ಬೆಂಗಳೂರು: ದೇವಾಲಯ ನಿರ್ವಹಣೆ ಮತ್ತು ದೈವ ಸಂಕಲ್ಪ ಯೋಜನೆಯಡಿಯಡಿ ಮೊದಲ ಹಂತವಾಗಿ ಎ ಶ್ರೇಣಿಯ 25 ದೇಗುಲಗಳನ್ನು ಪರಿಗಣಿಸಿದ್ದು, ಹಂತ ಹಂತವಾಗಿ ಬಿ ಮತ್ತು ಸಿ ಶ್ರೇಣಿಯ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ, ಸಮಗ್ರ ದೇವಾಲಯ ನಿರ್ವಹಣೆ ಮತ್ತು ದೈವ ಸಂಕಲ್ಪ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಶಶಿಕಲಾ ಜೊಲ್ಲೆ ಪರವಾಗಿ ಉತ್ತರ ನೀಡಿದ ಸಚಿವ ಅಶೋಕ್, ಯೋಜನೆಯಡಿ ಇಡೀ ರಾಜ್ಯದಲ್ಲಿ 31 ಜಿಲ್ಲೆಯಲ್ಲಿ 25 ಎ ಗ್ರೇಡ್ ದೇಗುಲ ಗುರುತು ಮಾಡಲಾಗಿದೆ. ಎರಡನೇ, ಮೂರನೇ ಹಂತದ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ ಎಂದರು. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ
Advertisement
Advertisement
ಹೆಚ್ಚು ಆದಾಯ ಬರುವ ದೇವಾಲಯಗಳಿಗೆ ಮೊದಲ ಆಧ್ಯತೆ ನೀಡಿದ್ದು,ಎರಡನೇ ಹಂತದ ಆದಾಯ ಬರುವ ದೇವಸ್ಥಾನಕ್ಕೆ ಎರಡನೇ ಆದ್ಯತೆ ನೀಡಲಾಗುತ್ತದೆ. ನಂತರ ಎಲ್ಲಾ ದೇಗುಲ ಪರಿಗಣಿಸಲಾಗುತ್ತದೆ ಎಂದರು. ಸದ್ಯ ಯೋಜನೆ ಆರಂಭ ಮಾಡಿದ್ದೇವೆ ಅಷ್ಟೆ. ಹಂತ ಹಂತವಾಗಿ ಎಲ್ಲಾ ದೇವಾಲಯಗಳನ್ನೂ ಯೋಜನೆಗೆ ಪರಿಗಣಿಸಲಾಗುತ್ತದೆ ಅಂತ ತಿಳಿಸಿದರು. ಈಗ ಕಲ್ಯಾಣ ಕರ್ನಾಟಕ ಭಾಗದ ಒಂದು ದೇವಾಲಯ ಪರಿಗಣಿಸಿದ್ದು, ನಂತರದ ದಿನಗಳಲ್ಲಿ ಉಳಿದ ದೇವಾಲಯಗಳನ್ನೂ ಪರಿಗಣಿಸಲಾಗುತ್ತದೆ ಎಂದರು.