– ಡಿಕೆಶಿ ಸಿಎಂ ಆಗಲಿ ಅಂತ ಸಿಎಲ್‌ಪಿ ಸಭೆಯಲ್ಲಿ ಶಾಸಕರು ಮಾತಾಡಲಿ
ಬೆಂಗಳೂರು: ನಿಗಮ ಮಂಡಳಿ (Corporation Board) ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ನೀಡಿರೋ ಸರ್ಕಾರದ ಕ್ರಮವನ್ನ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಖಂಡಿಸಿದ್ದಾರೆ. ಕೂಡಲೇ ಸರ್ಕಾರ ಆದೇಶ ವಾಪಸ್ ಪಡೆಯಬೇಕು ಅಂತ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಜನರ ತೆರಿಗೆ ಹಣವನ್ನ ಕಾಂಗ್ರೆಸ್ (Congress) ಮೋಜು ಮಸ್ತಿಗೆ ಖರ್ಚು ಮಾಡ್ತಾ ಇದ್ದಾರೆ. ನನಗೆ ಇರೋ ಮಾಹಿತಿ ಇದನ್ನ ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ. ಯಾವ ಆಧಾರದಲ್ಲಿ ಸಂಪುಟ ದರ್ಜೆ ಕೊಟ್ಟಿದ್ದೀರಾ ಅಂತ. ರಾಜ್ಯದ ಜನರು ಪ್ರಶ್ನೆ ಮಾಡ್ತಿದ್ದಾರೆ. ಈ ಸರ್ಕಾರದ ಬಳಿಕ ಸಂಬಳ ಕೊಡೋಕೆ ಹಣ ಇಲ್ಲ. ಗೃಹಲಕ್ಷ್ಮಿಗೆ, ಅನ್ನಭಾಗ್ಯಕ್ಕೆ ಹಣ ಕೊಡೋಕೆ ಆಗಿಲ್ಲ. ಶಾಸಕರಿಗೆ (MLAs) ಮೋಜು ಮಸ್ತಿ ಮಾಡಲು ಮುಂದಾಗಿದ್ದಾರೆ. ಕೂಡಲೇ ಸಚಿವ ಸಂಪುಟ ದರ್ಜೆ ಸ್ಥಾನವನ್ನ ಸರ್ಕಾರ ರದ್ದು ಮಾಡಬೇಕು ಅಂತ ಆಗ್ರಹಿಸಿದರು. ಇದನ್ನೂ ಓದಿ: ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ – ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಅಸಮಾಧಾನ

ಡಿಕೆಶಿ ಸಿಎಂ ಆಗಲಿ ಅಂತ ಶಾಸಕರು ಮಾತಾಡಲಿ
ಇನ್ನೂ ಡಿಕೆ ಶಿವಕುಮಾರ್ ಸಿಎಂ ಆಗಲಿ ಅಂತ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲಿ ಮಾತಾಡಲಿ. ಅದು ಬಿಟ್ಟು ಹೊರಗೆ ಬಂದು ಮಾತಾಡೋದು ಯಾಕೆ ಅಂತ ವಿಪಕ್ಷ ನಾಯಕ ಕುರ್ಚಿ ಕಿತ್ತಾಟಕ್ಕೆ ಕಿಡಿಕಾರಿದ್ದಾರೆ.
ನಾನು ಸಿಎಂ ಆಗಬೇಕು ಎಂಬುದು ಜನರ ಆಸೆ ಎಂಬ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಇಷ್ಟು ದೇವಸ್ಥಾನ ಸುತ್ತಿದರು. ಪಾಪ ದೇವರು ವರ ಕೊಟ್ಟಿಲ್ಲ. ಈಗ ಜನರ ಮಧ್ಯೆ ಬಂದಿದ್ದಾರೆ. ಜನ ವರ ಕೊಡ್ತಾರಾ ಗೊತ್ತಿಲ್ಲ. ಡಿಕೆಶಿ ಸಿಎಂ ಆಗಲಿ ಅಂತ CLP ಸಭೆಯಲ್ಲಿ ಮಾತಾಡಲಿ. ಹೊರಗೆ ಬಂದು ಯಾಕೆ ಮಾತಾಡಬೇಕು ಅಂತ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ RCB ಪಂದ್ಯ ನಡೆಸಲು ಮುಂದುವರಿದ ಕೆಎಸ್‌ಸಿಎ ಕಸರತ್ತು; ಪರಮೇಶ್ವರ್ ಭೇಟಿ ಮಾಡಿದ ಕೆಎಸ್‌ಸಿಎ, ಆರ್‌ಸಿಬಿ ನಿಯೋಗ
ಕಾಂಗ್ರೆಸ್ ನಲ್ಲಿ ನಿತ್ಯ ಕುರ್ಚಿ ಕಿತ್ತಾಟ ಆಗ್ತಿದೆ. ಕಾಂಗ್ರೆಸ್ ಹೈಕಮಾಂಡ್ ಇದನ್ನ ಬಗೆಹರಿಸೋ ಶಕ್ತಿ ಇಲ್ಲ. ಇದು ವೀಕ್ ನಾಯಕತ್ವವಾಗಿದೆ. ಡಿಕೆಶಿಗೆ ನ್ಯಾಯ ಕೊಡಬೇಕು ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕನಕ ನಾಯಕನಿಗೆ ನ್ಯಾಯ ಸಿಕ್ಕಿ. ಸಿದ್ದರಾಮಯ್ಯ ಸಾಮಾಜಿಕ ಅಂತಾರೆ. ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸೂಪರ್ ಸಿಎಂ ಆಗಿದ್ದಾರೆ. ನಮ್ಮಪ್ಪನೇ 5 ವರ್ಷ ಸಿಎಂ ಅಂತಿದ್ದಾರೆ. ಡಿಕೆಶಿ ಪದೇ ಪದೇ 138 ಶಾಸಕರು ನಮ್ಮ ಜೊತೆ ಇದ್ದಾರೆ ಅಂತ ಹೇಳ್ತಾರೆ. ಅದೇ ಸಿಎಲ್‌ಪಿ ಯಲ್ಲಿ 138 ಜನ ಇದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಇಳಿಬೇಕು, ಡಿಕೆಶಿ ಆಗಬೇಕು ಅಂತ ಹೇಳೇ ಇಲ್ಲ ಅಂದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ಕರ್ನಾಟಕ ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಶಾಸಕರು ಜೋತಿಷ್ಯ ಹೇಳ್ತಾರೆ. ದಿನಾ ಶಾಸಕರು ಮಾತಾಡ್ತಾರೆ. ಡಿಕೆ ಪರ ಘೋಷಣೆ ಕೂಗ್ತಾರೆ. ಇಷ್ಟಾದ್ರು ಕಾಂಗ್ರೆಸ್ ಹೈಕಮಾಂಡ್ ಕ್ರಮ ಮಾಡಿಲ್ಲ. ಇದು ವೀಕ್ ಹೈಕಮಾಂಡ್. ಇನ್ನು ಎರಡು ವರ್ಷ ಈ ಗೊಂದಲದಲ್ಲೇ ಈ ಸರ್ಕಾರ ಇರುತ್ತದೆ. ಇದು ಜನದ್ರೋಹಿ ಸರ್ಕಾರ ಅಂತ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಜೀವಿತ ಪ್ರಮಾಣಪತ್ರ – ಹೊಸ ನಿಯಮಕ್ಕೆ ಆಶೋಕ್ ಆಕ್ರೋಶ

