ಸಿನಿಮಾ ರಂಗದಿಂದ ಯಾಕೋ ಕೊಂಚ ದೂರವೇ ಉಳಿದಿರುವ ನಟಿ ರಾಧಿಕಾ ಕುಮಾರಸ್ವಾಮಿ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುತ್ತಾರೆ. ಅದರಲ್ಲೂ ಡಾನ್ಸ್, ವರ್ಕೌಟ್ ಅನ್ನು ಯಾವತ್ತೂ ಅವರು ಮರೆಯುವುದಿಲ್ಲ. ಅದರಲ್ಲೂ ತಮ್ಮಿಷ್ಟದ ಹಾಡುಗಳಿಗೆ ಡಾನ್ಸ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ.
Advertisement
ಮೊನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು, ಈ ನೃತ್ಯದಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ. ಆ ವಿಡಿಯೋವನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಂದಿನಂತೆ ಡಾನ್ಸ್ ಕ್ಲಾಸಿಗೆ ಹೋಗಿರುವ ರಾಧಿಕಾ, ಮಾಸ್ಟರ್ ಜೊತೆ ಹೊಸ ಹಾಡಿಗೆ ಸ್ಟೆಪ್ ಕಲಿಯಲು ಪ್ರಯತ್ನಿಸಿದ್ದಾರೆ. ಹೀಗೆ ಡಾನ್ಸ್ ಮಾಡುವಾಗ ಬಿದ್ದಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಇದನ್ನೂ ಓದಿ:ಟೂ ಪೀಸ್ ಧರಿಸಿ, ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ವೇದಿಕಾ
Advertisement
Advertisement
ಸಿನಿಮಾ ರಂಗದಲ್ಲಿ ನಟಿಯಾಗಿ, ನಿರ್ಮಾಪಕಿಯಾಗಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ, ಕೆಲ ವರ್ಷಗಳಿಂದ ಸಿನಿಮಾ ರಂಗದಲ್ಲಿ ಅವರು ಸಕ್ರೀಯರಾಗಿಲ್ಲ. ನಿರ್ಮಾಪಕಿಯಾಗಿ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎಂದು ಹೇಳಲಾಗಿತ್ತು. ಅದರ ಬಗ್ಗೆಯೂ ಸುಳಿವಿಲ್ಲ. ಆದರೆ, ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನಿಗಳ ಜೊತೆ ಟಚ್ ನಲ್ಲಿ ಇರುತ್ತಾರೆ ರಾಧಿಕಾ.