– ಬಾಣಂತಿಯರ ಸಾವಿನ ಹೊಣೆ ಹೊತ್ತು ಸಿಎಂ ರಾಜೀನಾಮೆಗೆ ಆಗ್ರಹ
– ಹಾಸನ ಸಮಾವೇಶಕ್ಕೆ 20 ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನೆ
ಬೆಂಗಳೂರು: ಬಿಜೆಪಿಯದ್ದು (BJP) ಮನೆಯೊಂದು ಮೂರುಬಾಗಿಲು ಅಂತಾರಲ್ಲ, ಕಾಂಗ್ರೆಸ್‌ನವರದ್ದು ಊರು ಬಾಗಿಲಾಗಿದೆಯಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ (Congress) ಪವರ್ ಶೇರಿಂಗ್ ಫೈಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಉತ್ತರ ಪ್ರದೇಶದ ಪಿಲಿಭಿತ್, ಚಿತ್ರಕೂಟ್‌ನಲ್ಲಿ ರಸ್ತೆ ಅಪಘಾತ – 10 ಸಾವು, 12 ಮಂದಿ ಸ್ಥಿತಿ ಗಂಭೀರ
Advertisement
Advertisement
ಪರಮೇಶ್ವರ್ (Parameshwar) ಈಗ ಮಾತಾಡಿದ್ದಾರಲ್ಲ, ಮೊದಲು ಸಿಎಂ ಆಗೋದಿಕ್ಕೆ ಅವರಿಗೇ ಆದ್ಯತೆ ಸಿಗಬೇಕು. ಅದಕ್ಕೇ ಅವರು ಮೊನ್ನೆ ಡಿಮ್ಯಾಂಡ್ ಇಟ್ಟಿದ್ದು. ಪರಮೇಶ್ವರ್ ಎರಡು ಸಲ ಅಧ್ಯಕ್ಷ ಆಗಿದ್ದವರು. ಸಿಎಂ ಆಗ್ತಾರೆ ಅಂತ ಅವರನ್ನು ಕಳೆದ ಸಲ ಸೋಲಿಸಲಾಯ್ತು. ಸಿಎಂ ಪೋಸ್ಟ್ ಬಿಟ್ಟುಕೊಡಲ್ಲ ಅಂತ ಸಿದ್ದರಾಮಯ್ಯ (Siddaramaiah) ಅವರೇ ಹೇಳಿದ್ದಾರಲ್ಲ, ಡಿಕೆಶಿಗೆ ಪೆನ್ನು ಪೇಪರ್ ಇನ್ನೆಲ್ಲಿ ಸಿಗುತ್ತೆ? ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲು ಅಂತಾರಲ್ಲ, ಕಾಂಗ್ತೆಸ್‌ನವ್ರದ್ದು ಊರು ಬಾಗಿಲಾಗಿದೆಯಲ್ಲ ಎಂದು ಲೇವಡಿ ಮಾಡಿದರು.
Advertisement
ಸಿಎಂ ರಾಜೀನಾಮೆಗೆ ಆಗ್ರಹ:
ಮುಂದುವರಿದು, ಬಾಣಂತಿಯರ ಸಾವಿನ ಹೊಣೆ ಸಿಎಂ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು. ಪುಡಿಗಳ ರಾಜೀನಾಮೆ ಬೇಡ. ಅಲ್ಲದೇ ಬಾಣಂತಿಯರ ಸಾವಿನ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ನಮ್ಮ ಪಕ್ಷದಿಂದ, ಲೋಕಾಯುಕ್ತಕ್ಕೆ ದೂರು ನೀಡಲಿದ್ದೇವೆ ಎಂದು ಹೇಳಿದರು.
Advertisement
ಇನ್ನೂ ಸೆಂಟ್ರಲ್ ಲ್ಯಾಬ್‌ನಲ್ಲಿ ದ್ರಾವಣ ಬಳಕೆಗೆ ಯೋಗ್ಯ ಅಂತ ವರದಿ ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇವ್ರು ಯಾವ ಸ್ಯಾಂಪಲ್ ಕಳಿಸಿದರು ಅಂತ ಬೇಕಲ್ಲ. ಕೇಂದ್ರದ ಯಾವುದೇ ಅಧಿಕಾರಿ ತಪ್ಪು ಮಾಡಿದರೂ ಕ್ರಮ ಆಗಲಿ, ಡ್ರಗ್ ಮಾಫಿಯಾ ಕೇಂದ್ರದ ಸಂಸ್ಥೆಗಳನ್ನು ಬಿಟ್ಟಿಲ್ಲ. ರಾಜ್ಯದಲ್ಲಿ ಕಳಪೆ ದ್ರಾವಣ ಖರೀದಿ ಹಿಂದೆ ಮೆಡಿಕಲ್ ಮಾಫಿಯಾ ಕೈವಾಡ ಇದೆ, ಈ ಸರ್ಕಾರದವರ ಕೈವಾಡ ಇದೆ ಎಂದು ಆರೋಪಿಸಿದರು.
ರಾಜ್ಯ ಆರೋಗ್ಯ ಇಲಾಖೆ ಅನಾರೋಗ್ಯ ಇಲಾಖೆ ಆಗಿದೆ. ಬಳ್ಳಾರಿ ಆಸ್ಪತ್ರೆಗೆ ನಾನೂ ಕೂಡ ಭೇಟಿ ಕೊಟ್ಟಿದ್ದೆ. ಐವಿ ದ್ರಾವಣ ಕಳಪೆಯಾಗಿತ್ತು, ಆದ್ದರಿಂದ ಬಾಣಂತಿಯರ ಸಾವಾಗಿದೆ. ಒಂದೇ ಗಂಟೆಯಲ್ಲಿ ಕಿಡ್ನಿ, ಲಿವರ್ ಫೇಲ್ ಆಗಿ ಸತ್ತಿದ್ದಾರೆ ಅಂತ ವೈದ್ಯರು ಹೇಳಿದ್ರು. ಮತ್ತೆ ಒಬ್ಬರು ಬಾಣಂತಿಯರ ಸಾವಾಗಿದೆ. ರಾಜ್ಯದಲ್ಲಿ ಕಳೆದ ತಿಂಗಳಲ್ಲಿ 111 ನವಜಾತ ಶಿಶುಗಳು, 29 ಬಾಣಂತಿಯರ ಸಾವಾಗಿದೆ. ಈ ಸಾವುಗಳಿಗೆ ನ್ಯಾಯ ಕೊಡೋರು ಯಾರು? ಅಂತ ಪ್ರಶ್ನೆ ಮಾಡಿದರು.
ಬಾಣಂತಿ ಸಾವಾದ ದಿನವೇ ಹಾಸನ ಸಮಾವೇಶ:
ಬಿಜೆಪಿ ಅವಧಿಯಲ್ಲಿ ಕೋವಿಡ್ ವೇಳೆ ಸಾವಾಗಿದೆ ಅಂತ ಆರೋಪ ಮಾಡೋ ಕಾಂಗ್ರೆಸ್‌ನವರು ಈಗ ಬಾಣಂತಿಯರ ಸಾವಿನ ಬಗ್ಗೆ ಏನಂತಾರೆ? ಬಾಣಂತಿ ಸಾವಾದ ದಿನವೇ ಹಾಸನ ಸಮಾವೇಶ ಮಾಡಿದ್ದೀರಿ, ಸಾವಿಗೆ ಒಂದು ಹನಿ ಕಣ್ಣಲ್ಲಿ ನೀರು ಹಾಕಿಲ್ಲ. ಸಮಾವೇಶದಲ್ಲಿ ವಿಪಕ್ಷಗಳನ್ನು ಬೈಯೋದು ಬಿಟ್ಟು, ಬಾಣಂತಿಯರ ಸಾವಿನ ಬಗ್ಗೆ ಒಂದು ಮಾತು ಆಡಲಿಲ್ಲ ಸಿಎಂ. 6 ತಿಂಗಳ ಹಿಂದೆಯೇ ಡ್ರಗ್ ಇಲಾಖೆ ಕಳಪೆ ದ್ರಾವಣ ಅಂತ ವರದಿ ಕೊಟ್ಟಿತ್ತು, ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ
20 ಕೋಟಿ ಎಲ್ಲಿಂದ ಬಂತು?
ಸಿದ್ದರಾಮಯ್ಯಗೆ ಕಿಂಚಿತ್ ಕರುಣೆ ಬೇಡವಾ? ಮಕ್ಕಳು, ಬಾಣಂತಿಯರನ್ನು ಉಳಿಸೋ ಕೆಲಸ ಮಾಡದೇ ಇಂಥ ನೂರು ಸಮಾವೇಶ ಮಾಡಿದರೂ ವ್ಯರ್ಥ. ಪಾಪ, ಶಾಪದಲ್ಲೇ ನಿಮ್ಮ ಸರ್ಕಾರ ಸತ್ತು ಹೋಗಲಿದೆ. ಹಾಸನ ಸಮಾವೇಶಕ್ಕೆ 20 ಕೋಟಿ ಕರ್ಚಾಗಿದೆ, ಎಲ್ಲಿಂದ ಬಂತು, ಯಾರು ಕೊಟ್ರು? ಅಂತಲೂ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಸ್ಲಿಮರನ್ನು ಅವರಂತೆ ಹೆದರಿಸದಿದ್ರೆ ಜಗತ್ತಿನ ಎಲ್ಲಾ ಸಂಸ್ಕೃತಿಗಳು ನಾಶವಾಗಲಿವೆ: ಸಿ.ಟಿ ರವಿ
ಕಾಂಗ್ರೆಸ್‌ನದ್ದು ಊರು ಬಾಗಿಲು:
ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಫೈಟ್ ವಿಚಾರ ಕುರಿತು ಮಾತನಾಡಿದ ಅಶೋಕ್, ಪರಮೇಶ್ವರ್ ಮಾತಾಡಿದ್ದಾರಲ್ಲ, ಮೊದಲು ಸಿಎಂ ಆಗೋದಿಕ್ಕೆ ಅವರಿಗೇ ಆದ್ಯತೆ ಸಿಗಬೇಕು. ಅದಕ್ಕೇ ಅವರು ಮೊನ್ನೆ ಡಿಮ್ಯಾಂಡ್ ಇಟ್ಟಿದ್ದು. ಪರಮೇಶ್ವರ್ ಎರಡು ಸಲ ಅಧ್ಯಕ್ಷ ಆಗಿದ್ದವರು. ಸಿಎಂ ಆಗ್ತಾರೆ ಅಂತ ಅವರನ್ನು ಕಳೆದ ಸಲ ಸೋಲಿಸಲಾಯ್ತು. ಸಿಎಂ ಪೋಸ್ಟ್ ಬಿಟ್ಟುಕೊಡಲ್ಲ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದಾರಲ್ಲ, ಡಿಕೆಶಿಗೆ ಪೆನ್ನು ಪೇಪರ್ ಇನ್ನೆಲ್ಲಿ ಸಿಗುತ್ತೆ? ಬಿಜೆಪಿಯದ್ದು ಮನೆಯೊಂದು ಮೂರು ಬಾಗಿಲು ಅಂತಾರಲ್ಲ, ಕಾಂಗ್ತೆಸ್‌ನವ್ರದ್ದು ಊರು ಬಾಗಿಲಾಗಿದೆಯಲ್ಲ ಎಂದು ಲೇವಡಿ ಮಾಡಿದರು.