ನವದೆಹಲಿ: ಟೀಂ ಇಂಡಿಯಾದ (Team India) ಸ್ಪಿನ್ನರ್ ವಿಶ್ವಕಪ್ ಕ್ರಿಕೆಟ್ (Cricket) ಪಂದ್ಯಕ್ಕೆ ಆಯ್ಕೆಯಾಗದ ಬಗ್ಗೆ ಮೌನ ಮುರಿದಿದ್ದಾರೆ. ನನ್ನ ಕೈಯಲ್ಲಿ ಇರದ ವಿಚಾರಗಳ ಬಗ್ಗೆ ನಾನು ಯೋಚಿಸುವುದಿಲ್ಲ. ಆದರೆ ನನ್ನ ಆಯ್ಕೆಗಿಂತ ತಂಡ ವಿಶ್ವಕಪ್ (World Cup 2023) ಗೆಲ್ಲುವುದು ಮುಖ್ಯ ಎಂದಿದ್ದಾರೆ.
ನಾನು ಜೀವನ ಮತ್ತು ನನ್ನ ಕ್ರಿಕೆಟ್ ವಿಷಯದಲ್ಲಿ ಪ್ರಾಮಾಣಿಕವಾಗಿ ಉತ್ತಮ ಜಾಗದಲ್ಲಿದ್ದೇನೆ. ನನ್ನ ಆಲೋಚನಾ ಪ್ರಕ್ರಿಯೆಯಿಂದ ನಕಾರಾತ್ಮಕತೆಯನ್ನು ದೂರವಿರಿಸಲು ಪ್ರಯತ್ನಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಇದನ್ನೂ ಓದಿ: AsiaCup 2023: ಟೀಂ ಇಂಡಿಯಾದಿಂದ ಸಂಜು ಸ್ಯಾಮ್ಸನ್ ಔಟ್?
Advertisement
Advertisement
ವಿದೇಶಿ ಪಿಚ್‍ಗಳಲ್ಲಿ ರವಿಚಂದ್ರನ್ ಅಶ್ವಿನ್ (R.Ashwin) ಉತ್ತಮ ದಾಖಲೆಗಳನ್ನು ಹೊಂದಿದ್ದರೂ ಅಂತಹ ಪಿಚ್‍ಗಳಲ್ಲಿ ನಡೆದ ಪಂದ್ಯಗಳಲ್ಲೂ ಆರ್.ಅಶ್ವಿನ್ ಅವರನ್ನು ಹೊರಗಿಡಲಾಗುತ್ತಿದೆ. 2023ರ ಜೂನ್ 7 ರಿಂದ 11 ರವರೆಗೆ ಲಂಡನ್‍ನ ದಿ ಓವಲ್ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದದಿಂದ ಅಶ್ವಿನ್‍ರನ್ನು ಹೊರಗಿಡಲಾಗಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 209 ರನ್‍ಗಳ ಸೋಲು ಕಂಡು ಕ್ರಿಕೆಟ್ ದಿಗ್ಗಜರ ಕೆಂಗಣ್ಣಿಗೆ ಗುರಿಯಾಗಿತ್ತು.
Advertisement
ಕಳೆದ 5 ವರ್ಷಗಳಿಂದ ವಿದೇಶಿ ನೆಲದಲ್ಲಿ ನಡೆದ ಟೆಸ್ಟ್‌ನ ಬಹುತೇಕ ಪಂದ್ಯಗಳಲ್ಲಿ ನನ್ನನ್ನು ಕೈಬಿಡಲಾಗಿದೆ. ಇದಕ್ಕೆ ನಾನು ಉತ್ತರ ಹುಡುಕಲು ಹೋಗುವುದಿಲ್ಲ. ತಂಡದಲ್ಲಿ ಸ್ಥಾನ ಸಿಗಲಿಲ್ಲ ಎಂದು ನಾನು ಯೋಚಿಸುವುದಿಲ್ಲ ಬದಲಿಗೆ ತಂಡದ ಗೆಲುವಿಗಾಗಿ ಆಟಗಾರರನ್ನು ಹುರಿದುಂಬಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
Advertisement
ನನಗೆ ತಂಡದಲ್ಲಿ ಏಕೆ ಸ್ಥಾನ ಸಿಗುತ್ತಿಲ್ಲ ಎಂಬ ಕಾರಣವನ್ನು ಹುಡುಕುತ್ತ ಸಮಯ ವ್ಯರ್ಥ ಮಾಡುವುದಿಲ್ಲ. ಏಕೆಂದರೆ ತಂಡದಲ್ಲಿ ಸ್ಥಾನ ಸಿಗುವುದು ಅಥವಾ ಬಿಡುವುದು ನನ್ನ ನಿಯಂತ್ರಣದಲ್ಲಿಲ್ಲ. 2018-19 ರಿಂದಲೂ ನಾನು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠವಾಗಿದ್ದೇನೆ. ಅವಕಾಶ ಸಿಕ್ಕಿಲ್ಲ ಎಂದು ನಕಾರಾತ್ಮಕ ಯೋಚನೆ ಮಾಡುತ್ತಾ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ತಂಡಕ್ಕೆ ಯಾವ ರೀತಿ ನೆರವು ನೀಡಬಹುದು ಎಂಬುದರ ಬಗ್ಗೆ ಆಲೋಚಿಸುತ್ತೇನೆ ಎಂದಿದ್ದಾರೆ.
ಅಶ್ವಿನ್ 94 ಟೆಸ್ಟ್ ಪಂದ್ಯಗಳಲ್ಲಿ 489 ವಿಕೆಟ್ ಪಡೆದು ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ರಿಷಭ್ ಪಂತ್ ಬ್ಯಾಟಿಂಗ್ – ಅಭಿಮಾನಿಗಳಲ್ಲಿ ಸಂಭ್ರಮ
Web Stories