ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ ಮುಗಿದಿದ್ದು, ಸದ್ಯಕ್ಕೆ ಫಲಿತಾಂಶವೊಂದೇ ಬಾಕಿಯಿದೆ. ಇತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ತಮ್ಮ ಪತಿ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಕೈಗೊಂಡಿದ್ದರ ಬಗ್ಗೆ ಪಬ್ಲಿಕ್ ಟಿವಿ ಜೊತೆಗೆ ರಾಧಿಕಾ ಪಂಡಿತ್ ಮಾತನಾಡಿದ್ದಾರೆ.
ನಾನು ಯಾರ ಪರವೂ ನಿಲ್ಲಲಾರೆ. ಇದು ಜನರ ತೀರ್ಮಾನವಾಗಿದ್ದು, ಅವರಿಗೆ ಬೇಕಾದವರನ್ನು ಆರಿಸಿ ಕಳಿಸಲಿ. ಮಂಡ್ಯದ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಯಶ್ ಯಾವಾಗಲೂ ಯೋಚನೆ ಮಾಡಿ ಕೆಲಸ ಮಾಡುತ್ತಾರೆ. ಅವರೆಂದೂ ತಪ್ಪು ಹೆಜ್ಜೆ ಹಾಕಿಲ್ಲ. ಯಶ್ ಸಂಬಂಧಗಳಿಗೆ ಬೆಲೆ ಕೊಡುತ್ತಾರೆ. ಅದಕ್ಕಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಸಂಬಂಧಕ್ಕೆ ಬೆಲೆ ಕೊಡುವ ಯಶ್ ಜೊತೆ ಸದಾ ನಾನಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಕೂಡಾ ಸುಮಲತಾಗೆ ಹಾರೈಸಿ ಟ್ವೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರು “ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಿಮ್ಮ ಮತನವನ್ನು ನೀಡಿ ಜಯಶೀಲರನ್ನಾಗಿ ಮಾಡಿ” ಎಂದು ಬರೆದು ಗುರುವಾರ ಬೆಳಗ್ಗೆ 10.55ಕ್ಕೆ ಟ್ವೀಟ್ ಮಾಡಿದ್ದರು.
Advertisement
ಅಷ್ಟೇ ಅಷ್ಟೇ ಅಲ್ಲದೇ ಸುಮಲತಾ ಗೆದ್ದರೆ ಎಂದು ಕೆಲವು ಅಂಶಗಳನ್ನು ಫೋಟೋ ಹಾಕುವ ಮೂಲಕ ಸೂಚಿಸಿದ್ದಾರೆ. “ದೇಶದ ಇತಿಹಾಸದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯನ್ನ ಪಕ್ಷೇತರವಾಗಿ ಗೆಲ್ಲಿಸಿದ ಕೀರ್ತಿ ಮಂಡ್ಯಕ್ಕೆ ಬರುತ್ತದೆ. ಎರಡನೇಯದ ರಾಜ್ಯದಲ್ಲಿ ಆಡಳಿತರೂಡ ಮುಖ್ಯಮಂತ್ರಿ, ಜಿಲ್ಲೆಯ ಎಂಟು ಶಾಸಕರನ್ನು ಹೊಂದಿದ್ದರೂ ಸ್ವತ ಸಿಎಂ ಪುತ್ರ ಅಭ್ಯರ್ಥಿಯಾಗಿದ್ದರೂ ಹಣದ ಆಸೆಗೆ ಮಂಡ್ಯದ ಜನ ಮರುಳಾಗಲಿಲ್ಲವೆಂಬ ಕೀರ್ತಿ ಬರುತ್ತದೆ. ಕೊನೆಯದಾಗಿ ಕರ್ನಾಟಕದ ಇತಿಹಾಸದಲ್ಲಿ ಪ್ರಪ್ರಥಮ ಪಕ್ಷೇತರ ಮಹಿಳಾ ಸಂಸದೆಯನ್ನು ಗೆಲ್ಲಿಸಿದ ಕೀರ್ತಿ ನಮ್ಮ ಮಂಡ್ಯಕ್ಕೆ ಬರುತ್ತೆ” ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ.
Advertisement
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ರವರಿಗೆ ನಿಮ್ಮ ಮತವನ್ನು ನಿಡಿ ಜಯಶೀಲರನ್ನಾಗಿ ಮಾಡಿ @sumalathaA @dasadarshan pic.twitter.com/Rkj9af2CZN
— Vijayalakshmi darshan (@vijayaananth2) April 18, 2019