– ಕಾಂಗ್ರೆಸ್ ಸ್ನೇಹಿತರಿಂದಲೇ ವಿಚಾರ ಗೊತ್ತಾಗಿದೆ ಎಂದು ಬಾಂಬ್
– 5ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಮೈಸೂರು: ಮುಂದಿನ ನವೆಂಬರ್ 15, 16ಕ್ಕೆ ಸಿಎಂ ಸಿದ್ದರಾಮಯ್ಯ ಗಂಟು ಮೂಟೆ ಕಟ್ಟಬೇಕಾಗುತ್ತೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ತಮ್ಮವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ, ಅಹವಾಲು ಸ್ವೀಕರಿಸಿ ಮಾತುಕತೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ @NswamyChalavadi , ಬೆಂಗಳೂರು ಕೇಂದ್ರ ಬಿಜೆಪಿ… pic.twitter.com/v8ICaFkJnu
— R. Ashoka (@RAshokaBJP) February 1, 2025
ಬೆಂಗಳೂರಿನಲ್ಲಿ (Bengaluru) ಅಂಗನವಾಡಿ ಪ್ರತಿಭಟನೆಯಲ್ಲಿ ಮಾತಾನಾಡಿದ ಅವರು ಡಿಕೆಶಿ ವರ್ಸಸ್ ಸಿದ್ದು ಮ್ಯೂಸಿಕಲ್ ಚೇರ್ ಸ್ಪರ್ಧೆ ಇರುತ್ತದೆ. ಇದು ಪಕ್ಕಾ ನ್ಯೂಸ್ ಅಂತಾ ವಿಪಕ್ಷ ನಾಯಕ ಆರ್. ಅಶೋಕ್ ಹೊಸ ಬಾಂಬ್ ಹಾಕಿದ್ದಾರೆ. ಇದನ್ನೂ ಓದಿ: Budget 2025 | ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಬಲ ನೀಡುತ್ತಾ ʻಮಿಡಲ್ ಕ್ಲಾಸ್ʼ ಬಜೆಟ್
ಕಾಂಗ್ರೆಸ್‌ನಲ್ಲಿ (Congress) ಈಗಾಗಲೇ ಒಪ್ಪಂದ ಆಗಿದೆ. ನಾನು ಜ್ಯೋತಿಷಿ ಅಲ್ಲ ಆದ್ರೆ ನಂಗೆ ಕಾಂಗ್ರೆಸ್‌ನಲ್ಲಿ ಸ್ನೇಹಿತರು ಇದ್ದಾರೆ, ಹೀಗಾಗಿ ಈ ವಿಚಾರ ತಿಳಿದಿದೆ. ಡಿಕೆಶಿ ಕುರ್ಚಿ ಒದ್ದಾದ್ರೂ ಅಧಿಕಾರ ಕಿತ್ತುಕೊಳ್ತಾರೆ ಅಂತಾ ಆಶೋಕ್ ಹೇಳಿದ್ದಾರೆ. ಇದನ್ನೂ ಓದಿ: Budget 2025: ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
ಇದೇ ವೇಳೆ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ವಂಚನೆ ಮಾಡಿದೆ. 5ನೇ ಗ್ಯಾರಂಟಿ ಘೋಷಣೆ ಮಾಡ್ತೀವಿ ಅಂತಾ ಭರವಸೆ ಕೊಟ್ಟು ಮೋಸ ಮಾಡಿದೆ. ಬೇಡಿಕೆ ಈಡೇರುವ ತನಕ ಪಕ್ಷ ನಿಮ್ಮೊಂದಿಗೆ ಇರಲಿದೆ ಅಂದ್ರು. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಅಡ್ಡಿಪಡಿಸಿ ಟೆಂಟ್ ಕಿತ್ತುಕೊಳ್ಳೋಕೆ ಸಿದ್ದು ಸರ್ಕಾರ ಮುಂದಾಗಿದೆ. ನಿಮ್ಮ ಟೆಂಟ್ ಕಿತ್ತುಕೊಳ್ತಾರೆ ಇರೋ ಸ್ವಲ್ಪ ದಿನದಲ್ಲಿ ಇವರಿಗೆ ಒಳ್ಳೆಯದು ಮಾಡಿ ಅಂತಾ ಲೇವಡಿ ಮಾಡಿದ್ರು.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಸಾಥ್:
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ 5 ದಿನ ಪೂರೈಸಿದೆ. ಇಂದಿನ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್, ಚಲವಾದಿ ನಾರಾಯಣ ಸ್ವಾಮಿ ಸೇರಿ ಹಲವರು ಭಾಗಿಯಾಗಿದ್ರು. ನಿನ್ನೆ ಪೊಲೀಸರು ಬಂದು ಟೆಂಟ್ ಕಿತ್ತು ಹಾಕಲು ನೋಡಿದ್ದನ್ನು ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ದುಬೈನಲ್ಲಿ ಅರಳಿದ ಪ್ರೀತಿ, ವಿಜಯಪುರದಲ್ಲಿ ಅಂತ್ಯ – ಹಣ, ಮೊಬೈಲ್ ದೋಚಿ ಪತಿ ಪರಾರಿ
5 ದಿನಗಳಾದ್ರೂ ಸ್ಪಂದಿಸದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಜ್ಯದಲ್ಲಿ ಒಂದು ಹುದ್ದೆಯೂ ಭರ್ತಿ ಆಗ್ತಿಲ್ಲ, ಇವರ ಜೇಬು ಭರ್ತಿಯಾಗುತ್ತಿದೆ ಅಂತ ಆರೋಪಿಸಿದ್ರು. ಅತ್ತ, ಚಿತ್ರದುರ್ಗದಲ್ಲಿ ಸಚಿವ ಡಿ.ಸುಧಾಕರ್‌ಗೆ ಅಂಗನವಾಡಿ ಕಾರ್ಯಕರ್ತೆಯರು ಕ್ಲಾಸ್ ತಗೊಂಡಿದ್ದಾರೆ. ನಿಮ್ಮ ಗ್ಯಾರಂಟಿ ಸಕ್ಸಸ್ ಆಗಲು ನಾವು ಕಾರಣ. ಎಲೆಕ್ಷನ್ ಟೈಮಲ್ಲಿ ಘೋಷಣೆ ಮಾಡಿದ್ದನ್ನು ಮಾಡಿಕೊಡಿ ಎಂದು ಗರಂ ಆಗಿದ್ದಾರೆ. ಇದು ಕೇಂದ್ರದ ಯೋಜನೆ. ಅವರು ಕೊಟ್ಟಿಲ್ಲ. ಆದ್ರೂ ನಾವು ನಿಮ್ಮ ಜೊತೆ ಇರ್ತೀವಿ.. 100 ಪರ್ಸೆಂಟ್ ಕೊಡ್ತೀವಿ.. ಸ್ವಲ್ಪ ಟೈಂ ಕೊಡ್ರಮ್ಮ.. ಎನ್ನುತ್ತಾ ಸಚಿವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.