ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ (Valmiki Corporation Scam) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಡುವವರೆಗೆ ನಾವು ವಿರಮಿಸಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಗುಡುಗಿದ್ದಾರೆ.
ವಿಧಾನಸೌಧದಲ್ಲಿಂದು (Vidhana Soudha) ಮಾತನಾಡಿದ ಅವರು, ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಇಡೀ ಅಧಿವೇಶನದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದ ಬಗ್ಗೆ ಇಡಿ ವರದಿ ಬಿಡುಗಡೆ ಮಾಡಿದೆ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಮಂತ್ರಿ ಹೆಸರು ಇದೆ. ನಿಗಮದ ಅಧ್ಯಕ್ಷ ದದ್ದಲ್ ಹೆಸರೂ ಇದೆ. ಎರಡೂ ಹೆಸರು ಡೆತ್ ನೋಟ್‌ನಲ್ಲಿ ಇದೆ. ಆದ್ರೆ ಸಿಎಂ ಎರಡೂ ಪದ ಬಿಟ್ಟು, ಅವರಿಗೆ ಬೇಕಾದದ್ದನ್ನು ಓದಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಪ್ರಕರಣ ಮುಚ್ಚಿ ಹಾಕ್ತಿದ್ದಾರೆ. ಅವರಿಂದ ತನಿಖೆಗೆ ಸಹಕಾರ ಇಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್ ಸದಸ್ಯ ಬಾಂಬ್!
- Advertisement
- Advertisement
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಉಪನಾಯಕ ಬೆಲ್ಲದ್, ಜೆಡಿಎಸ್ ನಾಯಕ ಸುರೇಶ್ ಬಾಬು ಎಲ್ಲರೂ ಚರ್ಚೆ ಮಾಡಿದ್ದೇವೆ. ಬ್ಯಾಂಕ್ ಡೆಪಾಸಿಟ್, ಆಡಿಯೋ, ಫೋನ್ ಕಾಲ್ ಎಲ್ಲಾ ದಾಖಲೆ ನೀಡಿದ್ದೇವೆ. ಇದೆಲ್ಲಾ ಇದ್ದರೂ ಸಿಎಂ ಡೆತ್ ನೋಟ್ ತಿರುಚುವ ಪ್ರಯತ್ನ ಮಾಡ್ತಿದ್ದಾರೆ. ನಮಗೆ ಅವರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೈತನಿಗೆ ಅಪಮಾನ ಪ್ರಕರಣ – ಬೆಂಗಳೂರಿನ ಜಿ.ಟಿ ಮಾಲ್ ಬಂದ್!
ಎಸ್ಸಿ – ಎಸ್ಟಿ ಜನಾಂಗದ ಹಣ ದುರ್ಬಳಕೆ ಮಾಡಿಕೊಂಡಿದ್ದು, ಅವರಿಗೆ ದ್ರೋಹ ಬಗೆದಿದ್ದಾರೆ, ಹರಿ ಕಥೆ ಹೇಳ್ತಿದ್ದಾರೆ. ಭ್ರಷ್ಟಾಚಾರ ಆಗಿರೋದು ನಿಜ. ಯಾರು ಭಾಗಿಯಾಗಿದ್ದಾರೆ ಅಂತ ಉಲ್ಲೇಖ ಮಾಡಿಲ್ಲ. ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲ್ಲ ಅಂದಿದ್ದಾರೆ. ಪಾಪ ಆ ಜನಾಂಗದವರು ನಮಗೆ ಹಣ ಬರುತ್ತೆ ಅಂತ ಕಾಯ್ತಿದ್ದಾರೆ. ಹಾಗಾಗಿ ರಾಜೀನಾಮೆ ಕೊಡುವವರೆಗೂ ನಾವು ವಿರಮಿಸಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ತುಘಲಕ್ ಆಡಳಿತ ಇಲ್ಲ, ಸಿದ್ದರಾಮಯ್ಯ ಸರ್ಕಾರವೇ ಇರೋದು: ಬಿಜೆಪಿಗೆ ಸಿಎಂ ತಿರುಗೇಟು