ಬೆಂಗಳೂರು: ಸುರ್ಜೇವಾಲಾ ನನ್ನನ್ನು ಸಭೆಗೆ ಕರೆದಿಲ್ಲ, ಸಂಪುಟದಿಂದ ಕೈ ಬಿಡ್ತಾರೆ ಅಂತನೂ ಹೇಳಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ್ (RB Timmapur) ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲಾ (Randeep Surjewala) ನನ್ನನ್ನು ಸಭೆಗೆ ಕರೆದಿಲ್ಲ, ನನ್ನನ್ನು ಸಂಪುಟದಿಂದ ಕೈಬಿಡ್ತಾರೆ ಅಂತನೂ ಹೇಳಿಲ್ಲ, ಕೆಲವು ಮಂತ್ರಿಗಳನ್ನೂ ಕೈಬಿಟ್ಟಿದ್ದೀರಲ್ಲ ಯಾಕೆ ಎಂದು ನೀವೇ ಸುರ್ಜೇವಾಲಾರನ್ನು ಕೇಳಿ. ಉಳಿದವರ ಬಗ್ಗೆ ನಾನೇನು ಹೇಳಲಿ? ಹೈಕಮಾಂಡ್ ಏನಾದರೂ ಕರೆದರೆ ತಕ್ಷಣ ಹೋಗುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಶಾಸಕರ ಅಸಮಾಧಾನಕ್ಕೆ ಬಗ್ಗಿದ ಸಿಎಂ – `ಕೈ’ ಶಾಸಕರಿಗೆ 50 ಕೋಟಿ ಅನುದಾನಕ್ಕೆ ಅಸ್ತು
ಮಲ್ಲಿಕಾರ್ಜುನ ಖರ್ಗೆ ದಲಿತ ಪಿಎಂ ಆಗಲಿ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ ಏನು ನಿರ್ಧರಿಸಬೇಕು ಅದನ್ನು ಮಾಡುತ್ತೇವೆ. ಪಕ್ಷದ ಧ್ಯೇಯ ಧೋರಣೆ ನೋಡಿಕೊಂಡು ನಾವು ನಿರ್ಧಾರ ಮಾಡ್ತೇವೆ. ಸಿಎಂ ಮಾಡುವಾಗಲೂ ನಮಗೊಂದು ಪದ್ಧತಿ ಇದೆ. ಬಿಜೆಪಿಯವರನ್ನು ಕೇಳಿ ಪ್ರಧಾನಿ ಮಾಡೋಕಾಗುತ್ತಾ? ಏನೇನು ನ್ಯೂಸ್ ಇದೆಯೋ ನಿಮಗೆ ಗೊತ್ತು. ಬಿಜೆಪಿಯವರಿಗೆ ಯಾವತ್ತೂ ಅಭಿವೃದ್ಧಿ, ದೇಶದ ರಕ್ಷಣೆ ವಿಚಾರ, ಶಾಂತಿ, ನೆಮ್ಮದಿ ಬೇಕಿಲ್ಲ. ಅದು ಅವರ ಅಜೆಂಡಾ ಅಂತ ಕಿಡಿ ಕಾರಿದ್ದಾರೆ.
ಖರ್ಗೆ ಅವರಿಗೆ ರಾಜ್ಯದಲ್ಲೂ ಅವಕಾಶ ಇದೆ ಎಂಬ ವಿಚಾರ ನೀವು ಹೇಳಿದ್ದನ್ನೂ ಗಮನದಲ್ಲಿಟ್ಟುಕೊಂಡು ಇರುತ್ತೇವೆ. ನೀವು ಮಾಧ್ಯಮಗಳು ಒಂದು ಗಂಟೆಯಲ್ಲಿ ಮಂತ್ರಿನೂ ಮಾಡ್ತೀರಿ, ಮುಖ್ಯಮಂತ್ರಿನೂ ಮಾಡ್ತೀರಿ, ಪ್ರಧಾನಿಯನ್ನೂ ಮಾಡ್ತೀರಿ. ಶಾಸಕರನ್ನ ಮಂತ್ರಿಯೂ ಮಾಡ್ತೀರಿ ಅಂತ ನುಡಿದಿದ್ದಾರೆ.ಇದನ್ನೂ ಓದಿ: 80,000 ನಗ್ನ ಫೋಟೋಸ್, ಸೆಕ್ಸ್ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್