ನಾನಿಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳೋಕೆ ಕಾರಣ ಉಪ್ಪಿ ಎಂದ ರಚಿತಾ ವಿರುದ್ಧ ಪ್ರಿಯಾಂಕಾ ಗರಂ

Public TV
2 Min Read
priyanka rachitha ram

ಬೆಂಗಳೂರು: ನಾನಿಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದ್ದಕ್ಕೆ ಕಾರಣ ಉಪ್ಪಿ ಎಂದು ಹೇಳಿದ ನಟಿ ರಚಿತಾ ರಾಮ್ ವಿರುದ್ಧ ಪ್ರಿಯಾಂಕಾ ಉಪೇಂದ್ರ ಗರಂ ಆಗಿದ್ದಾರೆ.

ನಟಿ ರಚಿತಾ ರಾಮ್ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ‘ಐ ಲವ್ ಯೂ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಉಪೇಂದ್ರ ಅವರ ಜೊತೆ ಹಾಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಹಾಟ್ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಕ್ಕೆ ಪದೇ ಪದೇ ಉಪ್ಪಿ ಹೆಸರನ್ನು ಎಳದು ತರುತ್ತಿದ್ದರು. ಈ ವಿಷಯಕ್ಕಾಗಿ ಪ್ರಿಯಾಂಕಾ ತಮ್ಮ ಪತಿ ಉಪೇಂದ್ರ ಪರವಾಗಿ ಬ್ಯಾಟಿಂಗ್ ಮಾಡಿ ರಚಿತಾ ರಾಮ್ ವಿರುದ್ಧ ಕೆಂಡಾಮಂಡಲ ಆಗಿದ್ದಾರೆ.

UPPI 1 1

ರಚಿತಾ ರಾಮ್ ಈ ಚಿತ್ರದ ಪ್ರಮೋಶನ್‍ನಲ್ಲಿ ಈಗ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಪ್ರಮೋಶನ್ ಮಾಡುವಾಗ ರಚಿತಾ ಅವರು ಪ್ರತಿ ಸಂದರ್ಶನದಲ್ಲೂ ನಾನಿಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳೋಕೆ ಉಪ್ಪಿ ಕಾರಣ. ಅಲ್ಲದೆ ಹಾಟ್ ದೃಶ್ಯವಿರುವ ಹಾಡಿನ ನಿರ್ದೇಶನ ಉಪೇಂದ್ರ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದರಿಂದ ಕೋಪಗೊಂಡ ಪ್ರಿಯಾಂಕಾ ಉಪೇಂದ್ರ ನಟಿ ರಚಿತಾ ರಾಮ್ ವಿರುದ್ಧ ಕಿಡಿಕಾರಿದ್ದಾರೆ.

uppi i love you

ಈ ಬಗ್ಗೆ ಪ್ರಿಯಾಂಕಾ ಉಪೇಂದ್ರ ಅವರು ಕೋಪದಿಂದ ರಚಿತಾ ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಅವರ ಹೆಸರು ಏಕೆ ಹೇಳುತ್ತಿಲ್ಲ? ಉಪೇಂದ್ರ ಪ್ರಸಿದ್ಧ ನಟ ಹಾಗೂ ನಿರ್ದೇಶಕ, ಅವರ ಬಗ್ಗೆ ಮಾತನಾಡುವಾಗ ರಚಿತಾ ಜಾಗ್ರತೆಯಿಂದ ಇರಬೇಕು. ಅಲ್ಲದೆ ರಚಿತಾ ಮೊದಲು ತಮ್ಮ ಸಿನಿಮಾದಲ್ಲಿ ತಾವು ಯಾವ ರೀತಿಯ ಅಭಿನಯ ಮಾಡಿದ್ದಾರೆ ಎಂಬುದನ್ನು ಹೇಳಿಕೊಳ್ಳಲಿ. ಅದನ್ನು ಬಿಟ್ಟು ಎಲ್ಲದಕ್ಕೂ ಉಪೇಂದ್ರ ಅವರ ಹೆಸರನ್ನು ಏಕೆ ಹೇಳಬೇಕು. ರಚಿತಾ ಚಿತ್ರರಂಗಕ್ಕೆ ಹೊಸಬರಲ್ಲ, ನಿನ್ನೆ ಮೊನ್ನೆ ಸಿನಿಮಾ ಇಂಡಸ್ಚ್ರಿಗೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

UPPI 1

ಬಳಿಕ ಮಾತನಾಡಿದ ಅವರು, ರಚಿತಾ ಕೇವಲ ಹಾಡಿನ ಚಿತ್ರೀಕರಣ ಹೇಗೆ ನಡೆಯಿತು ಎಂಬ ಬಗ್ಗೆ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳಲು ಬೇಕಾದಷ್ಟು ವಿಷಯಗಳಿವೆ, ಆದರೆ ರಚಿತಾ ಕೇವಲ ಹಾಡೊಂದರ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆ. ಹಾಡಿನ ಬಗ್ಗೆ ಆಕೆಯೆ ಅಸಹನೆಯಿದ್ದರೆ ಸಾಂಗ್ ಮಾಡಲು ಒಪ್ಪಬಾರದಿತ್ತು. ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು ಈಗ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದು ಪತಿ ಬಗ್ಗೆ ಕೆಟ್ಟದಾಗಿ ಚಿತ್ರಿಸಿದಂತಾಗಿದೆ ಎಂದು ಪ್ರಿಯಾಂಕಾ ನಟಿ ರಚಿತಾ ವಿರುದ್ಧ ಕೋಪಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *