ಬೆಂಗಳೂರು: ಪ್ರಜ್ವಲ್ ರೇವಣ್ಣ ಈಗ ಹಾಸನದಿಂದ ಗೆದ್ದರೆ ನಾವು ಎನ್‌ಡಿಎ (NDA) ವತಿಯಿಂದ ಅಮಾನತು ಮಾಡ್ತೀವಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಹೇಳಿದ್ದಾರೆ.
ಇಲ್ಲಿನ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಜಾಪ್ರಭುತ್ವವನ್ನು ಮತಾಂಧರಿಂದ, ಮತಾಂಧರಿಗಾಗಿ ಇರುವ ಸರ್ಕಾರ ಎಂದು ಕಾಂಗ್ರೆಸ್ ತಿರುಚಿದೆ: ಸಿ.ಟಿ ರವಿ
ಸಿದ್ದರಾಮಯ್ಯ (Siddaramaiah) ಪ್ರಜ್ವಲ್‌ಗೆ ಯಂಗ್ ಲೀಡರ್ ಮತ್ತು ವಿಜನ್ ಲೀಡರ್ ಅಂತ ಹೇಳಿದ್ದರು. ಈಗ ಮಾತಾಡಲಿ, ಅವರೇ ಗೆಲ್ಲಿಸಿದ ಸಂಸದ ಪ್ರಜ್ವಲ್. ಅವರು ಟಿಕೆಟ್ ಕೊಟ್ಟಿದ್ದು 5 ವರ್ಷದ ಅವಧಿಗೆ. ಸಿದ್ದರಾಮಯ್ಯ ಹೇಳಿದಂತೆ ಪ್ರಜ್ವಲ್ ವಿಜನ್ ತೋರಿಸಿದ್ದಾರೆ. ಪ್ರಜ್ವಲ್ ಈಗ ಗೆದ್ದರೆ ನಾವು ಎನ್‌ಡಿಎ ವತಿಯಿಂದ ಅಮಾನತು ಮಾಡ್ತೀವಿ ಎಂದು ಅಶೋಕ್ ಹೇಳಿದ್ದಾರೆ.
ಇದೇ ವೇಳೆ ರೇವಣ್ಣ ಬಂಧನ ವಿಚಾರ ಪ್ರಸ್ತಾಪಿಸಿದ ಅಶೋಕ್, ಹೆಚ್.ಡಿ ರೇವಣ್ಣ ಬಂಧನ (HD Revanna Arrest) ಸರಿಯಾಗಿದೆ. ಅವರ ಬಂಧನ ಮಾಡಿದ ಪೊಲೀಸರ ಕಾರ್ಯ ಶ್ಲಾಘಿಸುತ್ತೇನೆ. ಪೊಲೀಸರು ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: General Elections2024: ನೆಚ್ಚಿನ ಅಭ್ಯರ್ಥಿಗಳ ಮೇಲೆ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿದ ವಕೀಲರು!
ಇದೇ ವೇಳೆ ಮೈತ್ರಿ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಿಪಕ್ಷ ನಾಯಕ, ಈಗಾಗಲೇ ಕುಮಾರಸ್ವಾಮಿ ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಅಂದಿದ್ದಾರೆ. ಹೀಗಾಗಿ ಪ್ರಜ್ವಲ್ ಕೇಸ್ ರೇವಣ್ಣ ಬಂಧನದಿಂದ ಬಿಜೆಪಿಗೆ ಮುಜುಗರ ಆಗುತ್ತೆ ಅನ್ನೋ ಪ್ರಶ್ನೆ ಬರಲ್ಲ. ಕುಮಾರಸ್ವಾಮಿ ಮತ್ತು ಅಮಿತ್ ಶಾ ಸಹ ಈ ಬಗ್ಗೆ ಮಾತನಾಡಿದ್ದಾರೆ, ಏನು ಮಾತಾಡಿದ್ದಾರೋ ಗೊತ್ತಿಲ್ಲ. ಮೈತ್ರಿ ಕೇಂದ್ರದ ಮಟ್ಟದಲ್ಲಿ ಆಗಿರೋದು. ಮೈತ್ರಿ ಮುಂದುವರಿಸುವ ಬಗ್ಗೆ ವರಿಷ್ಠರೇ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.