ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.

ಬೆಂಗಳೂರಿನಿಂದ (Bengaluru) ನೂರಾರು ಆಟೋ ಚಾಲಕರು ಆರ್.ಆರ್ ನಗರದ ಅವರ ನಿವಾಸದ ಬಳಿ ಜಮಾಯಿಸಿ ರಚಿತಾರನ್ನ ಅಫಿಷಿಯಲ್ ಆಗಿ ಚಾಲಕರ ಸಂಘದ (Auto Drivers Association) ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಆಟೋ ಎದುರು ಆಟೋ ಚಾಲಕರ ವಸ್ತ್ರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್. ಈ ವಿಚಾರವನ್ನ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ರಚಿತಾ. ಅನೇಕ ಮಹಿಳಾ ಆಟೋ ಚಾಲಕಿಯರೂ ಸೇರಿದಂತೆ ಆಟೋ ಚಾಲಕರು ರಚಿತಾ ಮನೆ ಮುಂದೆ ಭರ್ಜರಿಯಾಗಿ ಜಮಾಯಿಸಿದ್ದರು. ಆಟೋ ಚಾಲಕಿಯರ ಜೊತೆ ತಾವೂ ಖಾಕಿ ಶರ್ಟ್ ಧರಿಸಿಯೇ ನಿಂತಿದ್ದರು ರಚಿತಾ. ಇದೀಗ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿ.

