ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಇಂದು 30ನೇ ವರ್ಷದ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಚ್ಚು ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ನೆಚ್ಚಿನ ನಟಿಗೆ ಶುಭ ಹಾರೈಸಿದ್ದಾರೆ. ಅಭಿಮಾನಿಗಳ ಜೊತೆ ರಚಿತಾ ಬೆರೆತು ಅವರೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು ರಚಿತಾ ರಾಮ್. ಆನಂತರ ಸಿನಿಮಾ ರಂಗಕ್ಕೆ ಬಂದರು. ಅನೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಇವರದ್ದೇ ಹೆಸರಿನಲ್ಲಿ ಲವ್ ಯೂ ರಚ್ಚು ಸಿನಿಮಾ ಕೂಡ ಮೂಡಿ ಬಂದಿತ್ತು. ಈ ಸಿನಿಮಾದಲ್ಲಿ ರಚಿತಾ ಅವರೇ ನಾಯಕಿಯಾಗಿ ನಟಿಸಿದ್ದರು. ಸಿನಿಮಾಗೆ ಪ್ರೇಕ್ಷಕರು ಅತ್ಯುತ್ತಮ ಪ್ರತಿಕ್ರಿಯೆ ಕೂಡ ನೀಡಿದ್ದರು. ಇದನ್ನೂ ಓದಿ:ಆರು ವರ್ಷಗಳ ಬಳಿಕ ಜೀ ಪಿಕ್ಚರ್ಸ್ ನಲ್ಲಿ ಸೂಪರ್ ಹಿಟ್ ‘ರಾಮಾ ರಾಮಾ ರೇ’ ಸಿನಿಮಾ
ಉಪೇಂದ್ರ (Upendra) ನಟನೆಯ ಐ ಲವ್ ಯೂ, ಅಜಯ್ ರಾವ್ (Ajay Rao) ಜೊತೆ ಲವ್ ಯೂ ರಚ್ಚು ಸಿನಿಮಾಗಳಲ್ಲಿ ಸಖತ್ ಗ್ಲಾಮರೆಸ್ ಆಗಿ ಕಾಣಿಸಿಕೊಂಡಿದ್ದ ಅವರು, ಈ ಕಾರಣಕ್ಕಾಗಿ ಸುದ್ದಿ ಕೂಡ ಆಗಿದ್ದರು. ಅದರಲ್ಲೂ ಐ ಲವ್ ಯೂ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಪಾತ್ರ ನಿರ್ವಹಿಸಿ ಕಣ್ಣೀರಿಟ್ಟಿದ್ದರು. ಈ ರೀತಿಯ ಪಾತ್ರಗಳನ್ನು ನಾನು ಮಾಡಲಾರೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಮೊನ್ನೆಯಷ್ಟೇ ಇವರ ನಟನೆಯ ಮಾನ್ಸೂನ್ ರಾಗ (Monsoon Raga) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅವರು ವೇಶ್ಯೆಯ ಪಾತ್ರವನ್ನು ಮಾಡಿದ್ದಾರೆ. ಈ ಪಾತ್ರದ ಅಭಿನಯಕ್ಕಾಗಿ ನೋಡುಗರಿಗೆ ಮೆಚ್ಚುಗೆ ಕೂಡ ಆಯಿತು. ಈ ಸಿನಿಮಾ ಮೂಲಕ ಎಂತಹ ಸವಾಲಿನ ಪಾತ್ರವಿದ್ದರೂ ನಾನು ಮಾಡಲು ಸಿದ್ಧ ಎನ್ನುವುದನ್ನು ಅವರು ನಿರೂಪಿಸಿದ್ದಾರೆ.