ಕಳೆದ ವಾರವಷ್ಟೇ ಮೇಲುಕೋಟೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟಿ ರಚಿತಾ ರಾಮ್ (Rachita Ram), ಇಂದು ಮುಂಜಾನೆ ಮಂತ್ರಾಲಯಕ್ಕೂ (Mantralaya) ಭೇಟಿ ನೀಡಿ ಗುರುರಾಯರ ದರ್ಶನ ಪಡೆದಿದ್ದಾರೆ. ರಾಯರ ಗುರುವೈಭವೋತ್ಸವ (Guruvaibhavotsava) ಹಿನ್ನೆಲೆಯಲ್ಲಿ ಅವರು ಮಂತ್ರಾಲಯಕ್ಕೆ ಬಂದಿದ್ದು, ರಾಯರ ಮೂಲವೃಂದಾವನ ದರ್ಶನ ಪಡೆದರು. ನಂತರ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
ಬೆಳಿಗ್ಗೆ 5 ಗಂಟೆಗೆ ರಚಿತಾ ರಾಮ್ ಹೆಜ್ಜೆ ನಮಸ್ಕಾರ ಹಾಕಿದ್ದಾರೆ. ಸಾಮಾನ್ಯವಾಗಿ ಹರಕೆ ಹೊತ್ತವರು ಮಠದ ಪ್ರಾಂಗಣದಲ್ಲಿ ಹೆಜ್ಜೆ ನಮಸ್ಕಾರ ಹಾಕುವುದು ವಾಡಿಕೆ. ಹಾಗಾಗಿ ರಚಿತಾ ಕೂಡ ಹರಕೆ ಹೊತ್ತಿದ್ದರು ಎಂದು ಹೇಳಲಾಗುತ್ತಿದೆ. ನಟಿ ಚೂಡಿದಾರ್ ನಲ್ಲಿ ಬಂದ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡಿದೆ ಮಠದ ಸಿಬ್ಬಂದಿ. ಇದನ್ನೂ ಓದಿ: ಬ್ರಹ್ಮಚಾರಿಗಳ ಪಾದಯಾತ್ರೆಗೆ ಚಾಲನೆ ನೀಡಿದ ನಟ ಧನಂಜಯ್
Advertisement
Advertisement
ಗುರುವೈಭವೋತ್ಸವ ಹಿನ್ನೆಲೆ ಸಂಜೆ ರಚಿತಾ ರಾಮ್ ಗೆ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸನ್ಮಾನ ಕಾರ್ಯಕ್ರಮವಿದೆ. ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಹಾಗೂ ರಚಿತಾ ರಾಮ್ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳಿಂದ ಸಂಜೆ ನಡೆಯು ಕಾರ್ಯಕ್ರಮದಲ್ಲಿ ಗುರುವೈಭವೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k