– ಕಾಂಗ್ರೆಸ್ ಸರ್ಕಾರದ 1 ವರ್ಷ, ಕೊಲೆಗಡುಕರಿಗೆ ಹರ್ಷ ಎಂದು ಲೇವಡಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Government) ಖಜಾನೆ ಸಂಪೂರ್ಣ ಖಾಲಿಯಾಗಿದೆ. ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashoka) ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ. ಒನ್ ಇಯರ್ ಖಜಾನೆ ಫುಲ್ ಕ್ಲಿಯರ್, ವರುಷ ಒಂದು ಸಮಸ್ಯೆಗಳು ನೂರೊಂದು. ಕಾಂಗ್ರೆಸ್ ಸರ್ಕಾರ ಬಂತು – ಜನರ ಮುಖದಲ್ಲಿ ಹರ್ಷ ಹೋಯಿತು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡ್ರ ಮೇಲೆ ಗೌರವ ಇದ್ರೆ ಕೂಡ್ಲೇ ಬಂದು ತನಿಖೆ ಎದುರಿಸು- ಪ್ರಜ್ವಲ್‌ಗೆ ಹೆಚ್‌ಡಿಕೆ ಮನವಿ
ಒಂದು ವರ್ಷ ಪೂರೈಸಿದ ಹಿನ್ನೆಲೆ ಮುಖ್ಯಮಂತ್ರಿಗಳು ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರಾ? ಅಥವಾ ತಮ್ಮ ಸರ್ಕಾರದ ಅವಧಿ ಮುಗಿದುದ್ದಕ್ಕೆ ಬೈಬೈ-ಗುಡ್ ಬೈ ಎಂದು ಧನ್ಯವಾದ ಹೇಳಿದ್ದಾರೋ ಅರ್ಥ ಆಗಿಲ್ಲ. ಸಿದ್ದರಾಮಯ್ಯ ಅವರ ಮುಖದ ಕಳೆ ನೋಡಿದ್ರೆ, ಕಾಂಗ್ರೆಸ್ ಸರ್ಕಾರದ ಅವರಿ ಮುಗಿದಂತೆ ಕಾಣ್ತಿತ್ತು ಎಂದು ಕುಟಕಿದ್ದಾರೆ.
ಕಾಂಗ್ರೆಸ್ ಲೂಟಿ – ಎಷ್ಟು ಕೋಟಿ? ಎಂದು ಜನರು ಲೆಕ್ಕ ಹಾಕುತ್ತಿದ್ದಾರೆ. ನೇಹಾ, ಮೀನಾ, ಅಂಜಲಿ ಎಂಬ ಮಹಾಲಕ್ಷ್ಮಿಯರು, ನಮ್ಮ ಮನೆಯ ಮಹಾಲಕ್ಷಿಯರಿಗಿಲ್ಲ ಬದುಕುವ ಭಾಗ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳಲು ಸಹಕರಿಸಬೇಕು: ಸಿಎಂ ಮನವಿ
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ ಅವರು ಉಪಸ್ಥಿತರಿದ್ದರು.