ಧನುಷ್‌ ನಟನೆಯ ‌’ರಾಯನ್‌’ ಚಿತ್ರದ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

Public TV
1 Min Read
dhanush

ಕಾಲಿವುಡ್‌ನಲ್ಲಿ ನಟ, ಗಾಯಕ, ನಿರ್ದೇಶಕನಾಗಿ ಗಮನ ಸೆಳೆದಿರುವ ಧನುಷ್ ಅವರು ‘ರಾಯನ್’ (Raayan) ಚಿತ್ರದ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈ ಸಿನಿಮಾ ರಿಲೀಸ್ ಆಗೋದು ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆ ಇದೀಗ ಉತ್ತರ ಸಿಕ್ಕಿದೆ.

Dhanush 2

ಈ ಬಾರಿ ಥ್ರಿಲರ್ ಕಥೆಯನ್ನು ಧನುಷ್ (Dhanush) ಹೊತ್ತಿದ್ದಾರೆ. ಎಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ತಿದ್ದಾರೆ. ಸದ್ಯ ಮೇ 9ರಂದು ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡುವುದಾಗಿ ಧನುಷ್ ಅನೌನ್ಸ್ ಮಾಡಿದ್ದಾರೆ. ಅಂದಹಾಗೆ, ‘ರಾಯನ್’ ಚಿತ್ರ ಜೂನ್‌ನಲ್ಲಿ ರಿಲೀಸ್ ಆಗಲಿದೆ. ಇದನ್ನೂ ಓದಿ:‘ಜಟ್ಟ’ ಖ್ಯಾತಿಯ ನಿರ್ದೇಶಕನ ಹೊಸ ಚಿತ್ರಕ್ಕೆ ರಾಗಿಣಿ ನಾಯಕಿ

 

View this post on Instagram

 

A post shared by SJ Suryah (@iam__sjsuryah)

ಈಗ ರಿಲೀಸ್‌ ಆಗಿರುವ ‘ರಾಯನ್ ‘ಸಿನಿಮಾದ ಪೋಸ್ಟರ್‌ನಲ್ಲಿ ಧನುಷ್‌ ರಗಡ್‌ ಲುಕ್‌ ಕೊಟ್ಟಿದ್ದಾರೆ. ಧನುಷ್‌ ಬೆನ್ನ ಹಿಂದೆ ರಾವಣನ ಅವತಾರ ಕಾಣುತ್ತಿದೆ. ಇನ್ನೂ ಈ ಚಿತ್ರದಲ್ಲಿ ಎಸ್ ಜೆ ಸೂರ್ಯ, ಸಂದೀಪ್ ಕಿಶನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್, ಪ್ರಕಾಶ್ ರಾಜ್ ನಟಿಸಿದ್ದಾರೆ. ನಿತ್ಯಾ ಮೆನನ್ (Nithya Menon) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

2017ರಲ್ಲಿ ‘ಪಾ ಪಾಂಡಿ’ ಚಿತ್ರವನ್ನು ಧನುಷ್ ನಿರ್ದೇಶನ ಮಾಡಿದ್ದರು. ಧನುಷ್‌ಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಕೂಡ ಒಲಿದು ಬಂದಿತ್ತು.

Share This Article