ಬೆಂಗಳೂರು: ಜಿಲ್ಲೆಯ ಉತ್ತರ ಲೋಕಸಭಾ ಕ್ಷೇತ್ರಕ್ಕೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ. ನನ್ನ ಪುತ್ರ, ಕಾರ್ಯಕರ್ತ ಯಾರಿಗೆ ಟಿಕೆಟ್ ಕೊಟ್ಟರೂ ನಾನೂ ಕೆಲಸ ಮಾಡ್ತೀನಿ ಅಂತಾ ಮಾಜಿ ಸಚಿವ ಆರ್.ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಲೋಕಸಭಾ ಕ್ಷೇತ್ರಕ್ಕೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ರೆ ಕೆಲಸ ಮಾಡ್ತೀನಿ. ನನ್ನ ಪುತ್ರ, ಕಾರ್ಯಕರ್ತ ಯಾರಿಗೆ ಟಿಕೆಟ್ ಕೊಟ್ಟರೂ ನಾನೂ ಕೆಲಸ ಮಾಡ್ತೀನಿ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ್ದೇ ಫೈನಲ್ ಅಂತಾ ಸ್ಪಷ್ಟಪಡಿಸಿದರು.
Advertisement
Advertisement
ಸದಾನಂದಗೌಡ ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸದಾನಂದಗೌಡ ಹಿರಿಯ ನಾಯಕರು, ಇಷ್ಟು ಬೇಗ ನಿವೃತ್ತಿ ಆಗಬಾರದಿತ್ತು. 6-7 ತಿಂಗಳಿಂದ ನಿವೃತ್ತಿ ಬಗ್ಗೆ ಮಾತಾಡುತ್ತಿದ್ದರು, ಈಗ ನಿರ್ಧಾರ ಮಾಡಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಹೈಕಮಾಂಡ್ ಸೇರಿ ಅವರಿಗೆ ಯಾರೂ ಒತ್ತಡ ಹಾಕಿಲ್ಲ. ಅವರೇ ಸ್ವಂತ ನಿರ್ಧಾರ ಮಾಡಿದ್ದಾರೆ ಎಂದರು.
Advertisement
Advertisement
ಪಕ್ಷದ ವಿರುದ್ಧ ಅಸಮಾಧಾನಗೊಂಡಿರೋ ಸೋಮಶೇಖರ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸೋಮಶೇಖರ್ ಪಕ್ಷ ಬಿಟ್ಟು ಹೋಗಿಲ್ಲ ಅವರ ಜೊತೆ ನಾನೇ ಮಾತಾಡಿದ್ದೇನೆ. ಈಶ್ವರಪ್ಪ ಹೇಳಿದ್ದಕ್ಕೆ ನಾನು ಹಾಗೆ ಹೇಳಿದೆ ಅಂತ ಸೋಮಶೇಖರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೋಮಶೇಖರ್ ಹೋಗಲ್ಲ ಅಂತ ಹೇಳಿದರು.
ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂಬ ಡಿಕೆಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ಕಾಂಗ್ರೆಸ್ ನಲ್ಲಿ ದೊಡ್ಡ ಗೊಂದಲ ಇದೆ. ಗೊಂದಲ ಇರೋದಕ್ಕೆ ಡಿಕೆ ಶಿವಕುಮಾರ್ ಬೆಳಗಾವಿಗೆ ಹೋಗಿ ಸಭೆ ಮಾಡಿದ್ದು. ಅಧಿಕಾರಕ್ಕಾಗಿ ಸಿಎಂ, ಡಿಸಿಎಂ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನೂರಾರು ಗೊಂದಲ ಇದೆ. ಅದನ್ನ ಮುಚ್ಚಿ ಹಾಕಿಕೊಳ್ಳಲು ಆಪರೇಷನ್ ಕಮಲ ಅಂತ ಹೇಳ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡ್ತಿಲ್ಲ, ಮಾಡೋದೂ ಇಲ್ಲ. ಕಾಂಗ್ರೆಸ್ ಬಳಿ ಆಪರೇಷನ್ ಕಮಲದ ಬಗ್ಗೆ ದಾಖಲಾತಿ ಇದ್ದರೆ ಬಿಡುಗಡೆ ಮಾಡಲಿ ಅಂತ ಸವಾಲ್ ಹಾಕಿದರು.
ಲೋಕಸಭೆ ಚುನಾವಣೆ ಆದ ಬಳಿಕ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ. ಕಾಂಗ್ರೆಸ್ ಶಾಸಕರು ಲೋಕಸಭೆ ಫಲಿತಾಂಶಕ್ಕಾಗಿ ಕಾಯ್ತಿದ್ದಾರೆ. ಫಲಿತಾಂಶ ಬಂದ ಮೇಲೆ ದೊಡ್ಡ ಬದಲಾವಣೆ ರಾಜ್ಯದಲ್ಲಿ ಆಗುತ್ತೆ ಅಂತ ಭವಿಷ್ಯ ನುಡಿದರು.
ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ, ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡೋದು ಬಿಟ್ಟು ಬರ ಪರಿಹಾರ ಕೊಡಲಿ. ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರಕ್ಕೆ ಕಾಯದೇ ಬರ ಪರಿಹಾರ ಕೊಟ್ಟಿತ್ತು. ಎರಡು ಪಟ್ಟು ಪರಿಹಾರ ಹೆಚ್ಚಳ ಮಾಡಿದ್ದೆವು. ಇವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ಮೇಲೆ ನೊಣೆ ಬಿದ್ದಿದೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಅದಕ್ಕೆ ಹಣ ಇಲ್ಲ. ಹೀಗಾಗಿ ಕೇಂದ್ರದ ಮೇಲೆ ಬೊಟ್ಟು ಮಾಡ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದರು.
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನದ ಆಯ್ಕೆ ಆದಷ್ಟು ಬೇಗ ಆಗಲಿದೆ. ಜೆಡಿಎಸ್ ಮೈತ್ರಿ ಮತ್ತು ಪಂಚರಾಜ್ಯ ಚುನಾವಣೆ ಬ್ಯುಸಿಯಿಂದ ಸ್ವಲ್ಪ ತಡ ಆಗಿದೆ. ಆದಷ್ಟು ಬೇಗ ಕೇಂದ್ರದ ನಾಯಕರು ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಿದ್ದಾರೆ ಅಂತ ಸ್ಪಷ್ಟಪಡಿಸಿದರು.