ಮುಂಬೈ: ಇತ್ತೀಚೆಗೆ ಬಾಂಗ್ಲಾದೇಶ ತಂಡದ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ (Team India) ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಟೀಂ ಇಂಡಿಯಾ ಆಟಗಾರರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ (ICC Test Rankings) ಅದ್ಭುತ ಸಾಧನೆ ಮಾಡಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್ ಪಡೆದ ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತೊಮ್ಮೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಜಿಗಿದಿದ್ದಾರೆ. 870 ರೇಟಿಂಗ್ಸ್‌ನೊಂದಿಗೆ ನಂ.1 ಸ್ಥಾನದಲ್ಲಿದ್ದ ಭಾರತದ ಅಶ್ವಿನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 1 ಸ್ಥಾನ ಕುಸಿತ ಕಂಡಿರುವ ಅಶ್ವಿನ್ (Ravichandran Ashwin) 847 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನೂ ರವಿಂದ್ರ ಜಡೇಜಾ 809 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ 2 ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 11 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್ ಇನ್ – ಡುಪ್ಲೆಸಿ ಔಟ್ – ಆರ್‌ಸಿಬಿಗೆ ಆನೆ ಬಲ
ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್
1. ಜಸ್ಪ್ರೀತ್ ಬುಮ್ರಾ – ಭಾರತ – 870 ಅಂಕ
2. ಆರ್. ಅಶ್ವಿನ್ – ಭಾರತ - 869 ಅಂಕ
3. ಜೋಶ್ ಹೇಜಲ್ವುಡ್ – ಆಸ್ಟ್ರೇಲಿಯಾ – 847 ಅಂಕ
4. ಪ್ಯಾಟ್ ಕಮ್ಮಿನ್ಸ್ – ಆಸ್ಟ್ರೇಲಿಯಾ 820 ಅಂಕ
5. ಕಗಿಸೊ ರಬಾಡ – ದಕ್ಷಿಣ ಆಫ್ರಿಕಾ – 820 ಅಂಕ
ರ‍್ಯಾಂಕಿಂಗ್‌ನಲ್ಲಿ ಯಶಸ್ವಿ:
ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಬುಮ್ರಾ, ಅಶ್ವಿನ್ ಕಮಾಲ್ ಮಾಡಿದರೆ, ಬ್ಯಾಟಿಂಗ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಫಿಫ್ಟಿ ಸಿಡಿಸಿ ಯಶಸ್ವಿ ಜೈಸ್ವಾಲ್ (Yashasvi Jaiswal) ಮಿಂಚಿದ್ದಾರೆ. 2 ಸ್ಥಾನ ಜಿಗಿತ ಕಂಡು ಐಸಿಸಿ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಸತತ 6 ಸ್ಥಾನಗಳಲ್ಲಿ ಏರಿಕೆ ಕಂಡಿರುವ ವಿರಾಟ್ ಕೊಹ್ಲಿ 6ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಭಾರತ ಮತ್ತೊಂದು ಮೈಲುಗಲ್ಲು – ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಸಾಧನೆ
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್
1. ಜೋ ರೂಟ್ – ಇಂಗ್ಲೆಂಡ್ – 899 ಅಂಕ
2. ಕೇನ್ ವಿಲಿಯಮ್ಸನ್ – ನ್ಯೂಜಿಲೆಂಡ್ – 829 ಅಂಕ
3. ಯಶಸ್ವಿ ಜೈಸ್ವಾಲ್ – ಭಾರತ – 792 ಅಂಕ
4. ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ – 757 ಅಂಕ
5. ಉಸ್ಮಾನ್ ಖವಾಜ – ಆಸ್ಟ್ರೇಲಿಯಾ – 728 ಅಂಕ