ಬೆಂಗಳೂರು: ಹಿಜಬ್ ತೀರ್ಪಿನ ವಿರುದ್ಧ ಕರ್ನಾಟಕ ಬಂದ್ ಕರೆ ಕೊಟ್ಟವರು ಕಿಡಿಗೇಡಿಗಳು ಎಂದು ಕಂದಾಯ ಸಚಿವ ಆರ್.ಆಶೋಕ್ ಹೇಳಿದರು.
Advertisement
ಹಿಜಬ್ ತೀರ್ಪಿನ ವಿರುದ್ಧ ಬಂದ್ ಕರೆ ನೀಡಿರುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಬಂದ್‍ಗೆ ಕರೆ ನೀಡುವ ಮೂಲಕ ಭಾರತದ ಸಂವಿಧಾನವನ್ನು ಬುಡ ಮೇಲು ಮಾಡುವ ಕೆಲಸ ಮಾಡುತ್ತಿದ್ದಾರೆ. ಕೋರ್ಟ್ ವಿರುದ್ಧವೇ ಇವರು ಬಂದ್‍ಗೆ ಕರೆ ನೀಡಿದ್ದಾರೆ. ಇವರು ಎಷ್ಟು ಕಾನೂನು ಪಾಲನೆ ಮಾಡುತ್ತಾರೆ ಅಂತ ಇವರನ್ನು ಬೆಂಬಲಿಸೋ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ
Advertisement
Advertisement
ಹಿಜಬ್ ತೀರ್ಪಿನ ಬಗ್ಗೆ ಮೇಲ್ಮನವಿ ಹೋಗಬಹುದು. ಹೈಕೋರ್ಟ್ ವಿರುದ್ಧ ತೀರುಗಿ ನಿಲ್ಲುವುದು ಸರಿಯಲ್ಲ. ಇಂತವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ತೀರ್ಪನ್ನು ದೇಶದೆಲ್ಲೆಡೆ ಸ್ವಾಗತ ಮಾಡಿದ್ದಾರೆ. ಆದರೂ ಕೆಲ ಕಿಡಿಗೇಡಿಗಳು ಬಂದ್‍ಗೆ ಕರೆ ಕೊಟ್ಟಿದ್ದಾರೆ. ಸಂವಿಧಾನದವನ್ನು ಬುಡಮೇಲು ಮಾಡುವ ಕ್ರಿಯೆ ಇದು. ಕೆಲ ರಾಷ್ಟ್ರ ವಿರೋಧಿಗಳು ಬಂದ್‍ಗೆ ಕರೆ ಕೊಟ್ಟಿದ್ದಾರೆ. ಕೋರ್ಟ್ ತೀರ್ಪು ಬಗ್ಗೆ ಇವರಿಗೆ ಎಷ್ಟು ಗೌರವ ಇದೆ ಅನ್ನುವುದು ಇಲ್ಲಿಯೇ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ