-ಸಾಕ್ಷಿ ರಿಲೀಸ್ ಮಾಡ್ತಾರೆ ಅಂತಾನೆ ದೇವರಾಜೇಗೌಡರನ್ನು ಬಂಧಿಸಿದ್ದಾರೆ
-ಸಿದ್ದರಾಮಯ್ಯ ಸಿಎಂ ಆದ್ರೆ ಮಳೆ ಬರಲ್ಲ, ಕೊಲೆಗಳ ಸುರಿಮಳೆ ಆಗುತ್ತೆ
ಬೆಂಗಳೂರು: ರಾಜ್ಯ ಸರ್ಕಾರ ಅಪರಾಧಿ ಸ್ಥಾನದಲ್ಲಿದ್ದು, ಅದನ್ನು ಗಲ್ಲಿಗೇರಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಾಗ್ದಾಳಿ ನಡೆಸಿದ್ದಾರೆ.
ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ (H.D Devegowda) ಮನೆಗೆ ಭೇಟಿ ನೀಡಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕರ್ನಾಟಕ ಕ್ರೈಂ ರಾಜ್ಯ ಆಗಿದೆ. ಕೊಲೆ, ಸುಲಿಗೆ, ಅತ್ಯಾಚಾರಕ್ಕೆಲ್ಲ ಈ ಸರ್ಕಾರ ಬೆಂಬಲ ಕೊಡ್ತಿದೆ. ಸಿದ್ದರಾಮಯ್ಯ (Siddaramaiah) ಸರ್ಕಾರ ಬಂದ್ರೆ ಮಳೆ ಬರಲ್ಲ, ಬರ ಬರುತ್ತೆ. ಆದರೆ ಅವರು ಸಿಎಂ ಆದಾಗ ಕೊಲೆಗಳ ಮಳೆ ಸುರಿಯುತ್ತದೆ. ಇಷ್ಟೇ ಅಲ್ಲದೇ ರೌಡಿಗಳಿಗೆ, ಕೊಲೆಗಡುಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಬ್ಬ. ನೇಹಾ ಹತ್ಯೆ ಬೆನ್ನಲ್ಲೇ ಅಲ್ಲಿ ಅಂಜಲಿ ಹತ್ಯೆಯಾಗಿದೆ. ಸರ್ಕಾರ ಸತ್ತು, ಕೋಮಾ ಸ್ಥಿತಿಯಲ್ಲಿದೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮ ಗುರಿ ದೊಡ್ಡದಿದೆ, ಗೆಲ್ಲುವ ವಿಶ್ವಾಸವಿದೆ – ಅತಿಯಾದ ಆತ್ಮವಿಶ್ವಾಸ ಇಲ್ಲ: ಮೋದಿ
ದೇವರಾಜೇಗೌಡ (Devarajegowda) ಅವರು ಡಿಕೆಶಿ ವಿರುದ್ಧ 100 ಕೋಟಿ ರೂ. ಆಫರ್ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರ ಬಳಿ ಸಾಕ್ಷ್ಯ ಇದೆ ಎಂದು ಅವರನ್ನು ಬಂಧಿಸಲಾಗಿದೆ. ಅವರು ಹೊರಗಿದ್ರೆ ದಾಖಲೆ ಬಿಡುಗಡೆ ಮಾಡ್ತಾರೆ ಎಂಬ ಭಯ ಸರ್ಕಾರಕ್ಕಿದೆ. ದೇವರಾಜೇಗೌಡ ಅವರು ಆರೋಪಿಸಿರುವುದು ಎಲ್ಲಾ ನೂರಕ್ಕೆ ನೂರು ಸತ್ಯ. ಅದಕ್ಕೆಲ್ಲ ಅವರ ಬಳಿ ಸಾಕ್ಷಿ ಇದೆ ಎನಿಸುತ್ತಿದೆ. ಈಗಾಗಲೇ ಡಿಕೆಶಿ ಮಾತಾಡಿದ ದಾಖಲೆ ಸಹ ಬಿಡುಗಡೆ ಮಾಡಿದ್ದಾರೆ. ಅವರನ್ನು ಬಿಟ್ರೆ ಸರಣಿ ದಾಖಲೆ ಬಿಡ್ತಾರೆ. ಸರ್ಕಾರಕ್ಕೆ ಮುಜುಗರ ಆಗುತ್ತೆ ಎಂದು ಬಂಧಿಸಿದ್ದಾರೆ. ಇದೆಲ್ಲ ಮಾಧ್ಯಮಗಳಲ್ಲಿ ಬರಬಾರದು ಎನ್ನುವುದು ಡಿಕೆಶಿ ಉದ್ದೇಶವಾಗಿದೆ. ಬೆಂಕಿ ಇಲ್ಲದೇ ಹೊಗೆ ಆಡಲ್ಲ ಎಂದು ಕುಟುಕಿದ್ದಾರೆ.
ದೇವರಾಜೇಗೌಡ ಅವರು ಮಾಡಿರುವ ಆರೋಪ ಬಗ್ಗೆ ಎಸ್‍ಐಟಿ ತನಿಖೆ ನಡೆಸೋದಿಲ್ಲ. ಎಸ್‍ಐಟಿ ಸರ್ಕಾರದ ಪ್ರಾಯೋಜಕತ್ವದಲ್ಲಿ ತನಿಖೆ ನಡೆಸುತ್ತಿದೆ. ಅದಕ್ಕಾಗಿಯೇ ಸಿಬಿಐ ತನಿಖೆಗೆ ಪ್ರಕರಣ ವಹಿಸಬೇಕು. ನಿವೃತ್ತ ಜಡ್ಜ್‌ಗಳ ಮೂಲಕ ತನಿಖೆ ನಡೆಸಲಿ ಎಂದು ಅವರು ಆಗ್ರಹಿಸಿದ್ದಾರೆ.
&
nbsp;ಸಿಬಿಐಗೆ ಕೊಟ್ರೆ ಸತ್ಯ ಹೊರಗೆ ಬರುತ್ತೆ ಎಂದು ಕೊಡ್ತಿಲ್ಲ. ಸಿಬಿಐ ತನಿಖೆ ಜಾರ್ಜ್ ವಿಚಾರದಲ್ಲೂ ನಡೆದಿತ್ತು. ತಪ್ಪಿಲ್ಲ ಎಂದರೆ ತಪ್ಪಿಲ್ಲ ಎಂದೇ ವರದಿ ಕೊಡ್ತಾರೆ. ಎಸ್‍ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಕಾರ್ತಿಕ್‍ಗೆ ಬೇಲ್ ಕ್ಯಾನ್ಸಲ್ ಆದ್ರೂ ಯಾಕೆ ಬಂಧಿಸ್ತಿಲ್ಲ? ರೇವಣ್ಣರನ್ನು ಬಂಧಿಸಿದ್ರು, ತಪ್ಪು ಯಾರೇ ಮಾಡಿದ್ರೂ ಶಿಕ್ಷೆ ಆಗಲಿ, ಇದು ಪ್ರಜ್ವಲ್‍ಗೂ (Prajwal Revanna) ಅನ್ವಯವಾಗುತ್ತದೆ. ಹಾಗೆಯೇ ಪೆನ್‍ಡ್ರೈವ್ ಹಂಚಿದವರಿಗೂ ಶಿಕ್ಷೆ ಆಗಬೇಕು. ಈ ಕೇಸ್ ಮುಚ್ಚಿ ಹಾಕಲು ಸಂಚು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸುರ್ಜೇವಾಲಾ, ಸಿಎಂ, ಡಿಕೆಶಿ ಸೇರಿ ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಒಕ್ಕಲಿಗರನ್ನು ಮುಗಿಸಬೇಕು ಎಂಬ ಸ್ಕೀಂನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಈಗಾಗಲೇ ಸಿದ್ದರಾಮಯ್ಯ ಕುರುಬ ನಾಯಕರನ್ನ ಮುಗಿಸಿದ್ದಾರೆ ಎಂದು ಟೀಕಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್’ ಜಾಡು ಅಡಿಯಲ್ಲಿ AAP ಮುಗಿಸಲು ಬಿಜೆಪಿ ಯತ್ನ: ಕೇಜ್ರಿವಾಲ್