ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ದಾಖಲೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಕೇವಲ ಬೆಂಗಳೂರು ಒಂದರಲ್ಲೇ ಇಂದು 700ಕ್ಕೂ ಅಧಿಕ ಶೋಗಳು ನಡೆದಿವೆ. ಹಾಗಾಗಿ ಇಂದು ಗಾಂಧಿನಗರದಲ್ಲಿ ಬರೀ ಆರ್.ಆರ್.ಆರ್ ಸಿನಿಮಾದ್ದೇ ಮಾತು ಕೇಳಿ ಬರುತ್ತಿದೆ.
Advertisement
ಮಧ್ಯರಾತ್ರಿ 12.45 ರಿಂದ ಶುರುವಾದ ಶೋಗಳು ನಿರಂತರವಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಬಾಕ್ಸ್ ಆಫೀಸು ತುಂಬಿ ತುಳುಕುತ್ತಿದೆ. ಟಿಕೆಟ್ ದರದಲ್ಲೂ ಭಾರೀ ಏರಿಕೆ ಕಂಡಿದ್ದರೂ, ಅಭಿಮಾನಿಗಳು ಮಾತ್ರ ತಲೆಕೆಡಿಸಿಕೊಳ್ಳದೇ ಸಿನಿಮಾ ನೋಡುತ್ತಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್
Advertisement
Advertisement
700 ಸ್ಕ್ರೀನ್ ಗಳಲ್ಲಿ 600ಕ್ಕೂ ಹೆಚ್ಚು ತೆಲುಗು ಆರ್.ಆರ್.ಆರ್ ಪ್ರದರ್ಶನ ಕಾಣುತ್ತಿದ್ದರೆ, 28 ಸ್ಕ್ರೀನ್ ಗಳಲ್ಲಿ ಕನ್ನಡ ಆರ್.ಆರ್.ಆರ್ ರಿಲೀಸ್ ಆಗಿದೆ. ಉಳಿದಂತೆ ಬೆರಳೆಣಿಕೆಯಲ್ಲಿ ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್
Advertisement
ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ವಿಶ್ವದಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಆರ್.ಆರ್.ಆರ್ ರಿಲೀಸ್ ಆಗಿದೆ. ಅಂದಾಜು ಒಂದೇ ದಿನಕ್ಕೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಹೇಳಲಾಗಿದೆ.