ಚೆನ್ನೈ: ಇದೇ ಮೊದಲ ಬಾರಿಗೆ ದಲಿತ ಮಹಿಳೆಯೊಬ್ಬರು ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಡಿಎಂಕೆ ಪಕ್ಷವು 28 ವರ್ಷ ವಯಸ್ಸಿನ ಆರ್.ಪ್ರಿಯಾ ಅವರನ್ನು ಮೇಯರ್ ಸ್ಥಾನಕ್ಕೆ ನೇಮಕವಾಗಿದ್ದಾರೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚೆನ್ನೈನ ಒಟ್ಟು 200 ವಾರ್ಡ್‍ಗಳ ಪೈಕಿ ಡಿಎಂಕೆ 153 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿರುವುದರಿಂದ ಪಕ್ಷ ಸೂಚಿಸಿರುವಂತೆ ಪ್ರಿಯಾ ಅವರೇ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ನಂತರ ಪ್ರಿಯಾ ಚೆನ್ನೈನ ಮೂರನೇ ಮಹಿಳಾ ಮೇಯರ್ ಆಗಲಿದ್ದಾರೆ. ಪ್ರಿಯಾ ಅವರು ಮಂಗಳಪುರಂನ ವಾರ್ಡ್ 74ರ ಕೌನ್ಸಿಲರ್ ಆಗಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ
Advertisement
Tamil Nadu | Greater Chennai Corporation gets its youngest and first-ever Dalit woman mayor, as DMK’s R Priya takes the oath of office in Chennai. The 29-year-old is Chennai’s third woman mayor. pic.twitter.com/erfAt365h0
— ANI (@ANI) March 4, 2022
Advertisement
ಆರ್.ಪ್ರಿಯಾ ಯಾರು ಗೊತ್ತಾ?: ಎಂ.ಕಾಂ ಪದವೀಧರೆಯಾಗಿರುವ ಪ್ರಿಯಾ ಅವರು ಚೆನ್ನೈ ಕಾರ್ಪೊರೇಷನ್ ಮೇಯರ್ ಸ್ಥಾನಕ್ಕೇರಲಿರುವ ಮೂರನೇ ಮಹಿಳೆ. ಈ ಹಿಂದೆ ತಾರಾ ಚೆರಿಯನ್ ಮತ್ತು ಕಾಮಾಕ್ಷಿ ಜಯರಾಮನ್ ಅವರು ಮೇಯರ್ ಆಗಿ ಅಧಿಕಾರ ನಿರ್ವಹಿಸಿದ್ದಾರೆ. ಡಿಎಂಕೆಯ ಮಾಜಿ ಶಾಸಕ ಚೆಂಗೈ ಶಿವಂ ಅವರ ಮೊಮ್ಮಗಳು ಪ್ರಿಯಾ. ಅವರ ತಂದೆ ಆರ್.ರಾಜನ್ ಸಹ ಡಿಎಂಕೆ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾರ್ಪೊರೇಷನ್ ಚುನಾವಣೆಯಲ್ಲಿ ಪ್ರಿಯಾ 74ನೇ ವಾರ್ಡ್‍ನಿಂದ ಆಯ್ಕೆಯಾಗಿದ್ದಾರೆ.