ಬೆಂಗಳೂರು: ಆಧಾರವಿಲ್ಲದೇ ಸುಮ್ಮನೆ ಮಾತನಾಡುವುದು ಕುಮಾರಸ್ವಾಮಿ ಯವರಿಗೆ ಅಭ್ಯಾಸವಾಗಿದೆ. ಅದಕ್ಕೆ ವಾಚಾಳಿತನ ಅನ್ನುತ್ತಾರೆ. ಇನ್ನಾದರೂ ಅವರು ಇಂತಹ ಸುಳ್ಳು ಆರೋಪ ಮಾಡುವದನ್ನು ಬಿಡಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ. ಅವರ ಮಗನಾಗಿ ಬೇರೆಯವರಿಗೆ ಗೌರವ ಕೊಡುವದನ್ನು, ಯಾವರೀತಿ ಮಾತನಾಡಬೇಕು ಎನ್ನುವದನ್ನು ತಂದೆಯನ್ನು ನೋಡಿ ಕಲಿತುಕೊಳ್ಳಬೇಕು. ಆಧಾರವಿಲ್ಲದೇ ಸುಮ್ಮನೆ ಮಾತನಾಡುವುದು ಕುಮಾರಸ್ವಾಮಿ ಯವರಿಗೆ ಅಭ್ಯಾಸವಾಗಿದೆ. ಅದಕ್ಕೆ ವಾಚಾಳಿತನ ಅನ್ನುತ್ತಾರೆ. ಇನ್ನಾದರೂ ಅವರು ಇಂತಹ ಸುಳ್ಳು ಆರೋಪ ಮಾಡುವದನ್ನು ಬಿಡಲಿ. ಅವರ ಘನತೆಗೆ ತಕ್ಕಂತೆ ಮಾತನಾಡುವದನ್ನು ಕಲಿಯಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕತ್ತರಿ ಬದಲು ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿದ ಪಾಕಿಸ್ತಾನದ ಸಚಿವ
ಹಣ ಕೊಡುವುದು, ತೆಗೆದುಕೊಳ್ಳುವುದು ಬಿಜೆಪಿ ಸಂಸ್ಕøತಿಯಲ್ಲಿ ಇಲ್ಲ. ಜೆಡಿಎಸ್ ನವರದ್ದು ಹಣ ವಸೂಲಿ ಸಂಸ್ಕೃತಿ ಇರಬಹುದು, ನಮ್ಮ ಪಕ್ಷದಲ್ಲಿ ಆ ರೀತಿ ಇಲ್ಲ. ಅರುಣ ಸಿಂಗ್ ಅವರಂತಹ ಅತ್ಯಂತ ಶಿಸ್ತಿನ, ಸುಸಂಸ್ಕೃತ, ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಅವರ ಬಗ್ಗೆ ಇಂತಹ ಕೀಳುಮಟ್ಟದ ಆಪಾದನೆ ಮಾಡುವುದು, ಒಬ್ಬ ಮಾಜಿ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಕ್ಕಳ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು?: ಸಿದ್ದರಾಮಯ್ಯ ಕಿಡಿ
ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾನು ತೀಕ್ಷ್ಣವಾಗಿ ಖಂಡಿಸುತ್ತೇನೆ. ಪಕ್ಷ ಸಂಘಟನೆ ಹಾಗೂ ಬೆಳವಣಿಗೆ ದೃಷ್ಟಿಯಿಂದ ಅರುಣ ಸಿಂಗ್ ಆಗಾಗ ಕರ್ನಾಟಕಕ್ಕೆ ಬರುತ್ತಾರೆ. ಸಭೆ, ಸಮಾಲೋಚನೆ ನಡೆಸುತ್ತಿರುತ್ತಾರೆ. ಬಿಜೆಪಿ ಒಂದು ಶಿಸ್ತಿನ ಪಕ್ಷ ಎನ್ನುವದನ್ನು ಮತ್ತೊಮ್ಮೆ ಅವರಿಗೆ ಹೇಳಲು ಬಯಸುತ್ತೇನೆ ಎಂದು ವಾಗ್ದಾಳಿ ಮಾಡಿದ್ದಾರೆ.