ಮುಂಬೈ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ನಟಿಸಿದ ‘ದಿ ವೆಡ್ಡಿಂಗ್ ಗೆಸ್ಟ್’ ಚಿತ್ರದಲ್ಲಿ ಇರುವ ಬೋಲ್ಡ್ ಸೀನ್ ಲೀಕ್ ಆಗಿದೆ. ಬೋಲ್ಡ್ ಸೀನ್ ಲೀಕ್ ಆಗಿದ್ದಕ್ಕೆ ನಾವು ಸೈಕೋ ಸೊಸೈಟಿಯಲ್ಲಿ ಇದ್ದೇವೆ ಎಂದು ನಟಿ ಗರಂ ಆಗಿದ್ದಾರೆ.
ರಾಧಿಕಾ ‘ಸ್ಲಂಡಾಗ್ ಮಿಲೇನಿಯರ್’ ಚಿತ್ರದ ಕಲಾವಿದ ದೇವ್ ಪಟೇಲ್ ಅವರ ಜೊತೆ ದಿ ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಿಲೀಸ್ ಆಗುವ ಮೊದಲೇ ದೇವ್ ಹಾಗೂ ರಾಧಿಕಾ ಅವರ ಬೋಲ್ಡ್ ಸೀನ್ ಲೀಕ್ ಆಗಿದೆ. ಇದರಿಂದ ರಾಧಿಕಾ ಗರಂ ಆಗಿ ಜನರ ಮನಸ್ಥಿತಿ ಬಗ್ಗೆ ಪ್ರಶ್ನಿಸಿದ್ದಾರೆ.
ಬೋಲ್ಡ್ ಸೀನ್ ಲೀಕ್ ಆಗಿದ್ದಕ್ಕೆ ರಾಧಿಕಾ ಬೇಸರಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿ ಹಲವು ಸುಂದರವಾದ ಸೀನ್‍ಗಳು ಇದೆ. ಆದರೆ ಬೋಲ್ಡ್ ಸೀನ್ ಲೀಕ್ ಆಗಿದೆ. ಏಕೆಂದರೆ ಜನರ ಮನಸ್ಥಿತಿ ಸರಿಯಿಲ್ಲ. ಹೀಗೆ ಮಾಡುವುದರಿಂದ ಜನರ ಮನಸ್ಥಿತಿ ಹಾಗೂ ಎಂತಹ ಸೈಕೋ ಸೊಸೈಟಿಯಲ್ಲಿ ಇದ್ದೇವೆ ಎಂದು ತೋರಿಸುತ್ತದೆ. ಲೀಕ್ ಆಗಿರುವ ದೃಶ್ಯದಲ್ಲಿ ದೇವ್ ಕೂಡ ನಟಿಸಿದ್ದಾರೆ. ಆದರೆ ಇಲ್ಲಿ ನನ್ನ ಹೆಸರು ಮಾತ್ರ ಕೇಳಿ ಬರುತ್ತಿದೆ ಎಂದರು.
ರಾಧಿಕಾ ಅವರು ಬೋಲ್ಡ್ ಸೀನ್‍ನಲ್ಲಿ ನಟಿಸಿರುವ ದೃಶ್ಯ ಇದು ಮೊದಲ ಬಾರಿಗೆ ಲೀಕ್ ಆಗಿಲ್ಲ. ಈ ಹಿಂದೆ ರಾಧಿಕಾ ‘ಪಾಚರ್ಡ್’ ಚಿತ್ರದಲ್ಲಿ ಬೋಲ್ಡ್ ಸೀನ್‍ನಲ್ಲಿ ನಟಿಸಿದ್ದರು. ಈ ಚಿತ್ರದ ದೃಶ್ಯ ಕೂಡ ಲೀಕ್ ಆಗಿತ್ತು.