ಮುಂಬೈ: 2023ರ ವಿಶ್ವಕಪ್ (2023 World Cup) ಟೂರ್ನಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದ್ದು, ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಇನ್ನೂ ಸೋಲಿನ ಹೊಣೆಹೊತ್ತು ಬಾಬರ್ ಆಜಂ (Babar Azam) ಪಾಕ್ ತಂಡದ ಎಲ್ಲಾ ಸ್ವರೂಪದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಬೆಂಗಳೂರು ಮೂಲದ ಹಾಗೂ ಕಿವೀಸ್ ಸ್ಟಾರ್ ಪ್ಲೇಯರ್ ರಚಿನ್ ರವೀಂದ್ರ (Rachin Ravindr) ಪ್ರತಿಕ್ರಿಯಿಸಿದ್ದಾರೆ.
You’re an outstanding batsman, Stepping down from captaincy is a wise move; now, without the added pressure, you can focus on showcasing your incredible talent and making wonders as a player.#BabarAzam https://t.co/Wo4LKH7Ch5
— Rachin Ravindra (@RachinRavindraa) November 16, 2023
Advertisement
ಈ ಬಗ್ಗೆ ಸೋಶಿಯಲ್ ಮೀಡಿಯಾ X ಖಾತೆಯಲ್ಲಿ ಬರೆದುಕೊಂಡಿರುವ ರಚಿನ್ ರವೀಂದ್ರ, ನೀವು ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್ ನಾಯಕತ್ವದಿಂದ ಕೆಳಗಿಳಿಯುವುದು ಬುದ್ಧಿವಂತಿಕೆಯ ಲಕ್ಷಣ. ಈಗ ನಿಮಗೆ ಹೆಚ್ಚಿನ ಒತ್ತಡವಿಲ್ಲ. ನಿಮ್ಮ ಅದ್ಭುತ ಪ್ರತಿಭೆಯನ್ನ ಪ್ರದರ್ಶಿಸಲು ಮತ್ತು ಆಟಗಾರನಾಗಿ ಸಾಧನೆಗಳನ್ನು ಮಾಡಲು ಗಮನಹರಿಸಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಶಮಿ.!
Advertisement
Advertisement
ಬಾಬರ್ ಆಜಂ ನವೆಂಬರ್ 15 ರಂದು ಪಾಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಸ್ವರೂಪದ (ಟೆಸ್ಟ್, ಏಕದಿನ, ಟಿ20) ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು. ಈ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನೂ ಹಂಚಿಕೊಂಡಿದ್ದರು.
Advertisement
ಅಫ್ರಿದಿಗೆ ಟಿ20 ನಾಯಕನ ಪಟ್ಟ: ಬಾಬರ್ ಆಜಂ ಮೂರು ಸ್ವರೂಪದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವೇಗಿ ಶಾಹೀನ್ ಶಾ ಅಫ್ರಿದಿ (Shaheen Shah Afridi) ಅವರಿಗೆ ಟಿ20 ತಂಡದ ನಾಯಕತ್ವದ ಹೊಣೆ ನೀಡಿದೆ. ಶಾನ್ ಮಸೂದ್ (Shan Masood) ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ಕ್ರಿಕೆಟ್ ತಂಡಕ್ಕೆ ಶೀಘ್ರದಲ್ಲೇ ನಾಯಕನನ್ನ ನೇಮಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 34 ವರ್ಷದ ಶಾನ್ ಮಸೂದ್ ಪಾಕಿಸ್ತಾನ ತಂಡದ ಪರ 30 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 28.52 ಸರಾಸರಿಯಲ್ಲಿ 1,597 ರನ್ ಗಳಿಸಿದ್ದಾರೆ. 156 ರನ್ ಶಾನ್ ಮಸೂದ್ ಅವರ ಗರಿಷ್ಠ ಸ್ಕೋರ್ ಆಗಿದ್ದಾರೆ. ಇನ್ನೂ ಶಾಹೀನ್ ಶಾ ಅಫ್ರಿದಿ ಅವರು 53 ಏಕದಿನ ಪಂದ್ಯ ಮತ್ತು 52 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 104 ರನ್ ಗಳಿಸಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.
ಬಾಬರ್ ಹೇಳಿಕೆಯಲ್ಲಿ ಏನಿತ್ತು?
2019ರಲ್ಲಿ ಪಾಕಿಸ್ತಾನ ತಂಡವನ್ನು (Pakistan Cricket Team) ಮುನ್ನಡೆಸಲು ನಾನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನಿಂದ ಕರೆ ಸ್ವೀಕರಿಸಿದ ಕ್ಷಣವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಕಳೆದ 4 ವರ್ಷಗಳಲ್ಲಿ ನಾನು ಮೈದಾನದಲ್ಲಿ ಮತ್ತು ಮೈದಾನದ ಹೊರೆಗೆ ಅನೇಕ ಏಳು-ಬೀಳುಗಳನ್ನು ಅನುಭವಿಸಿದ್ದೇನೆ. ಆದಾಗ್ಯೂ ಕ್ರಿಕೆಟ್ ಜಗತ್ತಿನಲ್ಲಿ ತುಂಬು ಹೃದಯದಿಂದ ಅದೇ ಉತ್ಸಾಹ ಮತ್ತು ಪಾಕಿಸ್ತಾನದ ಘನತೆ ಉಳಿಸಿಕೊಳ್ಳುವ ಸದುದ್ದೇಶ ಹೊಂದಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್ ಸೆಮಿಫೈನಲ್ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ
ಸಹ ಆಟಗಾರರು, ಕೋಚ್‌ಗಳು ಮತ್ತು ನಿರ್ವಹಣಾ ಮಂಡಳಿಯ ಸಾಮೂಹಿಕ ಪ್ರಯತ್ನದ ಫಲವಾಗಿ ವೈಟ್‌ಬಾಲ್ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಸ್ಥಾನವನ್ನೂ ತಲುಪಿದ್ದೆ. ಈ ಜರ್ನಿ ಸಮಯದಲ್ಲಿ ನನಗೆ ಬೆಂಬಲ ನೀಡಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಭಾವುಕವಾಗಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾನಿಂದು ಪಾಕಿಸ್ತಾನ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಮೂರು ಮಾದರಿಗಳಲ್ಲಿ ಆಟಗಾರನಾಗಿ ಪಾಕಿಸ್ತಾನ ತಂಡ ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸುತ್ತೇನೆ. ಇಷ್ಟು ದಿನ ಈ ಮಹತ್ವದ ಜವಾಬ್ದಾರಿ ನನಗೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಪ್ರಾಮಾಣಿಕ ಧನ್ಯವಾದ ತಿಳಿಸುತ್ತೇನೆ ಎಂಬುದಾಗಿ ತಮ್ಮ ಹೇಳಿಕೆಯಲ್ಲಿ ತಿಳಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲೊಂದು ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ
2023ರ ವಿಶ್ವಕಪ್ ಟೂರ್ನಿಯಲ್ಲಿ 9ರ ಪೈಕಿ ಕೇವಲ 4 ಲೀಗ್ ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತು. ಇದರಿಂದ ಲೀಗ್ ಸುತ್ತಿನಲ್ಲೇ ಹೊರಬಿದ್ದಿತು. ಬಾಬರ್ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್‌ರೇಟ್‌ನಲ್ಲಿ 320 ರನ್ ಗಳಿಸಿದ್ದರು.