ಹೊಸದೊಂದು ಆಸೆಯನ್ನು ರಿವೀಲ್ ಮಾಡಿದ್ರು ರಾಧಿಕಾ!

Public TV
1 Min Read
Radhika Pandit

ಬೆಂಗಳೂರು: ರಾಧಿಕಾ ಅವರು ಈಗ ಗರ್ಭಿಣಿಯಾಗಿದ್ದು, ಇಂಥ ಸಮಯದಲ್ಲಿ ಅವರಿಗೆ ಹಲವಾರು ಆಸೆಗಳಿರುತ್ತದೆ ಅದರಂತೆ ಅವರಿಗೆ ರಾಂಕಿಂಗ್ ಸ್ಟಾರ್ ಯಶ್‍ನೊಂದಿಗೆ ಒಂದು ಸಿನಿಮಾವನ್ನು ಮಾಡಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ.

ಗರ್ಭಿಣಿಯ ವಿಶ್ರಾಂತಿಯಲ್ಲಿ ತೊಡಗಿರುವ ಮೊಗ್ಗಿನ ಬೆಡಗಿ ರಾಧಿಕಾ ಪತಿ ಯಶ್ ಜೊತೆಗೆ ಪುರಾಣ ಆಧಾರಿತ ಸಿನಿಮಾವನ್ನು ಮಾಡಬೇಕು ಎಂಬ ಕನಸು ಇದೆ ಎಂದು ಹೇಳಿಕೊಂಡಿದ್ದಾರೆ.

Yash and radhika pandit

ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಪತ್ನಿಯ ಆಸೆಯ ಬಗ್ಗೆ ಯಶ್, ಮದುವೆಗೂ ಮೊದಲು ನಾವು ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದು, ಈ ವೇಳೆ ನಾವು ಇಂತಹದೊಂದು ಸಿನಿಮಾ ಮಾಡಬೇಕು ಅಂತ ಅಂದುಕೊಂಡು ಯಾವುದು ಮಾಡಿರಲಿಲ್ಲ. 10 ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದೇವೆ. ಅದರಲ್ಲಿ ನನಗೆ ಇಷ್ಟವಾದ ಕಥೆಗಳು ರಾಧಿಕಾಗೆ ಇಷ್ಟವಾಗುತ್ತಿರಲಿಲ್ಲ. ರಾಧಿಕಾಗೆ ಇಷ್ಟವಾದರೇ ನನಗೆ ಇಷ್ಟವಾಗುತ್ತಿರಲಿಲ್ಲ. ಮದುವೆಯಾದ ನಂತರ ಒಂದು ಸಿನಿಮಾಗಳನ್ನು ಮಾಡಿಲ್ಲ. ಹೀಗಾಗಿ ಇಬ್ಬರೂ ಸೇರಿ ಒಂದು ಪುರಾಣ ಆಧಾರಿತ ಸಿನಿಮಾವನ್ನು ಮಾಡಬೇಕು ರಾಧಿಕಾ ಹೇಳಿದ್ದಾಳೆ ಎಂದು ತಿಳಿಸಿದರು.

ಈ ರೀತಿಯ ಸಿನಿಮಾವನ್ನು ನಾವಿಬ್ಬರೂ ಎಂದಿಗೂ ಮಾಡಿಲ್ಲ. ಅಷ್ಟೇ ಅಲ್ಲದೇ ಅಭಿಮಾನಿಗಳು ಮದುವೆಯ ನಂತರ ನಮ್ಮಿಬ್ಬರ ಜೋಡಿಯ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಯಾರಾದರೂ ನಿರ್ದೇಶಕರು ಕಥೆಯೊಂದಿಗೆ ಬಂದರೆ ಖಂಡಿತ ಸಿನಿಮಾವನ್ನು ಮಾಡುತ್ತೇವೆ ಎಂದು ಯಶ್ ಹೇಳಿದ್ದಾರೆ.

24862178 1929148997101647 1718539766546177249 n

ರಾಧಿಕಾ ಪಂಡಿತ್ ಈ ಹಿಂದೆ ಹಲವಾರು ಸಂದರ್ಶನದಲ್ಲಿ ಐತಿಹಾಸಿಕ ಸಿನಿಮಾದಲ್ಲಿ ಅಭಿನಯಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಮೊಗ್ಗಿನ ಬೆಡಗಿ ರಾಧಿಕಾ ವಿಶ್ರಾಂತಿಯಲ್ಲಿದ್ದು, ನಟ ಯಶ್ ಅವರು ಕೆಜಿಎಫ್ ಚಾಪ್ಟರ್-1 ಮುಗಿಸಿದ್ದು, ಮೈ ನೇಮ್ ಇಸ್ ಕಿರಾತಕ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಧಿಕಾ ಆದಿ ಲಕ್ಷ್ಮಿ ಪುರಾಣದಲ್ಲಿ ಅಭಿನಯಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ.

radhika pandit baby moon F

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *