– ಮನಮೋಹನ್ ಸಿಂಗ್ ಇದ್ದಾಗ ಮುತ್ತು ರತ್ನಗಳನ್ನ ಸೇರುಗಳಲ್ಲಿ ಬೆಂಗಳೂರಿಗೆ ಕೊಟ್ಟಿದ್ರಾ ಅಂತ ಪ್ರಶ್ನೆ
ಬೆಂಗಳೂರು: ಎಲ್ಲದ್ದಕ್ಕೂ ಕೇಂದ್ರ ಎನ್ನುವುದಾದರೆ ನೀವೇನು ಕತ್ತೆ ಕಾಯ್ತಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದ್ದಾರೆ.ಇದನ್ನೂ ಓದಿ: BBK 11: ಗೆದ್ದ 50 ಲಕ್ಷದಲ್ಲಿ ಮನೆ ಕಟ್ಟಿಸ್ತೀನಿ, ಮದುವೆ ಆಗ್ತೀನಿ: ಹನುಮಂತ
Advertisement
Advertisement
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನುದಾನ ನೀಡಲು ಸಿಎಂ, ಡಿಸಿಎಂರಿಂದ ಪತ್ರ ಬರೆದಿರುವವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಬಜೆಟ್ ಮಾಡೋಕೆ ಈ ಸರ್ಕಾರದ ಬಳಿ ಹಣ ಇಲ್ಲ. ಸಾಲ ಮಾಡಿ ಬಜೆಟ್ ಮಾಡಬೇಕು. ಕೇಂದ್ರ ಹಣ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಡಿಸಿಎಂ ಅವರು ಬೆಂಗಳೂರಿಗೆ 60 ಕೋಟಿ ರೂ. ಕೊಡಬೇಕು ಎನ್ನುತ್ತಾರೆ. ಮನಮೋಹನ್ ಸಿಂಗ್ ಇದ್ದಾಗ ಮುತ್ತು ರತ್ನಗಳನ್ನು ಸೇರುಗಳಲ್ಲಿ ಬೆಂಗಳೂರಿಗೆ ಕೊಟ್ಟಿದ್ದರೇನು? ನೀರಾವರಿಗೆ ಹಣ ಕೇಂದ್ರ ಕೊಡಬೇಕು ಎನ್ನುತ್ತಾರೆ. ಆರೋಗ್ಯ ಸಚಿವರು ಬಾಣಂತಿಯರ ಸಾವಿಗೆ ಕೇಂದ್ರ ಕಾರಣ ಎಂದು ಹೇಳುತ್ತಾರೆ. ಎಲ್ಲದಕ್ಕೂ ಕೇಂದ್ರ ಎನ್ನುವುದಾದರೆ, ಏನು ಕತ್ತೆ ಕಾಯ್ತಿದ್ದೀರಾ ಎಂದು ಗರಂ ಆದರು.
Advertisement
ಕೇಂದ್ರ ಅನ್ಯಾಯ ಮಾಡಿದೆ ಎಂದರೆ ನರೇಂದ್ರ ಮೋದಿ, ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದರು ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ. ಯಡಿಯೂರಪ್ಪ ಸಿಎಂ ಇದ್ದಾಗ ಮನಮೋಹನ್ ಸಿಂಗ್ ಎಷ್ಟು ಹಣ ಕೊಟ್ಟಿದ್ದರು? ಅಂಕಿ ಅಂಶಗಳ ಬಿಡುಗಡೆ ಮಾಡಿ, ಲೆಕ್ಕ ಕೊಡಿ ಎಂದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಇದನ್ನೂ ಓದಿ: ಮೋದಿ, ಅಮಿತ್ ಶಾ ಸ್ವರ್ಗಕ್ಕೆ ಹೋಗಲ್ಲ: ಮಲ್ಲಿಕಾರ್ಜುನ ಖರ್ಗೆ