ರಾಧಾ ರಮಣ (Radha Ramana), ಮೀರಾ ಮಾಧವ, ಶುಭವಿವಾಹ ಸೀರಿಯಲ್‌ಗಳ ಮೂಲಕ ಮನೆ ಮಾತಾದ ನಟಿ ಕಾವ್ಯ ಗೌಡ (Kavya Gowda) ನೂತನ ಮನೆಗೆ ಕಾಲಿಟ್ಟಿದ್ದಾರೆ. ಗೃಹ ಪ್ರವೇಶದ (House Warming) ಸಂಭ್ರಮದಲ್ಲಿದ್ದಾರೆ ನಟಿ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
‘ಬಕಾಸುರ’ ಚಿತ್ರ ಖ್ಯಾತಿಯ ನಟಿ ಕಾವ್ಯ ಅವರು ಉದ್ಯಮಿ ಸೋಮಶೇಖರ್ (Somashekar) ಜೊತೆ 2021ರಲ್ಲಿ ಮೇ 13ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಗುರು ಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ. ಮದುವೆಯ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡು ಜ್ಯುವೆಲ್ಲರಿ ಡಿಸೈನರ್ ಆಗಿ ಕಾವ್ಯ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:ತಪ್ಪೆಲ್ಲ ನನ್ನದೇ ಎಂದು ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್
ಮದುವೆಯಾಗಿ ಒಂದು ವರ್ಷವಾಗುವ ಮುಂಚೆಯೇ ಇದೀಗ ಹೊಸ ಮನೆಗೆ ಕಾವ್ಯ ಗೌಡ ದಂಪತಿ ಪಾದಾರ್ಪಣೆ ಮಾಡಿದ್ದಾರೆ. ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿ ಮಿಂಚಿದ್ದಾರೆ. ನಟಿ ಕಾವ್ಯ ಕೂಡ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸವ್ಯಸಾಚಿ ಸೀರೆಯಲ್ಲಿ ನಟಿ ಕಾವ್ಯ ಮಿಂಚಿದ್ದಾರೆ.
View this post on Instagram
ಕಾವ್ಯ ದಂಪತಿ ಅವರ ಮನೆ ನೋಡುಗರ ಗಮನ ಸೆಳೆಯುತ್ತಿದೆ. ಮನೆಯಲ್ಲಿ ಎಲ್ಲಾ ಕಡೆ ಮರದ ತುಂಡಿನಿಂದ ವಿನ್ಯಾಸ ಮಾಡಿದ ಹಾಗೇ ಕಾಣುತ್ತಿದೆ. ಮನೆ ಕಟ್ಟಿಸಿದ ರೀತಿ ವಿಭಿನ್ನವಾಗಿದೆ. ನಟಿಯ ಹೊಸ ಮನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.