ಬೆಂಗಳೂರು: ಸ್ಯಾಂಡಲ್ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಮುದ್ದು ಮಗಳು ‘ಐರಾ’ಗೆ ಕೃಷ್ಣನ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಕೃಷ್ಣ ಉಡುಪು ಧರಿಸಿರುವ ಐರಾಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆ ಪೋಸ್ಟ್ ಗೆ, “ನಮ್ಮ ಪುಟ್ಟ ಕೃಷ್ಣ. ಜನ್ಮಾಷ್ಟಮಿಯ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.
Advertisement
ಇನ್ಸ್ಟಾಗ್ರಾಂನಲ್ಲಿ ರಾಧಿಕಾ ಅವರು ಒಟ್ಟು ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಐರಾ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದಾಳೆ. ಐರಾಳ ಈ ಫೋಟೋ ನೋಡಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
View this post on Instagram
Our Lil Krishna ???? Happy Janmashtami!! #radhikapandit #nimmaRP PC: Sooraj Nitte
Advertisement
ಸ್ಯಾಂಡಲ್ವುಡ್ ಕೃಷ್ಣ ಎಂದೇ ಖ್ಯಾತರಾಗಿರುವ ಅಜಯ್ ರಾವ್ ಅವರು ತಮ್ಮ ಮಗಳು ಚರಿಷ್ಮಾಳಿಗೆ ಕೃಷ್ಣನ ಉಡುಪು ಹಾಕಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ನಟ ಅಜಯ್ ರಾವ್ ಹಾಗೂ ಅವರ ಪತ್ನಿ ಸ್ವಪ್ನ ಅವರು ತಮ್ಮ ಮಗಳು ಚರಿಷ್ಮಾಳಿಗೆ ಕೃಷ್ಣನ ಉಡುಪು ತೋಡಿಸಿ ಫೋಟೋ ಕ್ಲಿಕ್ಕಿಸಿದ್ದಾರೆ.
Advertisement
ಅಜಯ್ ಹಾಗೂ ಸ್ವಪ್ನ ಅವರು ತಮ್ಮ ಚರಿಷ್ಮಾ ಕೃಷ್ಣನ ಉಡುಪಿನಲ್ಲಿ ಬೆಣ್ಣೆ ತಿನ್ನುತ್ತಿರುವ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಬಳಿಕ ತಮ್ಮ ಮಗಳ ಜೊತೆ ಅಜಯ್ ಅವರು ಕೂಡ ಕೃಷ್ಣನಂತೆ ಪೇಟ ಧರಿಸಿ ಕೊಳಲು ಹಿಡಿದುಕೊಂಡಿದ್ದಾರೆ.