ಬೆಂಗಳೂರು: ನಟಿ ಮೇಘನಾ ರಾಜ್ ಅವರು ಸದ್ಯ ತಮ್ಮ ಮಗನ ಆರೈಕೆ ಹಾಗೂ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್ ಆಗಿರುವ ಅವರು ಆಗಾಗ ತಮ್ಮ ಹಾಗೂ ಮಗನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂತೆಯೇ ಇದೀಗ ಮಗನ ಫೋಟೋವೊಂದನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಹೌದು. ಚಿರಂಜೀವಿ ಸರ್ಜಾ ಅಗಲಿದ ನಂತರ ಮೇಘನಾ ಒಂಟಿ ಜೀವನಕ್ಕೆ ಮಗ ರಾಯನ್ ರಾಜ್ ಸರ್ಜಾ ಸಾಥ್ ನೀಡಿದ್ದಾನೆ. ಇಂದು ರಾಯನ್ ಮತ್ತು ಚಿರುವಿನ ಹಳೆಯ ಫೋಟೋ ಕೊಲೆಜ್ ಮಾಡಿ, ಕೆಲವು ವಿಷಯಗಳು ಕೇವಲ ದೈವಿಕವಾಗಿ ಬಂದಿರುತ್ತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್
ಈ ಸಾಲುಗಳ ಅರ್ಥ ನಾವು ಎಲ್ಲವನ್ನು ಹೇಳಿಕೊಡಬೇಕು ಎಂದು ಏನೂ ಇಲ್ಲ. ಕೆಲವೊಂದು ಅಂಶಗಳು ದೇವರೇ ಕೊಟ್ಟಿರುತ್ತಾನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಯನ್‍ಗೆ ಪಕ್ಕಾ ಚಿರು ಮನಸ್ಸು ಇದೆ ಎಂದು ಅಭಿಮಾನಿಗಳೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ವಿಶೇಷತೆ ಏನು?
ಮೇಘನಾ ಶೇರ್ ಮಾಡಿದ ಫೋಟೋದಲ್ಲಿ ಚಿರು ತನ್ನ ಸ್ನೇಹಿತ ಮತ್ತು ಕನ್ನಡ ಸಿನಿಮಾ ನಿರ್ದೇಶಕ ಪನ್ನಗಾಭರಣ ಅವರಿಗೆ ಹೇರ್ ಸ್ಟೈಲ್ ಮಾಡುತ್ತಿದ್ದು, ಅದೇ ರೀತಿ ರಾಯನ್ ಸಹ ಪನ್ನಗಾಭರಣ ಅವರ ಮಗನಿಗೆ ಹೇರ್ ಸ್ಟೈಲ್ ಮಾಡುತ್ತಿದ್ದಾನೆ. ಪನ್ನಗಾಭರಣ ಮತ್ತು ಚಿರು ಒಳ್ಳೆಯ ಸ್ನೇಹಿತರಾಗಿದ್ದು, ಅದೇ ರೀತಿ ಇವರಿಬ್ಬರ ಮಕ್ಕಳು ಸಹ ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂಬುದನ್ನು ಈ ಫೋಟೋದಲ್ಲಿ ನಾವು ಕಾಣಬಹುದಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್
ಈ ಬಗ್ಗೆ ರಾಯನ್‍ಗೆ ಯಾರು ಹೇಳಿಕೊಟ್ಟಿಲ್ಲ. ಆದರೆ ಅದು ದೈವಿಕವಾಗಿಯೇ ಬಂದಿದೆ ಎಂದು ಬರೆದುಕೊಂಡು ಮೇಘನಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಫೋಟೋ ನೋಡಿದ ಅಭಿಮಾನಿಗಳು ಇವರಿಬ್ಬರ ಸ್ನೇಹ ಇದೇ ರೀತಿ ಇರಲಿ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು, ಕೆಲವೊಂದು ನೆನಪು ಎಷ್ಟೇ ಸಮಯ ಕಳೆದರೂ ಸಹ ಎಂದಿಗೂ ಮರೆಯಲಾಗದು. ಚಿರು ಸರ್ ಅವರು ಇಂದಿಗೂ ನಮ್ಮ ಜೊತೆಯೇ ಇದ್ದಾರೆಂದು ಅನ್ನಿಸುತ್ತಿದೆ ಎಂದು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ.