ಸೋಷಿಯಲ್ ಮೀಡಿಯಾದಲ್ಲಿ ಆಗೊಂದು ಈಗೊಂದು ವಿಡಿಯೋ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy), ಈ ಬಾರಿ ಪೂರ್ಣಪ್ರಮಾಣದಲ್ಲಿ ಅದರಲ್ಲೂ ಥಿಯೇಟರ್ ನಲ್ಲೇ ಅಭಿಮಾನಿಗಳ ಜೊತೆ ಮುಖಾಮುಖಿ ಆಗಲು ಸಿದ್ಧತೆ ನಡೆಸಿದ್ದಾರೆ. ರಾಧಿಕಾ ನಟನೆಯ ಭೈರಾದೇವಿ (Bhairadevi) ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದ್ದು, ಶೂಟಿಂಗ್ ನಂತರದ ಕೆಲಸಗಳು ನಡೆಯುತ್ತಿವೆ.
Advertisement
ಈ ಸಿನಿಮಾದಲ್ಲಿ ರಾಧಿಕಾ ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ಭೈರಾದೇವಿಯಾಗಿ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಅದೊಂದು ವಿಶೇಷ ಅವತಾರದ ಪಾತ್ರವಾಗಿದ್ದರಿಂದ ಅವರ ವೃತ್ತಿ ಜೀವನದ ಮಹತ್ವದ ಪಾತ್ರ ಇದಾಗಿದೆಯಂತೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್
Advertisement
Advertisement
ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಭಿನ್ನವಾಗಿದೆ. ಭೈರಾದೇವಿಯಾಗಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದರೆ, ಅಘೋರಿ ಪಾತ್ರದಲ್ಲಿ ಖಳನಟ ರವಿಶಂಕರ್ (Ravishankar) ಅಭಿನಯಿಸಿದ್ದಾರೆ. ರಾಧಿಕಾ ಅವರ ಗುರುವಿನ ಪಾತ್ರ ಅದಾಗಿದೆಯಂತೆ. ಅಲ್ಲದೇ, ಪೊಲೀಸ್ ಆಫೀಸರ್ ಪಾತ್ರದಲ್ಲಿ ರಮೇಶ್ ಅರವಿಂದ್ (Ramesh Aravind) ಇರುವುದು ಮತ್ತೊಂದು ವಿಶೇಷ. ಮೊನ್ನೆಯಷ್ಟೇ ಸಿನಿಮಾ ಟೀಸರ್ ಕೂಡ ರಿಲೀಸ್ ಮಾಡಿದೆ ಚಿತ್ರತಂಡ.
Advertisement
ರಾಧಿಕಾ ಪಂಡಿತ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡದೇ ಇದ್ದರೂ, ಆಗೊಂದು ಈಗೊಂದು ಸಿನಿಮಾ ಮಾಡುವ ಮೂಲಕ ಸಿನಿಮಾ ರಂಗದಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತಿದ್ದಾರೆ. ನಟಿಯಾಗಿ, ನಿರ್ಮಾಪಕಿಯಾಗಿ ರಾಧಿಕಾ ಗುರುತಿಸಿಕೊಂಡಿದ್ದರೂ, ರೆಗ್ಯುಲರ್ ಆಗಿ ಸಿನಿಮಾ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Your article helped me a lot, is there any more related content? Thanks! https://accounts.binance.com/de-CH/register-person?ref=JHQQKNKN