಕಾ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿ ಯಶ್ ಜೊತೆ ಮದುವೆಯಾದರು. ಇವರ ದಾಂಪತ್ಯಕ್ಕೆ ಮಕ್ಕಳು ಸಾಕ್ಷಿಯಾಗಿದ್ದಾರೆ. ಅದಷ್ಟೇ ಅಲ್ಲ, ಪತಿ ಯಶ್ ಅವರ ಸಿನಿಮಾ ಯಶಸ್ಸಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಯಶ್ ಸಕ್ಸಸ್‌ನಲ್ಲಿ ರಾಧಿಕಾ ಅವರ ಪಾತ್ರವು ಇದೆ. ಇದರ ಜೊತೆಗೆ ನಟಿಯ ಕಮ್‌ಬ್ಯಾಕ್ ಸಿನಿಮಾ ಅಭಿಮಾನಿಗಳು ಕಾಯುತ್ತಿದ್ದಾರೆ.