Connect with us

Bengaluru City

ಮತ್ತೊಬ್ಬ ಹುಡುಗನ ಜೊತೆ ರಚಿತಾ ಅಫೇರ್? ಡೇಟಿಂಗ್ ಸುದ್ದಿ ಬಗ್ಗೆ ಗುಳಿಕೆನ್ನೆಯ ಹುಡುಗಿ ಹೇಳಿದ್ದು ಹೀಗೆ

Published

on

ಬೆಂಗಳೂರು: ಕಳೆದ ಕೆಲವು ತಿಂಗಳಿಂದ ಹರಣ್ ರಾಜ್ ಎಂಬ ಹುಡುಗ ರಚಿತಾ ಎಲ್ಲಿರುತ್ತಾರೊ ಅಲ್ಲಿರುತ್ತಾನೆ, ರಚಿತಾ ಎಲ್ಲಿ ಹೋಗುತ್ತಾರೊ ಅಲ್ಲಿ ಹಾಜರಿರುತ್ತಾನೆ ಎನ್ನುವ ಮಾತು ಕೇಳಿ ಬಂದಿತ್ತು. ಎರಡು ದಿನಗಳ ಹಿಂದೆ ನಡೆದ ಭರ್ಜರಿ ಚಿತ್ರದ ಐವತ್ತನೇ ದಿನದ ಸಂಭ್ರಮದಂದೂ ಈತ ರಚಿತಾ ಜೊತೆಗಿದ್ದ. ಹಾಗಂತ ನೋಡಿದವರು ಹೇಳುತ್ತಿದ್ದಾರೆ. ಇವರಿಬ್ಬರ ಓಡಾಟ ನೋಡಿಯೇ ಗಾಸಿಪ್ ಸುದ್ದಿ ಹರಡುವ ಸದಸ್ಯರು `ಇಬ್ಬರ ನಡುವೆ ಕುಚ್ ಕುಚ್ ಹೋ ರಹಾ ಹೈ…’ ಎಂದು ಬ್ಯಾಂಡ್ ಬಾರಿಸಿದ್ದರು. ಇದರ ಬೆನ್ನಿಗೆ ಹರಣ್‍ರಾಜ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದ್ದವು.

ಯಾರು ಈ ಹರಣ್ ರಾಜ್?
ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಹರಣ್ ರಾಜ್ ಗೆ ರ‍್ಯಾಂಕ್‌ ಸ್ಟುಡೆಂಟ್ ಕ್ರೆಡಿಟ್ ಇದೆ. ರಾಜಕಾರಣಿಯೊಬ್ಬರ ಕುಟುಂಬಕ್ಕೆ ಹತ್ತಿರದ ಸಂಬಂಧಿಯಾಗಿರುವ ಹರಣ್ ರಾಜ್‍ಗೆ ರಚಿತಾ ಮಾತ್ರ ಅಲ್ಲ, ಇನ್ನು ಕೆಲವು ನಟಿಯರ ಪರಿಚಯವೂ ಇದೆಯಂತೆ. ಮಜಾ ಅಂದರೆ ರಚಿತಾಗಿಂತ ಈತ ಮೂರು ನಾಲ್ಕು ವರ್ಷ ಚಿಕ್ಕವನೂ ಹೌದು. `ಪ್ರೀತಿಗೆ ವಯಸ್ಸು ಗಿಯಸ್ಸು ಲೆಕ್ಕಕ್ಕೆ ಬರಲ್ಲ ಬಿಡ್ರಿ’ ಎಂದು ಗಾಸಿಪ್ ಪಂಡಿತರು ಒಂದೇ ಸಾಲಿನಲ್ಲಿ ಇಬ್ಬರ ನಡುವೆ ಲವಿ ಡವ್ವಿ ನಡೆದಿದೆ ಎಂದು ಷರಾ ಬರೆದುಬಿಟ್ಟರು.

ರಚಿತಾ ಅವರಿಗೆ ಇಂಥ ಸುದ್ದಿಗಳು ಹೊಸದೇನಲ್ಲ. ಈ ಹಿಂದೆ ಭರ್ಜರಿ ಹುಡುಗ ಧ್ರುವ ಸರ್ಜಾ ಜೊತೆಗೂ ರಚಿತಾರ ನಂಟು ಬೆಸೆದಿದ್ದರು. ಇನ್ನೇನು ಎಂಗೇಂಜ್‍ಮೆಂಟ್ ಎದುರಿಗೆ ನಿಂತಿದೆ, ಮದುವೆ ಬಾಕಿ ಎನ್ನುವ ಮಾತು ಊರ ಬಾಯಿಗೆ ಎಲೆ ಅಡಿಕೆಯಾಗಿತ್ತು. ಈಗ ನೋಡಿದರೆ ಹರಣ್ ರಾಜ್ ಜೊತೆ ಗುಳಿಕೆನ್ನೆಯ ಪ್ರೇಮ ಪಲ್ಲವಿ ಚರಣ ನಡೆಯುತ್ತಿದೆ ಎನ್ನುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ರಚಿತಾ ಏನು ಮಾಡಿದರೂ `ಮಾಂಗಲ್ಯಂ ತಂತು ನಾನೇನಾ’ ಅನ್ನೋದೇ ಫೈನಲ್ ಟಚ್ ಆಗುತ್ತಿದೆ. ಇದಕ್ಕೆಲ್ಲ ಈಗ ರಚಿತಾ ರಾಮ್ ಪ್ರತಿಕ್ರಿಯೆ ನೀಡಿ ಈ ಗಾಸಿಪ್ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ರಚಿತಾ ಹೇಳಿದ್ದು ಹೀಗೆ:
ನಾನು ಆ ಇಶ್ಯೂ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಹುಡುಗ ನನ್ನ ಒಳ್ಳೆ ಸ್ನೇಹಿತ, ನನಗಿಂತ 4 ವರ್ಷ ಚಿಕ್ಕವನು. ನನ್ನ ತಂದೆ-ತಾಯಿ ಕೂಡ ತುಂಬಾ ಬೋಲ್ಡ್ ಆಗಿ ಇಂಥ ವಿಷ್ಯ ರಿಸೀವ್ ಮಾಡ್ತಾರೆ. ಆದ್ರೆ ಆ ಹುಡುಗನ ತಂದೆ-ತಾಯಿ ಯಾವ ರೀತಿ ರಿಯಾಕ್ಟ್ ಮಾಡ್ತಾರೆ? ಕಾಮನ್ ಮ್ಯಾನ್ ಇಂಥ ವಿಚಾರಗಳನ್ನು ಯೋಚನೆ ಮಾಡೋ ರೀತೀನೆ ಬೇರೆ. ಆ ಹುಡುಗ ಸಿವಿಲ್ ಇಂಜಿನಿಯರಿಂಗ್ ಸ್ಟೂಡೆಂಟ್. ಮತ್ತೆ ಆ ಹುಡುಗನಿಗೆ ಬಹಳಷ್ಟು ಹೀರೋಯಿನ್‍ಗಳ ಪರಿಚಯ ಇದೆ ಅಂತೆಲ್ಲ ಸುದ್ದಿಯಾಗಿದೆ. ಅದೆಲ್ಲ ಶುದ್ದ ಸುಳ್ಳು. ಅವ್ನಿಗೆ ನಾನು ಬಿಟ್ರೆ ಬೇರೆ ಯಾವ ಹೀರೊಯಿನ್‍ಗಳ ಪರಿಚಯ ಇಲ್ಲ. ಆ ಹುಡುಗ ನನ್ನ ಫ್ರೆಂಡ್ ರಿಲೇಟಿವ್ ಎಂದು ಹೇಳಿದ್ದಾರೆ.

ಅವ್ರ ಮನೆಯಲ್ಲಿ ಫಂಕ್ಷನ್, ಪಾರ್ಟಿ ಆದ್ರೆ ನಾವೆಲ್ಲಾ ಒಟ್ಟಿಗೆ ಸೇರ್ತಿವಿ. ಎಲ್ಲಾ ಕಡೆ ಹರಿದಾಡ್ತಿರೋ ಫೋಟೊ 1 ವರ್ಷದ ಹಳೇದು. ಆ ಫೋಟೋ ಇಟ್ಕೊಂಡು ಈ ರೀತಿ ಗಾಸಿಪ್ ಹರಡಿಸ್ತಿದ್ದಾರೆ. ನನಗೆ ಹಲವರು ಸ್ನೇಹಿತರಿದ್ದಾರೆ. ಅವ್ರೆಲ್ಲಾ ಫೋಟೊ ತೆಗೆಸಿಕೊಂಡು ಪೋಸ್ಟ್ ಮಾಡಿದ್ರೆ ನನಗೆ ಅವ್ರ ಜೊತೆ ಅಫೇರ್ ಇದೆ ಅಂತ ಆಗುತ್ತಾ? ನನಗಿಂತ 4 ವರ್ಷ ಚಿಕ್ಕ ಹುಡುಗನ ಜೊತೆ ಸುತ್ತಾಡೊಕೆ ನನಗೆ ತಲೆ ಇಲ್ವಾ? ರಚಿತಾ – ಧ್ರುವಾ ಸರ್ಜಾ ಮದುವೆ ಆಗ್ತಾರೆ ಅಂತ ಗಾಸಿಪ್ ಹಬ್ಬಿಸಿದ್ರು. ಇನ್ನು ಎಷ್ಟು ಜನ ನನ್ನ ಕೋ-ಸ್ಟಾರ್‍ಗಳ ಜೊತೆ ನನಗೆ ಮದುವೆ ಮಾಡಿಸ್ತಾರೊ ಗೊತ್ತಿಲ್ಲ. ಆದ್ರೆ ಆ ಹುಡುಗನ ಪರಿಸ್ಥಿತಿ ಯೋಚಿಸಿದ್ರೆ ಭಯ ಆಗುತ್ತೆ. ನನ್ನ ಮದುವೆ ಬಗ್ಗೆ ಇನ್ನೂ ಸೀರಿಯಸ್ ಆಗಿ ಯೋಚನೆ ಮಾಡಿಲ್ಲ. ಎಲ್ಲರಂತೆ ನಾನೂ ಮದುವೆ ಆಗ್ತೀನಿ. ಹುಡುಗ ಫೈನಲ್ ಆದ್ಮೇಲೆ ಎಲ್ಲರಿಗೂ ಹೇಳ್ತಿನಿ. ಆಂಜನೇಯನ ಆಣೆಗೂ ನಾನು ಯಾವುದೇ ಹುಡುಗನ ಜೊತೆ ಡೇಟ್ ಮಾಡ್ತಿಲ್ಲ ಎಂದು ರಚಿತಾ ರಾಮ್ ಹೇಳುವ ಮೂಲಕ ಗಾಸಿಪ್ ಸುದ್ದಿಗೆ ಫುಲ್‍ಸ್ಟಾಪ್ ಹಾಕಿದರು.

ಇಲ್ಲಿಗೆ ರಚಿತಾ ರಾಮ್ ನಕಲಿ ಪ್ರೇಮ ಪುರಾಣ ಈ ರೀತಿ ಮುಕ್ತಾಯವಾಗಿದೆ. ಸಿನಿಮಾ ರಂಗದಲ್ಲಿ ಇದು ಕಾಮನ್. ಒಂದು ಜೋಡಿ ಕಂಟಿನ್ಯೂ ಆಗಿ ಎರಡು ಮೂರು ಸಿನಿಮಾಗಳಲ್ಲಿ ನಟಿಯಾದ ತಕ್ಷಣ ಅವರ ನಡುವೆ ಲಿಂಕ್ ಹಚ್ಚುತ್ತಾರೆ, ಸಿನಿಮಾಕ್ಕೆ ಸಂಬಂಧಪಡದ ವ್ಯಕ್ತಿ ಜೊತೆಗಿದ್ದರೂ ಗಂಟು ಹಾಕುತ್ತಾರೆ. ಇದಕ್ಕೆಲ್ಲ ರಚಿತಾ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಹಾಗಂತ ಅವರೇ ಹೇಳುತ್ತಾರೆ. ಆದರೆ ನೀವು ತಲೆ ಕೆಡಿಸಿಕೊಂಡರೂ ಬಿಟ್ಟರೂ, ನಾವು ಮಾತ್ರ ಆಗಾಗ ಇಂಥ ಹುಳವನ್ನು ಎಲ್ಲರ ತಲೆಗೆ ಬಿಡುತ್ತಿರುತ್ತೇವೆ ಎನ್ನುತ್ತಿದೆ ಬಣ್ಣದ ಲೋಕದ ಬೆರಕಿ ದೇಹಗಳು. ಎಲುಬಿಲ್ಲದ ನಾಲಿಗೆಗೆ ನೀತಿ ಕಲಿಸಲು ಸಾಧ್ಯವೆ?

 

Click to comment

Leave a Reply

Your email address will not be published. Required fields are marked *