ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್

Public TV
2 Min Read
R Praggnanandhaa

ನವದೆಹಲಿ: ಚೆಸ್ ವಿಶ್ವಕಪ್‍ನ ರನ್ನರ್ ಅಪ್ ಆಗಿರುವ ಆರ್. ಪ್ರಜ್ಞಾನಂದ (R Praggnanandhaa) ಪೋಷಕರಿಗೆ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡುವ ಭರವಸೆ ನೀಡಿದ್ದು, ಇದಕ್ಕೆ ಚೆಸ್ ಪಟು ಪ್ರತಿಕ್ರಿಯಿಸಿದ್ದಾರೆ.

ಇದು ಪ್ರಜ್ಞಾನಂದ ಹೆತ್ತವರ ಬಹಳ ವರ್ಷಗಳ ಕನಸಾಗಿತ್ತು. ಇದೀಗ ಹೆತ್ತವರ ಈ ಬಹುದೊಡ್ಡ ಕನಸು ನನಸಾಗಿಸಿದ್ದಕ್ಕೆ ಪ್ರಜ್ಞಾನಂದ ಅವರು ಆನಂದ್ ಮಹೀಂದ್ರಾಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಟ್ವೀಟ್‍ನಲ್ಲೇನಿದೆ..?: ನಾನು ನಿಮಗೆ ಹೇಗೆ ಧನ್ಯವಾದಗಳನ್ನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ತುಂಬಾನೇ ಥ್ಯಾಂಕ್ಸ್ ಸರ್. ಇವಿ ಕಾರನ್ನು ಹೊಂದುವುದು ನನ್ನ ಹೆತ್ತವರ ದೀರ್ಘಾವಧಿಯ ಕನಸಾಗಿದೆ. ಇದೀಗ ನೀವು ಅದನ್ನು ನನಸಾಗಿಸಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಆನಂದ್ ಮಹೀಂದ್ರಾ ಹೇಳಿದ್ದೇನು..?: ಪ್ರಜ್ಞಾನಂದ್ ರನ್ನರ್ ಅಪ್ ಆಗುತ್ತಿದ್ದಂತೆಯೇ ಹಲವಾರು ಮಂದಿ ಟ್ವೀಟ್ ಮಾಡಿ, ಥಾರ್ ಗಿಫ್ಟ್ ಮಾಡುವಂತೆ ಆನಂದ್ ಮಹೀಂದ್ರಾ ಅವರನ್ನು ಒತ್ತಾಯಿಸಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ, ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ನನ್ನಲ್ಲಿ ಮತ್ತೊಂದು ಐಡಿಯಾ ಇದೆ. ಅದೇನೆಂದರೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪೋಷಕರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಹೀಗಾಗಿ ನಾನು ಪ್ರಜ್ಞಾನಂದ ಪೋಷಕರಿಗೆ XUV4OO EV ಎಲೆಕ್ಟ್ರಿಕ್ ವಾಹನವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಸದ್ಯ ಆನಂದ್ ಮಹೀಂದ್ರಾ ಅವರ ಕಾರ್ಯಕ್ಕೆ ಹಲವಾರು ಮಂದಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ನಿಮ್ಮ ಕ್ರಿಯಾಶೀಲ ಮನೋಭಾವ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಪ್ರಜ್ಞಾನಂದ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಬೇಕು ಎಂಬುದು ಹಲವರ ಬಯಕೆಯಾಗಿತ್ತು. ಈ ಹಲವರ ಸಲಹೆಗೆ ನೀಡುವ ಪರ್ಯಾಯ ಉಪಾಯ ನಿಜಕ್ಕೂ ಮೆಚ್ಚುವಂತದ್ದು ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕೊಂಡಾಡಿದ್ದಾರೆ.

ಅಝರ್ ಬೈಜಾನ್ ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ ನ (Chess World Cup 2023) ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮ್ಯಾಗ್ನಸ್ ಕಾರ್ಲ್‍ಸೆನ್ (Magnus Carlsen) ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದರು. ಭಾರತೀಯ ಚೆಸ್ ಪಟು ಪ್ರಜ್ಞಾನಂದಗೆ (Praggnanandhaa) ಸೋಲಾಗಿದ್ದು, ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು.

Web Stories

Share This Article