ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಬೆಂಗಳೂರು ಮೂಲದ ನ್ಯೂಜಿಲೆಂಡಿನ (New Zealand) ಆಟಗಾರ ರಚಿನ್ ರವೀಂದ್ರ (Rachin Ravindra) ಉತ್ತಮ ಲಯದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಮೂರು ಶತಕ ಸಿಡಿಸಿರುವ ಅವರು ತಮ್ಮ ಹೆಸರಿನ ಮೂಲಕ ಚರ್ಚೆಯಲ್ಲಿದ್ದರು. ಆದರೆ ಈಗ ಈ ಹೆಸರು ಇಟ್ಟಿದ್ದು ಹೇಗೆ ಎಂಬುದರ ಬಗ್ಗೆ ತಂದೆ ಪ್ರತಿಕ್ರಿಯಿಸಿದ್ದಾರೆ.
ಭಾರದ ಬ್ಯಾಟಿಂಗ್ ದಿಗ್ಗಜರಾದ ರಾಹುಲ್ ದ್ರಾವಿಡ್ (Rahul Dravid) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರಿನ ಮೊದಲ ಅಕ್ಷರಗಳಿಂದ ಸಂಯೋಜನೆಗೊಂಡು ʼರಚಿನ್ʼ ಎಂದು ನಾಮಕರಣ ಮಾಡಲಾಗಿದೆ ಎಂಬ ಹೆಸರು ಹಿಂದೆ ವರದಿಯಾಗಿತ್ತು. ಇದನ್ನೂ ಓದಿ: ನಾನು 100% ಕಿವೀಸ್ ಎಂದ ಬೆಂಗಳೂರು ಯುವಕ ರಚಿನ್ ರವೀಂದ್ರ
Advertisement
Advertisement
Advertisement
ಈ ಬಗ್ಗೆ ತಂದೆ ರವಿ ಕೃಷ್ಣಮೂರ್ತಿ (Ravi Krishnamurthy) ಈಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಗನ ಹೆಸರಿಗೂ ಸಚಿನ್-ದ್ರಾವಿಡ್ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾರೆ.
Advertisement
ನನ್ನ ಪತ್ನಿ ರಚಿನ್ ಹೆಸರನ್ನು ಸೂಚಿಸಿದ್ದಳು. ನಾವು ಆ ಹೆಸರಿನ ಬಗ್ಗೆ ಹೆಚ್ಚು ಚರ್ಚೆ ಮಾಡಲಿಲ್ಲ.ಯಾಕೆಂದರೆ ಆ ಹೆಸರು ಚೆನ್ನಾಗಿತ್ತು. ಉಚ್ಚರಿಸಲು ಸುಲಭವಾಗಿತ್ತು ಮತ್ತು ಚಿಕ್ಕದಾಗಿತ್ತು. ಈ ಕಾರಣದಿಂದ ಮಗನಿಗೆ ಆ ಹೆಸರನ್ನೇ ನಾಮಕರಣ ಮಾಡಿದ್ದೆವು ಎಂದು ವಿವರಿಸಿದರು. ಇದನ್ನೂ ಓದಿ: ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ – ವೀಡಿಯೋ ವೈರಲ್
ಕೆಲವು ವರ್ಷಗಳ ನಂತರ ಈ ಹೆಸರು ರಾಹುಲ್ ಮತ್ತು ಸಚಿನ್ ಅವರ ಹೆಸರುಗಳ ಮಿಶ್ರಣವಾಗಿದೆ ಎಂಬುದು ಗೊತ್ತಾಯಿತು. ನಮ್ಮ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡುವ ಉದ್ದೇಶದಿಂದ ಇಬ್ಬರ ಹೆಸರನ್ನು ಸಂಯೋಜಿಸಿ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಶ್ವಕಪ್ ಕ್ರಿಕೆಟ್‌ನಲ್ಲಿ ರಚಿನ್ ರವೀಂದ್ರ 9 ವಿಕೆಟ್‌ಗಳಿಂದ 565 ರನ್ ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪೈಕಿ ಮೂರನೇ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಒಟ್ಟು 52 ಬೌಂಡರಿ ಸಿಡಿಸಿದ ರಚಿನ್ 17 ಸಿಕ್ಸ್ ಹೊಡೆದಿದ್ದಾರೆ.