– ಕುಡಿಯೋಕೆ ನೀರು ಕೊಡೋ ಯೋಗ್ಯತೆಯೂ ಇಲ್ಲವೆಂದು ವಿಪಕ್ಷ ನಾಯಕ ವಾಗ್ದಾಳಿ
ಬೆಂಗಳೂರು: ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಸಾವನ್ನಪಿರೋ ಘಟನೆಗೆ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ವಾಗ್ದಾಳಿ ನಡೆಸಿದ್ದಾರೆ. ಈ ಸಾವಿಗೆ ಸರ್ಕಾರವೇ ಕಾರಣ ಅಂತ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರ (Congress Government) ಬಂದಾಗಿನಿಂದ ಗ್ಯಾರಂಟಿ ಗ್ಯಾರಂಟಿ ಅಂತ ಹೇಳಿಕೊಂಡು ಕುಡಿಯೋ ನೀರು ಕೊಡ್ತಿಲ್ಲ. ಕಲುಷಿತ ನೀರು (Contaminated Water) ಕುಡಿಯೋ ಸ್ಥಿತಿ ಬಂದಿದೆ. ಸಿಎಂ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಜನರಿಗೆ ಸಮಸ್ಯೆ ಆಗಿದೆ. ಕುಡಿಯೋ ನೀರು ಕೊಡೋ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೀಲ್ ಗಜನ ಪಳಗಿಸಿದ ರಿಯಲ್ ಸಲಗ | ಆಪರೇಷನ್ ’36’ ಸೂಪರ್ ಕಾಪ್ಸ್ – ಸೂಪರ್ ಸ್ಟೋರಿ ಓದಿ
ಇವತ್ತು ತುಮಕೂರಿನಲ್ಲಿ (Tumkur) ಇದೇ ರೀತಿ ಸಾವು ಆಗಿದೆ. ಡಿಸಿಗೆ ಮಾತಾಡಿದ್ರೆ ನೀರಿನ ಸಮಸ್ಯೆ ಇಲ್ಲ ಅಂತಿದ್ದಾರೆ.ಅವರಿಗೆ ಆರೋಗ್ಯ ಸಮಸ್ಯೆಯಿಂದ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಡಿಸಿಗೆ ವರದಿ ಕೇಳಿದ್ದೇನೆ, ಸತ್ತವರಿಗೆ ಒಂದೊಂದು ಆರೋಗ್ಯ ಸಮಸ್ಯೆ ಅಂತ ಹೇಳಿದ್ದಾರೆ. ಕೊಪ್ಪಳದಲ್ಲೂ ಹೀಗೆ ಆಗಿದೆ. ಇಡೀ ರಾಜ್ಯದಲ್ಲಿ ಕಲುಷಿತ ನೀರು ಕುಡಿದು ಜನ ಸಾಯ್ತಿದ್ದಾರೆ. ಕರ್ನಾಟಕ ಸರ್ಕಾರ ಪಾಪರ್ ಆಗಿರೋದಕ್ಕೆ ಇದು ಉದಾಹರಣೆ. ಟ್ಯಾಂಕರ್ (Tanker) ಶುದ್ಧ ಮಾಡೋಕು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಏನಾದರೂ ಕೇಳಿದ್ರೆ ಗ್ಯಾರಂಟಿ ಗ್ಯಾರಂಟಿ ಅಂತಾರೆ. ಕಲುಷಿತ ನೀರು ಕುಡಿದವರ ಸಾವಿಗೆ ಸರ್ಕಾರವೇ ನೇರ ಹೊಣೆ. ಸಿಎಂ ಅವರೇ ಉತ್ತರ ಕೊಡಬೇಕು. ನಿಮ್ಮ ನಿರ್ಲಕ್ಷ್ಯವೇ ಕಾರಣ. ಇದು ದೇವರಿಂದ ಆಗಿಲ್ಲ. ನಿಮ್ಮಿಂದ ಸಾವು ಆಗಿರೋದು ಅಂತ ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್‌ಗೆ ಶಾಸಕರು ಹಣ ಕೇಳಿದ್ರೆ ಬಾಯಿ ಮುಚ್ಚಿಕೊಂಡಿರಿ ಅಂತಾರೆ. ಈ ಸರ್ಕಾರಕ್ಕೆ ನೀರು ಕೊಡಲು ಆಗ್ತಿಲ್ಲ. ಈ ಸಾವಿಗೆ ಸರ್ಕಾರ ಕಾರಣ. ರಾಜ್ಯದ ಜನತೆಗೆ ಸರ್ಕಾರ ಉತ್ತರ ಕೊಡಬೇಕು. ಈ ಸರ್ಕಾರಕ್ಕೆ ಕುಡಿಯೋ ನೀರು ಕೊಡೋ ಯೋಗ್ಯತೆ ಇಲ್ಲ. ಸಿಎಂ ಅವರೇ ನಿಮಗೆ ಮನುಷ್ಯತ್ವ ಇಲ್ಲವಾ? ಮನುಷ್ಯತ್ವ ಇಲ್ಲದೇ ಕುರ್ಚಿಯಲ್ಲಿ ಯಾಕೆ ಕೂತಿದ್ದೀರಾ? ಕುಡಿಯೋ ನೀರಿಗೂ ಹಣ ಕೊಡೋಕೆ ಆಗೋದಿಲ್ವಾ ನಿಮಗೆ? ಅಂತ ಸರ್ಕಾರದ ವಿರುದ್ಧ ಅಶೋಕ್ ಕಿಡಿಕಾರಿದರು. ಇದನ್ನೂ ಓದಿ: ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್ ತಲೆಗೆ ತಂದಿದ್ದಾರೆ: ದರ್ಶನ್ ಅಳಲು
ಕರ್ನಾಟಕ ಸರ್ಕಾರ ATM ಆಗಿ ಕೇಂದ್ರದ ನಾಯಕರಿಗೆ ಹಣ ಕಳಿಸಬೇಕು. ಹೀಗಾಗಿ ಟ್ಯಾಂಕರ್ ಮಾಫಿಯಾ ಮಾಡಿದ್ರು. ಹಣ ಮಾಡೋಕೆ ಇಂತಹ ಕೆಲಸ ಮಾಡ್ತಿದ್ದಾರೆ. ಹಣ ಮಾಡೋಕೆ ಈ ಸರ್ಕಾರ ಟ್ಯಾಂಕರ್ ಮಾಫಿಯಾ ಮಾಡ್ತಿದ್ದಾರೆ. ಈ ಸರ್ಕಾರ RDPR ಇಲಾಖೆಗೆ ಅನುದಾನ 25% ಕಡಿತ ಮಾಡಿದೆ. ವೋಟಿಗೋಸ್ಕರ ಇಂತಹ ಕೆಲಸ ಸರ್ಕಾರ ಮಾಡಿದೆ. ಹೀಗಾಗಿ ಇವತ್ತು ಕಲುಷಿತ ನೀರು ಸೇವಿಸಿ ಜನ ಸಾಯ್ತಿದ್ದಾರೆ. ಅಧಿಕಾರಿಗಳು ಕೈಚೆಲ್ಲಿ ಕೂತಿದ್ದಾರೆ. ಬೆಂಗಳೂರಿನಲ್ಲಿ ಬರಗಾಲ ಮುಂದುವರಿದಿದ್ದರೆ ಬೆಂಗಳೂರಿನಲ್ಲಿ ದೊಡ್ಡ ಸಮಸ್ಯೆ ಆಗ್ತಿತ್ತು ಅಂತ ವಾಗ್ದಾಳಿ ನಡೆಸಿದರು.
ಸಿಎಂ ಮಾತಿಗೂ ಇವತ್ತು ಕಿಮ್ಮತ್ತಿಲ್ಲ. ಯಾರು ಸಿಎಂ ಇಲ್ಲಿ? ಇಬ್ಬರು ಸಿಎಂಗಾಗಿ ಕಿತ್ತಾಟ ಮಾಡ್ತಿದ್ದಾರೆ. ಸಿಎಂ ಮಾತಿಗೆ ಯಾವ ಅಧಿಕಾರಿಗಳು ಬೆಲೆ ಕೊಡ್ತಿಲ್ಲ. ಸಿಎಂ ಮಾತಿಗೆ ಯಾರು ಬೆಲೆ ಕೊಡ್ತಿಲ್ಲ. ಒಂದು ಕಾರಣ ಇಬ್ಬರು ಸಿಎಂ ಇರೋದು ಮತ್ತೊಂದು ಇವರ ಬಳಿ ದುಡ್ಡು ಇಲ್ಲದೆ ಇರೋದು. ಸಿಎಂಗಾಗಿ ಇಬ್ಬರು ಕಿತ್ತಾಟ ಮಾಡ್ತಿದ್ದಾರೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಾಹೀರಾತು ವಿಚಾರದಲ್ಲಿ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಿರುವುದು ಯಾವ ರಾಜಕಾರಣ: ಬಿಜೆಪಿಗೆ ಡಿಕೆಶಿ ತಿರುಗೇಟು