ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಲಾಲ್ ಬಾಗ್ (Lal Bagh) ನಲ್ಲಿ ಫ್ಲವರ್ ಶೋ (Flower Show) ನಡೆಯುತ್ತಿದೆ. ಇದರಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದಕ್ಕಾಗಿ ನಟಿ ರಚಿತಾ ರಾಮ್ (Rachita Ram) ಇಂದು ಲಾಲ್ ಬಾಗ್ ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ. ಜಸ್ಟ್ ಮಿಸ್ ಎನ್ನುವಂತೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾನೆ.
ಈ ಘಟನೆ ನಡೆದಾಗ ರಚಿತಾ ರಾಮ್ ಕಾರಲ್ಲಿ ಇದ್ದರೂ, ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ಲವರ್ ಶೋನತ್ತ ತೆರಳಿದ್ದಾರೆ. ಕಾರು ನಿಲ್ಲಿಸದೇ ಕ್ಷಮೆಯಾಚನೆಯೂ ಮಾಡದೇ ಹೊರಟ ರಚಿತಾ ಹಾಗೂ ಡ್ರೈವರ್ ನಡೆಗೆ ಅಲ್ಲಿದ್ದವರು ಬೇಸರ ಮಾಡಿಕೊಂಡಿದ್ದಾರೆ.
ಆಕಸ್ಮಿಕ ಎನ್ನುವಂತೆ ಘಟನೆ ನಡೆದಿದ್ದರೂ, ರಚಿತಾ ರಾಮ್ ಕನಿಷ್ಠ ಮಾನವೀಯತೆ ದೃಷ್ಟಿಯಿಂದಾರೂ ಕಾರ್ಮಿಕನನ್ನು ಮಾತನಾಡಿಸಬೇಕಿತ್ತು ಎನ್ನುವುದು ಅಲ್ಲಿದ್ದವರ ಪ್ರತಿಕ್ರಿಯೆಯಾಗಿತ್ತು. ಆದರೆ, ರಚಿತಾ ಹಾಗೆ ಮಾಡಿಲ್ಲ ಎನ್ನುವುದೇ ಬೇಸರದ ಸಂಗತಿ.
Web Stories