ಒಂದು ಕಾಲದ ಯಡಿಯೂರಪ್ಪ ಆಪ್ತ ಸದ್ದಿಲ್ಲದೇ ಜೆಡಿಎಸ್ ಸೇರ್ಪಡೆ

Public TV
1 Min Read
BSY Manjunatha Gowda

ಬೆಂಗಳೂರು: ಒಂದು ಕಾಲದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಆಪ್ತ ಮಂಜುನಾಥ ಗೌಡ ಇಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಪದ್ಮನಾಭ ನಗರದ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಎದುರು 1,793 ಮತಗಳಿಂದ ಸೋತಿದ್ದರು. ಬಿ.ಎಸ್.ಯಡಿಯೂರಪ್ಪರ ಆಪ್ತ ಎಂದು ಕರೆಸಿಕೊಳ್ಳುತ್ತಿದ್ದ ಮಂಜುನಾಥ ಗೌಡ ಬಿಜೆಪಿಯನ್ನು ತೊರೆದಿದ್ದಾರೆ.

ಮಾತೃ ಪಕ್ಷಕ್ಕೆ ವಾಪಾಸ್ಸಾಗುತ್ತಿರುವುದು ಖುಷಿ ತಂದಿದೆ. 1986-96 ರ ವರೆಗೆ ಜೆಡಿಎಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ತೀರ್ಥಹಳ್ಳಿಯಲ್ಲಿ ಜನವರಿ 09ರಂದು ಬೃಹತ್ ಸಭೆ ನಡೆಸಿದಾಗ ಕಾರ್ಯಕರ್ತರ ಇಚ್ಚೆಯನುಸಾರವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಬದ್ಧವಾಗಿರುತ್ತೇನೆ ಅಂತಾ ದೇವೆಗೌಡರಿಗೆ ವಾಗ್ದಾನ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಲಿವೆ ಅಂತಾ ಮಂಜುನಾಥ ಗೌಡ ತಿಳಿಸಿದ್ದಾರೆ.

Manjunatha Gowda 2

Manjunatha Gowda 1

Share This Article