ಫ್ರೆಂಡ್ಸ್ ಗ್ಯಾಂಗ್ ಜೊತೆ ರಾಯನ್ ರಾಜ್‌ ಸರ್ಜಾ

Public TV
1 Min Read
raayan raj sarja

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೆಘನಾ ರಾಜ್ ಅವರು ತಮ್ಮ ಮಗ ರಾಯನ್ ರಾಜ್ ಸರ್ಜಾ ಫೋಟೋವನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಅವರು ರಾಯನ್ ತನ್ನ ಗೆಳೆಯರ ಜೊತೆಗೆ ಕುಳಿತು ಆಟವಾಡುತ್ತಿರುವ ವಿಶೇಷವಾದ ಫೋಟೋವನ್ನು ಶೇರ್ ಮಾಡಿದ್ದಾರೆ.

Raayan Raj sarja 2

ಮಕ್ಕಳನ್ನು ಪೋಸ್ ನೀಡುವಂತೆ ಮಾಡುವುದು ತುಂಬಾ ಕಷ್ಟ ಆದರೆ ಇದು ತಾಯಂದಿರಿಗೆ ಇಷ್ಟ. ಈ ಮಾತನ್ನು ತಾಯಂದಿರೆಲ್ಲ ಒಪ್ಪುತ್ತೀರಾ..? ಹುಟ್ಟುಹಬ್ಬದ ಶುಭಾಶಯಗಳು ಧಕ್ಷ್ ಎಂದು ಈ ಮುದ್ದಾದ ಫೋಟೋಗಳಿಗೆ ಮೇಘನಾ ರಾಜ್ ಕ್ಯಾಪ್ಷನ್ ನೀಡಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ರಾಯನ್ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದಾನೆ. ರಾಯನ್ ಗೆಳೆಯರ ಬಳಗ ಎಷ್ಟು ದೊಡ್ಡದಾಗಿದೆ ಎನ್ನುವುದನ್ನು ನಾವು ಈ ಫೋಟೋದಲ್ಲಿ ನೋಡ ಬಹುದಾಗಿದೆ. ಇದನ್ನೂ ಓದಿ: ಕ್ಯೂಟ್ ಡ್ರೆಸ್ ಧರಿಸಿ ಬೊಂಬೆಯಂತೆ ರಾಯನ್ ಪೋಸ್

 

View this post on Instagram

 

A post shared by Meghana Raj Sarja (@megsraj)

ರಾಯನ್ ಆಗಮನದ ಬಳಿಕ ಮೇಘನಾ ರಾಜ್ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ. ಪುತ್ರನ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದಾಗಿಯೂ ಒಪ್ಪಿಕೊಂಡಿದ್ದಾರೆ. ಗೆಳೆಯನ ಬರ್ತ್ ಡೇ ಪಾರ್ಟಿಯಲ್ಲಿ ರಾಯನ್ ಭಾಗವಹಿಸಿದ್ದಾನೆ. ಫ್ರೆಂಡ್ಸ್ ಜೊತೆಗೆ ಸೇರಿ ಆಟ ಆಡಿದ್ದಾನೆ. ಈ ಸಂದರ್ಭದಲ್ಲಿ ಮೇಘನಾ ರಾಜ್ ಅವರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಅಭಿಮಾನಿಗಳು ಈ ಫೋಟೋವನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

Share This Article
Leave a Comment

Leave a Reply

Your email address will not be published. Required fields are marked *