ಚಾಮರಾಜನಗರ: ಮೊಲವನ್ನು ಬೇಟೆಯಾಡಿ ಮಾಂಸ ಬೇಯಿಸುತ್ತಿದ್ದ ವೇಳೆ ಇಬ್ಬರು ಬೇಟೆಗಾರರು ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಸಂರಕ್ಷಿತಾರಣ್ಯದ ಕುರುಬರಹುಂಡಿ ಗ್ರಾಮದಲ್ಲಿ ನಡೆದಿದೆ.
ಅಣ್ಣೂರುಕೇರಿ ಗ್ರಾಮದ ಮಹೇಶ್ (35) ಹಾಗೂ ಕುಮಾರ್(27) ಬಂಧಿತ ಆರೋಪಿಗಳು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕರೆ ವಲಯ ವ್ಯಾಪ್ತಿಗೆ ಒಳಪಡುವ ಕುರುಬರಹುಂಡಿ ಮಡಿವಾಳಪ್ಪ ಅವರ ಜಮೀನಿನ ಹತ್ತಿರ ಮೊಲವೊಂದನ್ನು ಬೇಟೆಯಾಡಿದ್ದಾರೆ. ಮಾಂಸ ಬೇಯಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ದೇವಿ ಸೈಕಲ್, ಆನೆ ಮೇಲೆ ಬರುವುದಿಲ್ಲ, ಕಮಲದಲ್ಲಿ ಕುಳಿತು ಬರುತ್ತಾಳೆ: ರಾಜನಾಥ್ ಸಿಂಗ್
ಬಂಧಿತರಿಂದ ಬೈಕ್, ನಾಡ ಬಂದೂಕು, ತಲೆ ಬ್ಯಾಟರಿ, ಬೇಯಿಸಿದ ಮಾಂಸ, ಪಾತ್ರೆಗಳನ್ನು ವಶಪಡಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.