ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರ ಹೆಸರನ್ನು ಇಂದು (ಮಾ.27)ರಂದು ನಾಮಕರಣ ಮಾಡಲಾಯಿತು. ಸಿಎಂ ಬೊಮ್ಮಾಯಿ ಅವರು `ಅಂಬರೀಶ್ ರಸ್ತೆ’ (Ambareesh Road) ಅನ್ನು ಉದ್ಘಾಟನೆ ಮಾಡಿದರು.
Advertisement
ಸಿಲಿಕಾನ್ ಸಿಟಿಯ ಜಂಕ್ಷನ್‌ಗಳನ್ನ ಪಾದಾಚಾರಿಗಳಿಗೆ ಸುರಕ್ಷಿತವಾಗಿಸಲು ಬೃಹತ್ ಬೆಂಗಳೂರು ಪಾಲಿಕೆಯು `ಸುರಕ್ಷ 75 ಮಿಷನ್ 2023′ ಅನ್ನು ಲೋಕಾರ್ಪಣೆಗೊಳಿಸಿದ ಸಿಎಂ ಇದೇ ವೇಳೆ ಶಿವಾಜಿನಗರದ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಿದರು.
Advertisement
Advertisement
ಸಿಎಂ ಬೊಮ್ಮಾಯಿ (Cm Bommai) ಮಾತನಾಡಿ, ಕರ್ನಾಟಕದ ಜನತೆಯ ಮನಸ್ಸನ್ನ ಗೆದ್ದಂತಹ ನೇರ ದಿಟ್ಟ ನಿರಂತರ ಶ್ರೀಮಾನ್ ಅಂಬರೀಶ್ ಅವರ ನೆನಪಿಗಾಗಿ ಇವತ್ತು ರೇಸ್ ಕೋರ್ಸ್ ರಸ್ತೆಯನ್ನ ಅಂಬರೀಶ್ ಅವರ ಹೆಸರಿನಲ್ಲಿ ಅತ್ಯಂತ ಸಂತೋಷದಿಂದ ನಾಮಕರಣ ಮಾಡಿದ್ದೇವೆ. ಅಂಬರೀಶ್ ಅವರು ರೇಸ್ ಕೋರ್ಸ್ ರೋಡ್ ಹೆಚ್ಚು ಓಡಾಡಿದ ಸ್ಥಳವಾಗಿದೆ. ಎಲ್ಲಾ ಅಭಿಮಾನಿಗಳ ಒತ್ತಾಸೆ ಮೇರೆಗೆ ಇವತ್ತು ಅಂಬರೀಶ್ ಹೆಸರನ್ನ ಇಟ್ಟಿದ್ದೇವೆ. ಹಲವು ಪ್ರತಿಭೆ ಇರುವ ವ್ಯಕ್ತಿತ್ವ ಅವರದ್ದು, ಸಿನಿಮಾದಲ್ಲಿ ಸಹಜವಾಗಿ ನಟನೆ ಮಾಡುತ್ತಿದ್ದರು. ಜನರನ್ನ ಹಿಡಿದಿಟ್ಟುಕೊಳ್ಳುವ ವ್ಯಕ್ತಿತ್ವ ಇತ್ತು. ಅವರಿಗೆ ರೀಲ್ ಲೈಫ್ ಮತ್ತು ರಿಯಲ್ ಲೈಫ್ ವ್ಯತ್ಯಾಸ ಇಲ್ಲ. ನೇರವಾಗಿ ಮಾತನಾಡುವ ವ್ಯಕ್ತಿತ್ವ ಅವರದ್ದು, ಕ್ರೀಡೆಯಲ್ಲೂ ಪ್ರತಿಭೆಯಿತ್ತು.
Advertisement
ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ವಸತಿ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಅಂಬರೀಶ್ ಗುಡುಗಿದ್ದರು. ಅವರು ಎಂದೂ ಅಧಿಕಾರದ ಹಿಂದೆ ಹೋದವರಲ್ಲ. ಅವರ ಹಿಂದೆ ಅಧಿಕಾರ ಬಂದಿದೆ ಎಂದು ಅಂಬರೀಶ್ ಸಿಎಂ ಮಾತನಾಡಿದರು. ಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ಕೊಟ್ಟಿದ್ದರು. ಅಧಿಕಾರ ಅವರನ್ನು ಹುಡುಕಿ ಬರುತ್ತಿತ್ತು. ನನಗೆ ಇವತ್ತು ಬಹಳ ಸಂತೋಷವಾಗಿದೆ. ಅವರು ನನ್ನ ಮಿತ್ರರು, ಹಲವಾರು ಬಾರಿ ಭೇಟಿಯಾಗಬೇಕು ಅಂದಾಗ ಅಲ್ಲೇ ರೇಸ್ ಕೋರ್ಸ್ನಲ್ಲಿ ಇರ್ತಿನಿ ಬಾರಯ್ಯ ಎನ್ನುತ್ತಿದ್ದರು. ಅವರ ಹೆಸರನ್ನ ಬಿಟ್ಟು ಬೇರೆ ಯಾರ ಹೆಸರು ಕೂಡ ಈ ರಸ್ತೆಗೆ ಸೂಕ್ತವಲ್ಲ. ಅವರ ಕುಟುಂಸ್ಥರು ಒಪ್ಪಿ ಬಂದಿದ್ದಾರೆ ಧನ್ಯವಾದಗಳು. ಅವರ ಸ್ಮಾರಕ ಕೂಡ ಉದ್ಘಾಟನೆ ಮಾಡ್ತೀವಿ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದು ಸಿಎಂ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್ (Sumalatha Ambareesh), ಅಭಿಷೇಕ್ ಅಂಬರೀಶ್, ರಾಕ್‌ಲೈನ್ ವೆಂಕಟೇಶ್, ರಾಘವೇಂದ್ರ ರಾಜ್‌ಕುಮಾರ್, ಕಂದಾಯ ಸಚಿವರಾದ ಆರ್.ಅಶೋಕ್, ಡಾ.ಕೆ ಸುಧಾಕರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.