ಧಾರವಾಡ: ಬಳ್ಳಾರಿಯಲ್ಲಿ ಸಚಿವ ಆರ್.ಅಶೋಕ್ ಪುತ್ರ ಕಾರ್ ಅಘಘಾತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ತನಿಖೆಯನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?
ನಗರದಲ್ಲಿ ಮಾಧ್ಯಮಗಳ ಮಾತನಾಡಿದ ಅವರು, ನಾನು ನೇರವಾಗಿ ವಿಮಾನ ನಿಲ್ದಾಣದಿಂದ ಈಗಷ್ಟೇ ದೆಹಲಿಯಿಂದ ಮುಂಬೈಗೆ ಹೋಗಿ ಇಲ್ಲಿಗೆ ಬಂದಿರುವೆ. ತನಿಖೆಯನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ. ಯಾವ ತನಿಖೆ ಮಾಡುತ್ತಾರೋ ಅದನ್ನು ಸಿಎಂ ಮಾಡಲಿ. ಕಾರಿನಲ್ಲಿ ಅವರಿದ್ದರು ಇವರಿದ್ದರೂ ಅಂತ ಉಹಾಪೋಹದ ಮೇಲೆ ಹೇಗೆ ಹೇಳೋಕೆ ಆಗುತ್ತೆ. ಅಪಘಾತ ಅಪಘಾತವೇ, ಅವರೆಂತಹ ಪ್ರಭಾವಿ ಇದ್ದರೂ ಪ್ರಕರಣ ಮುಚ್ಚಿ ಹಾಕುವ ಪ್ರಶ್ನೆ ಇಲ್ಲ ಎಂದರು.
ಎಫ್‌ಐಆರ್‌ನಲ್ಲಿ ಹೆಸರು ತೆಗೆದು ಹಾಕಿದ್ದರೆ ಆ ಬಗ್ಗೆಯೂ ತನಿಖೆಯಾಗಲಿ ಎಂದರು. ಕೆಜಿಎಫ್‍ನಲ್ಲಿ ಗಣಿಗಾರಿಕೆ ಪುನರ್ ಆರಂಭ ಮಾಡಲು ಅಧಿಕಾರಿಗಳಿಂದ ಸರ್ವೆ ನಡೆದಿದೆ. ಕೆಲವೊಂದು ಚಿನ್ನದ ನಿಕ್ಷೇಪ ಸೇರಿದಂತೆ ಖನಿಜಾಂಶ ಇರುವುದು ಪತ್ತೆಯಾಗಿದೆ. ಸರ್ವೆ ಸಾಧಕ ಬಾಧಕ ನೋಡಿಕೊಂಡು ತಿರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಹ್ಲಾದ್ ಜೋಶಿ ಹೇಳಿದರು.