– ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ 56 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ ಎಂದ ವಿಪಕ್ಷ ನಾಯಕ
ಬೆಂಗಳೂರು: ನೇಹಾ ಹತ್ಯೆಯಾದಾಗ, ಲವ್ ಜಿಹಾದ್ ಆದಾಗ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಆಗ ಕ್ರಮ ಕೈಗೊಳ್ಳದ ಹಿನ್ನೆಲೆ ಈ ಥರ ಕೊಲೆಗಳಾಗುತ್ತಿವೆ ಎಂದು ವಿಪಕ್ಷ ನಾಯಕ ಆರ್.ಆಶೋಕ್ (R Ashok) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಕುರಿತು ಮಾತನಾಡಿದ ಅವರು, ಇಡೀ ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆಯಿಂದ ಬೆಚ್ಚಿಬಿದ್ದಿದೆ. ಇಂದು ಮಂಗಳೂರು ಬಂದ್‌ಗೂ ಕರೆ ಕೊಡಲಾಗಿದೆ. ಈಥರದ ಘಟನೆಗಳು ಹಿಂದೆ ಕಾಂಗ್ರೆಸ್ ಇದ್ದಾಗಲೂ ಆಗಿವೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ 56 ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ. ಕಾಂಗ್ರೆಸ್ ಬಂದಾಗೆಲ್ಲ ಪಾಕ್ ಜಿಂದಾಬಾದ್ ಕೂಗುವರು, ಪಾಕ್ ಬಾವುಟ ಪ್ರದರ್ಶನ ಮಾಡುವವರು ಹೆಚ್ಚಾಗಿದ್ದಾರೆ. ಸುಹಾಸ್ ಹತ್ಯೆಗೂ ಪಾಕಿಸ್ತಾನ ಜಿಂದಾಬಾದ್ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸುಹಾಸ್ ಹತ್ಯೆ ಮಾಡಿದವರಿಗೆ ಕಠಿಣ ಕ್ರಮ ಆಗಲಿದೆ: ಪರಮೇಶ್ವರ್
ಪಾಕಿಸ್ತಾನ ಜಿಂದಾಬಾದ್ ಕೂಗುವವರ ವಿರುದ್ಧ ಕ್ರಮ ಕೈಗೊಳುತ್ತಿಲ್ಲ. ದೇಶದ್ರೋಹಿಗಳ ವಿರುದ್ಧ ಗುಂಡು ಹೊಡೆದು ಸಾಯಿಸುವ ಕಾನೂನು ಬರಬೇಕು. ಸುಹಾಸ್ ಕೊಲೆ ಹಿಂದೂ ಕಾರ್ಯಕರ್ತರಿಗೆ ಬಹಳ ನೋವುಂಟು ಮಾಡಿದೆ. ಇನ್ನೆಷ್ಟು ಹಿಂದೂಗಳ ಹತ್ಯೆ ಆಗಬೇಕು? ಸುಹಾಸ್ ಶೆಟ್ಟಿ ಚಲನವಲನ ಬಗ್ಗೆ ಹತ್ಯೆಕೋರರಿಗೆ ಹೇಳಿದವರು ಯಾರು? ಇದರಲ್ಲಿ ಪೊಲೀಸ್ ಇಲಾಖೆ ಕೈವಾಡ ಇದೆಯಾ ಅಂತಲೂ ತನಿಖೆ ನಡೆಯಬೇಕು. ಸಿದ್ದರಾಮಯ್ಯ ಸರ್ಕಾರ ಬಂದ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಹಾಸ್ ಶೆಟ್ಟಿ ಬಳಿ ಯಾವುದೇ ಆಯುಧ ಇಲ್ಲ ಎಂದು ಗೊತ್ತಾಗಿ ದಾಳಿ ನಡೆದಿದೆ. ಈ ಮಾಹಿತಿ ಹತ್ಯೆಕೋರರಿಗೆ ಕೊಟ್ಟವರ್ಯಾರು? ಈ ಮಾಹಿತಿ ಪಡೆದೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನೇಹಾ ಹತ್ಯೆ ಆದಾಗ, ಲವ್ ಜಿಹಾದ್ ಆದಾಗ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಆಗ ಕ್ರಮ ಕೈಗೊಳ್ಳದ ಹಿನ್ನೆಲೆ ಈ ಥರ ಕೊಲೆಗಳಾಗುತ್ತಿವೆ. ನಾನು, ವಿಜಯೇಂದ್ರ ಮಂಗಳೂರಿಗೆ ಹೊರಟಿದ್ದೀವಿ, ಪ್ರತಿಭಟನೆಯಲ್ಲಿ ನಾವೂ ಭಾಗವಹಿಸುತ್ತೇವೆ. ಸಿದ್ದರಾಮಯ್ಯ ಸಿಎಂ ಆದ ನಂತರ ಅವರ ನಡೆ ನುಡಿಯೇ ಬದಲಾಗಿದೆ. ಹಿಂದೂ ಕಾರ್ಯಕರ್ತರ ಕೊಲೆ, ಪಹಲ್ಗಾಮ್, ಹಸು ಕೆಚ್ಚಲು ಕೊಯ್ದ ಪ್ರಕರಣ ಆದಾಗೆಲ್ಲ ಸಿದ್ದರಾಮಯ್ಯ ಸಬೂಬು ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಬೆಂಕಿ ಸುರಿಯುವ ಕೆಲಸ ಮಾಡಬಾರದೆಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನ ನಮ್ಮನ್ನು ಬೈದರೂ ಏನೂ ಅನಿಸುವುದಿಲ್ಲ, ಪಾಕ್ ಪರ ಘೋಷಣೆ ಕೂಗಿದರೂ ಅವರಿಗೆ ಏನೂ ಅನಿಸುವುದಿಲ್ಲ. ಎಮ್ಮೆ ಚರ್ಮದವರು ಅವರು. ಇಡೀ ಪೊಲೀಸ್ ಇಲಾಖೆಯೇ ಕಾಂಗ್ರೆಸ್ ಪಾರ್ಟಿ ಥರ ಆಗಿದೆ. ಪೊಲೀಸರ ಕುಮ್ಮಕ್ಕಿನಿಂದಲೇ ಈಥರದ ಘಟನೆಗಳಾಗುತ್ತಿವೆ, ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದರು.ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ