‘ಅಯೋಗ್ಯ2’ಗೆ ಮುಹೂರ್ತ ಫಿಕ್ಸ್- ಮತ್ತೆ ಒಂದಾದ ಸಕ್ಸಸ್ ಜೋಡಿ ರಚಿತಾ ರಾಮ್, ಸತೀಶ್ ನಿನಾಸಂ

Public TV
1 Min Read
rachita ram

ಸ್ಯಾಂಡಲ್‌ವುಡ್‌ನ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ (Rachita Ram) ಹಾಗೂ ಸತೀಶ್ ನಿನಾಸಂ (Satish Ninasam) ಮತ್ತೆ ಒಂದಾಗಿದ್ದಾರೆ. ‘ಅಯೋಗ್ಯ’ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಅಯೋಗ್ಯ ಸಿನಿಮಾದ ಪಾರ್ಟ್ 2 (Ayogya 2) ಸೆಟ್ಟೇರುತ್ತಿದ್ದು, ಈಗಾಲೇ ಮುಹೂರ್ತಕ್ಕೆ ಡೇಟ್ ಫಿಕ್ಸ್ ಆಗಿದೆ.

RACHITA RAM

6 ವರ್ಷದ ಹಿಂದೆ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ‌ ಸಿನಿಮಾ ಪ್ರೇಮಿಗಳು ಶಹಬ್ಬಾಸ್ ಎಂದಿದ್ದರು. ಈಗ ಮತ್ತದೇ ತಂಡ ‘ಅಯೋಗ್ಯ 2’ ಸಿನಿಮಾ ಮೂಲಕ‌ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ‘ಅಯೋಗ್ಯ’ ಸಿನಿಮಾದ ಹಾಡುಗಳು ಕನ್ನಡ ಸಿನಿಮಾರಂಗದಲ್ಲಿಯೇ ಹೊಸ ಇತಿಹಾಸ ಬರೆದಿತ್ತು. ಈಗ ಮತ್ತಷ್ಟು ನಿರೀಕ್ಷೆಗಳೊಂದಿಗೆ ಚಿತ್ರತಂಡ ಹೊಸ ದಾಖಲೆ ಸೃಷ್ಟಿಸಲು‌ ಸಜ್ಜಾಗಿದೆ. ಇನ್ನು ‘ಅಯೋಗ್ಯ 2’ ಸಿನಿಮಾ ಡಿಸೆಂಬರ್ 11ರಂದು ಸೆಟ್ಟೇರಲಿದ್ದು, ಮಹೇಶ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಎಂ ಮುನೇಗೌಡ ‘ಅಯೋಗ್ಯ 2’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ‌‌ ಇರಲಿದೆ.

rachita ram 1

ರಚಿತಾ ರಾಮ್, ಸತೀಶ್ ನಿನಾಸಂ‌, ರವಿಶಂಕರ್, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ‘ಅಯೋಗ್ಯ’ ಸಿನಿಮಾದಲ್ಲಿ ಅಭಿನಯಿಸಿದ ಬಹುತೇಕ ಕಲಾವಿದರು ಅಯೋಗ್ಯ- 2ನಲ್ಲಿ ಮುಂದುವರೆಯುತ್ತಿರುವುದು ವಿಶೇಷ. ಇದನ್ನೂ ಓದಿ:ಸಂಸತ್ ಲೈಬ್ರರಿಯಲ್ಲಿ `ಸಾಬರಮತಿ ರಿಪೋರ್ಟ್‌’ ಸಿನಿಮಾ ವೀಕ್ಷಿಸಿದ ಮೋದಿ

Rachita Ram 1

ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಅಂದರೆ ನಿರೀಕ್ಷೆ ಮತ್ತು ಕುತೂಹಲ ಕೊಂಚ ಜಾಸ್ತಿನೆ ಇರಲಿದೆ. ಹಾಗಾಗಿ ಅಯೋಗ್ಯ-2 ಕೂಡ ಸೆಟ್ಟೇರುವುದಕ್ಕೂ ಮೊದಲೇ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಪಾರ್ಟ-2 ಹೇಗಿರಲಿದೆ ರವಿ ಶಂಕರ್ ಮತ್ತು ಸತೀಶ್ ನಡುವಿನಕಾದಾಟ, ಜಿದ್ದಾಜಿದ್ದಿ ಹಾಗೆ ಮುಂದುವರೆಯಲಿದಿಯಾ ಕಾದುನೋಡಬೇಕು.

Share This Article