– ಪಕ್ಷದಲ್ಲಿ ವಿಜಯೇಂದ್ರ VS ಯತ್ನಾಳ್ ತಂಡ ಇಲ್ಲ ಉಸ್ತುವಾರಿ
ಬೆಂಗಳೂರು: ವಿಜಯೇಂದ್ರರನ್ನ (BY Vijayendra) ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರುವುದು ಹೈಕಮಾಂಡ್‌ಗೆ ಔಚಿತ್ಯ ಅನಿಸಿದೆ. ಪಕ್ಷದ ನಾಯಕತ್ವ ಬದಲಾವಣೆ ಅಥವಾ ನೇಮಕ ಮಾಡೋದು ಹೈಕಮಾಂಡ್ ಅಥವಾ ಕಾರ್ಯಕರ್ತರು ತೀರ್ಮಾನ ಮಾಡ್ತಾರೆ. ಯಾವಾಗ ಯಾರು ಸರಿ ಅನ್ಸುತ್ತೋ ಅವರನ್ನು ಹೈಕಮಾಂಡ್ ರಾಜ್ಯಾಧ್ಯಕ್ಷರಾಗಿ ಮಾಡುತ್ತೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ (Radha Mohan Das Agarwal) ತಿಳಿಸಿದ್ದಾರೆ.
ಬೆಂಗಳೂರಿನ (Bengaluru) ಬಿಜೆಪಿ ಕಚೇರಿಯಲ್ಲಿಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ವಿಜಯೇಂದ್ರ VS ಯತ್ನಾಳ್ (Vijayendra vs Yatnal) ತಂಡ ಅಂತ ಇಲ್ಲ. ಆದರೆ ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯತ್ನಾಳ್‌ಗೆ ಶೋಕಾಸ್ ನೊಟೀಸ್ ಕೊಡಲಾಗಿದೆ. ಇನ್ನೂ ಅವರು ಶೋಕಾಸ್ ನೊಟೀಸ್‌ಗೆ ಉತ್ತರ ಕೊಟ್ಟಿಲ್ಲ. ಅವರು ಉತ್ತರ ಕೊಟ್ಟ ನಂತರ ಮುಂದಿನ ನಿರ್ಧಾರ ಎಂದು ಹೇಳಿದರು. ಈ ವೇಳೆ ಉತ್ತರ ಕೊಟ್ರಲ್ಲ ಅಂತ ವರದಿಗಾರರು ಕೇಳಿದ ಪ್ರಶ್ನೆಗೆ, ಯತ್ನಾಳ್ ಉತ್ತರ ಕೊಟ್ಟಿರೋದು ಇನ್ನೂ ನನ್ನ ಗಮನಕ್ಕೆ ಬಂದಿಲ್ಲ ಎಂದು ಜಾರಿಕೊಂಡರು.
ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ವರಿಷ್ಠರು ರಾಜ್ಯಾಧ್ಯಕ್ಷದ ನೇಮಕ ಮಾಡಿದೆ. ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿರುವುದು ಹೈಕಮಾಂಡ್‌ಗೆ ಔಚಿತ್ಯ ಅನಿಸಿದೆ. ಪಕ್ಷದ ನಾಯಕತ್ವ ಬದಲಾವಣೆ ಅಥವಾ ನೇಮಕ ಮಾಡೋದು ಹೈಕಮಾಂಡ್ ಅಥವಾ ಕಾರ್ಯಕರ್ತರು ತೀರ್ಮಾನ ಮಾಡ್ತಾರೆ. ಉಳಿದ ಯಾವ ವ್ಯಕ್ತಿಯೂ ಈ ತೀರ್ಮಾನ ಮಾಡಲ್ಲ. ಹೈಕಮಾಂಡ್‌ಗೆ ಯಾವಾಗ ಯಾರು ಸರಿ ಅನ್ಸುತ್ತೋ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡುತ್ತೆ. ಈಗ ವಿಜಯೇಂದ್ರ ಸೂಕ್ತ ಅಂತ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನೂ ಯತ್ನಾಳ್ ಅವರಿಂದ ಬಹಿರಂಗ ಹೇಳಿಕೆಗಳ ವಿಚಾರ ಕುರಿತು ಮಾತನಾಡಿ, ನಮ್ಮದು ಶಿಸ್ತಿನ ಪಕ್ಷ, 71 ಲಕ್ಷ ಕಾರ್ಯಕರ್ತರು ರಾಜ್ಯದಲ್ಲಿ ಇದ್ದಾರೆ. ಎಲ್ಲರ ವ್ಯಕ್ತಿತ್ವ ಬೇರೆ ಬೇರೆ ಇರುತ್ತೆ. ಕಾಲವೇ ಸರಿಯಾದ ಉತ್ತರ ಕೊಡಲಿದೆ, ಕಾಲವೇ ಸರಿ ಮಾಡಲಿದೆ ಎಂದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು
ಇದಕ್ಕೂ ಮುನ್ನ ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ್ ದಾಸ್ ಅಗರವಾಲ್ ಹೈಕಮಾಂಡ್ ಸಂದೇಶ ತಿಳಿಸಿದರು. ಪಕ್ಷದ ಎಲ್ಲ ವಿಚಾರಗಳೂ ವರಿಷ್ಠರ ಗಮನದಲ್ಲಿದೆ. ಆಂತರಿಕ ವಿಚಾರಗಳ ಬಗ್ಗೆ ಹೈಕಮಾಂಡ್ ಗಂಭೀರವಾಗಿದೆ. ಯಾರೂ ಬಹಿರಂಗ ಹೇಳಿಕೆಗಳನ್ನು ಕೊಡಕೂಡದು, ಪಕ್ಷದ ಸಂಘಟನೆ, ಪಕ್ಷದ ಜವಾಬ್ದಾರಿಗಳತ್ತ ಗಮನ ಕೊಡಬೇಕು. ಪಕ್ಷದ ಶಿಸ್ತು ಉಲ್ಲಂಘನೆ ಯಾರು ಮಾಡ್ತಿದ್ದಾರೆ ಅನ್ನೋದು ಹೈಕಮಾಂಡ್‌ಗೆ ಗೊತ್ತಿದೆ. ಸೂಕ್ತ ಸಂದರ್ಭದಲ್ಲಿ ವರಿಷ್ಠರು ಸೂಕ್ತ ತೀರ್ಮಾನ ತಗೋತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: DCM ಆದ ಮರುದಿನವೇ ಬೇನಾಮಿ ಆಸ್ತಿ ಆರೋಪದಿಂದ ಮುಕ್ತ; 1,000 ಕೋಟಿ ಮೌಲ್ಯದ ಆಸ್ತಿ ಪವಾರ್‌ಗೆ ರಿಲೀಸ್!