ಬೆಂಗಳೂರು: ನಟಿ ರಾಯ್ ಲಕ್ಷೀ ಬಾಲಿವುಡ್, ಟಾಲಿವುಡ್ ಸ್ಯಾಂಡಲ್ವುಡ್ ಸಿನಿಮಾಗಳಲ್ಲಿ ತಮ್ಮದೇ ಆಗಿರುವ ನಟನೆಯ ಮೂಲಕವಾಗಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾ ಮೂಲಕವಾಗಿ ಸುದ್ದಿ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದ ನಟಿ ಇದೀಗ, ಸೂಪರ್ ಹಾಟ್ ಫೋಟೋ ಮೂಲಕವಾಗಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಹೊಸ ಫೋಟೋ ಶೂಟ್ ಮಾಡಿಸಿದ್ದು. ಫೋಟೋಗಳನ್ನು ಕಂಡ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಂಥ ತಮ್ಮ ಮಾದಕ ಫೋಟೋಗಳನ್ನು ಶೇರ್ ಮಾಡುವ ರಾಯ್ ಲಕ್ಷ್ಮೀಯವರ ಈ ಲೇಟೆಸ್ಟ್ ಫೋಟೋ ಈ ಮೊದಲಿನ ಫೋಟೋಗಳನ್ನು ಮೀರಿಸುವಂತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಹೊಸ ಮೆಟ್ರೋ ನಿಲ್ದಾಣಕ್ಕೆ ಅಪ್ಪು ಹೆಸರಿಡುವಂತೆ ಒತ್ತಾಯ
ನಟಿ ಲಕ್ಷ್ಮೀ ರೈ ಈಗ ರಾಯ್ ಲಕ್ಷ್ಮೀ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಮೂಲತಃ ಬೆಳಗಾವಿಯವರಾದ ಲಕ್ಷ್ಮೀ, ಮೊದಲು ಬಣ್ಣ ಹಚ್ಚಿದ್ದು ತಮಿಳಿನಲ್ಲಿ. 2005ರಲ್ಲಿ ತೆರೆಕಂಡ ಕಾರ್ಕ ಕಸದಾರ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಭಾಷೆಗೂ ಎಂಟ್ರಿ ಕೊಟ್ಟು ಪಂಚಭಾಷಾ ತಾರೆ ಎನಿಸಿಕೊಂಡಿದ್ದಾರೆ. ತಮ್ಮ 16 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಇತಿಹಾಸದ ಪುಟಕ್ಕೆ ಮೊದಲ ಮಹಿಳಾ ಕನ್ನಡ ಶಾಲೆ – ವಿವೇಕನಾಂದರ ಸ್ಮಾರಕ ನಿರ್ಮಾಣಕ್ಕೆ ನೆಲಸಮ
ಸದ್ಯ ಲಕ್ಷ್ಮೀ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಏನಾದ್ರೂ ಹೊಸ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಆದರೆ, ತಮ್ಮ ಹೊಸ ಲುಕ್ನಲ್ಲಿ ಎಲ್ಲರನ್ನು ಮೋಡಿ ಮಾಡಿದ್ದಾರೆ. ಚಿರಂಜೀವಿ, ಪವನ್ ಕಲ್ಯಾಣ್ರತಂಹ ಸ್ಟಾರ್ಗಳ ಜೊತೆ ಐಟಂ ಸಾಂಗ್ ಮಾಡಿದ ನಂತರವೂ ತೆಲುಗಿನ ಯಾವ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.