ಹಿರಿತೆರೆಗೆ ಕಾಲಿಟ್ಟ ‘ರಾಮಾಚಾರಿ’ ಧಾರಾವಾಹಿ ನಟಿ ರಾಧಾ

Public TV
1 Min Read
Radha Bhagwati 2

ನ್ನಡದ ಜನಪ್ರಿಯ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಗುರುತಿಸಿಕೊಂಡಿರುವ ನಟಿ ರಾಧಾ ಭಗವತಿ  (Radha Bhagwati) ಇದೀಗ ಹಿರಿತೆರೆಗೆ ಪ್ರವೇಶ ಮಾಡಿದ್ದಾರೆ. ಸಚಿನ್ ಶೆಟ್ಟಿ (Sachin Shetty) ನಿರ್ದೇಶನದಲ್ಲಿ ಮೂಡಿ ಬರಲಿರುವ ‘ವಸಂತಕಾಲದ ಹೂಗಳು’ (VasantaKalada Hugalu) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Radha Bhagwati 1

ವಿಜಯಪುರ ಮೂಲದವರಾದ ರಾಧಾ ಭಗವತಿ,  ಟೀನೇಜ್ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಸುಮಾ ಎಂಬ ಹೆಸರಿನ ಪಾತ್ರ ಮಾಡಲಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರ ಇದಾಗಿದ್ದು, ತಾನು ಆ ಪಾತ್ರಕ್ಕೆ ಸೂಕ್ತವೆಂದು ಮನವರಿಕೆಯಾದ ನಂತರ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.

 

ಚಿತ್ರದ ಹೆಸರೇ ನನಗೆ ಆಪ್ತವೆನಿಸಿತು. ಇನ್ನು ಕಥೆ ಕೇಳಿದಾಗಲಂತೂ ಮೂರ್ನಾಲ್ಕು ದಿನಗಳ ಕಾಲ ಆ ಗುಂಗಿನಲ್ಲೇ ಇದ್ದೆ.  ಖಂಡಿತ ಚಿತ್ರ ನೋಡಿದವರಿಗೆಲ್ಲ ತಮ್ಮ ಕಾಲೇಜು ದಿನಗಳ ನೆನಪು ಮರುಕಳಿಸದೇ ಇರದು. ನಟನೆಗೆ ಹೆಚ್ಚು ಅವಕಾಶ ಇರುವಂತ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಿದೆ. ಸಿನಿಪ್ರಿಯರ ಪ್ರತಿಕ್ರಿಯೆಗೆ ಕಾತರದಿಂದ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ರಾಧಾ ಭಗವತಿ .

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article