ಬೆಂಗಳೂರು: ಸಮನ್ವಯತೆಯಿಂದ ಕೆಲಸ ಮಾಡಿ ಸಮಸ್ಯೆ ಪರಿಹಾರ ಮಾಡಿ ಎಂದ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿದ ಅಶೋಕ್ ಅವರು ಕ್ಷೇತ್ರದ ಕುಂದುಕೊರತೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ಗಣೇಶ ಮಂದಿರ, ಪದ್ಮನಾಭನಗರ, ಕುಮಾರಸ್ವಾಮಿ ಬಡಾವಣೆ, ಚಿಕ್ಕಲ್ಲಸಂದ್ರ ಮುಂತಾದ ಕಡೆಗಳಲ್ಲಿ ಆಗುತ್ತಿರುವ ಕಸ ವಿಲೇವಾರಿ ಸಮಸ್ಯೆಗೆ ಚರ್ಚೆ ನಡೆಸಿದ ಅವರು, ಹತ್ತು ದಿನಗಳ ಒಳಗಾಗಿ ಎಲ್ಲ ಸಮಸ್ಯೆ ಬಗೆಹರಿಯಬೇಕು. ಅಲ್ಲಲ್ಲಿ ಬಿದ್ದಿರುವ ಮರಗಳು, ಕಟ್ಟಡದ ತ್ಯಾಜ್ಯಗಳನ್ನು ಬೇಗ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್
Advertisement
ನಾನು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸುತ್ತೇನೆ. ಅನಗತ್ಯವಾಗಿ ಮಂಜೂರಾಗಿರುವ ಆಟೋ ಟಿಪ್ಪರ್ ಗಳನ್ನು ತಕ್ಷಣದಿಂದಲೇ ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ನಿಂದ ಮೃತಪಟ್ಟವರಲ್ಲಿ 653 ಜನರು ಪರಿಹಾರ ಅರ್ಹರು. ಅದರಲ್ಲಿ 103 ಜನರ ಅರ್ಜಿ ಈಗಾಗಲೇ ಸ್ವೀಕೃತಿಯಾಗಿದೆ. ಉಳಿದವುಗಳನ್ನು ಶೀಘ್ರವಾಗಿ ಅಂತಿಮ ರೂಪ ನೀಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಸಮನ್ವಯತೆ ಕೊರತೆಯಿಂದ ಪಾಟ್ ಹೋಲ್ ಸಮಸ್ಯೆ ಆಗಿದೆ. ಕ್ಷೇತ್ರದಾದ್ಯಂತ ಇರುವ ಪಾಟ್ ಹೋಲ್ ಗಳನ್ನು ಶೀಘ್ರವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
Advertisement
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಆವರಣದಲ್ಲಿ ವಿಶೇಷಚೇತನರಿಗೆ ಅನುಕೂಲವಾಗಲೆಂದು ತ್ರಿಚಕ್ರ ವಾಹನ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮೀಕಾಂತ, ಮಂಡಲ ಅಧ್ಯಕ್ಷ ರವಿ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.#RAshoka #RevenueMinister pic.twitter.com/HveWtFPLjF
— R. Ashoka (ಆರ್. ಅಶೋಕ) (@RAshokaBJP) October 27, 2021
Advertisement
ಬೆಸ್ಕಾಂ ಅವರು ಪೋಲ್ ಗಳನ್ನು ವ್ಯವಸ್ಥಿತವಾಗಿ ಮುಚ್ಚಿಸದೇ ಇರುವದರಿಂದ ಸಾಕಷ್ಟು ಸವಾರರು ಬಿದ್ದು, ಅನಾಹುತಗಳಾಗಿದೆ. ಇಲಾಖೆಗಳ ಸಮನ್ವಯತೆ ಕೊರತೆಯಿಂದ ರಸ್ತೆಗಳು ಹಾಳಾಗುತ್ತಿದೆ. ಸಾರ್ವಜನಿಕ ಹಣವೂ ಪೋಲಾಗುತ್ತದೆ. ಇದಕ್ಕೆ ಹೊಸ ವ್ಯವಸ್ಥೆ ತರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. .
Advertisement
ಸಂಬಂಧಿಸಿದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಏಳು ದಿನಗಳ ಒಳಗಾಗಿ ಈ ಸಮಸ್ಯೆ ಪರಿಹಾರವಾಗದಿದ್ದರೆ ಎಲ್ಲರನ್ನೂ ಕಪ್ಪುಪಟ್ಟಿಗೆ ಸೇರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡಿದರು. ಬನಶಂಕರಿ ಬಸ್ ನಿಲ್ದಾಣದ ಒಳಚರಂಡಿ ಪೈಪ್ ಗಳನ್ನು ಜನವಸತಿ ಪ್ರದೇಶದ ಕಡೆ ಜೋಡಿಸಿರುವ ವಿಷಯ ತಿಳಿದು ಕೆಂಡಾಮಂಡಲರಾದ ಸಚಿವ ಅಶೋಕ್ ಶೀಘ್ರವಾಗಿ ಸಂಬಂಧ ಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್
ಕ್ಷೇತ್ರದಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಾನೇ ಖುದ್ದು ಪರಿಶೀಲನೆ ನಡೆಸುತ್ತೇನೆ. ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಪರಿಹಾರ ಮಾಡುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಕಂದಾಯ, ಬಿ ಡಬ್ಲು ಎಸ್ ಎಸ್ ಬಿ, ಬೆಸ್ಕಾಂ, ಆರೋಗ್ಯ, ಮಹಾನಗರಪಾಲಿಕೆ ಮುಂತಾದ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು. ಸಭೆಯ ನಂತರ ಅಶೋಕ್ ವಿಶೇಷಚೇತನರ ಬದುಕಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ತ್ರಿಚಕ್ರ ವಾಹನ ನೀಡಿದರು.