– ಸರಣಿ ಹೃದಯಾಘಾತ; ನಾಳೆ ಹಾಸನಕ್ಕೆ ಭೇಟಿ ನೀಡಲಿರುವ ಅಶೋಕ್
ಬೆಂಗಳೂರು: ಸರ್ಕಾರದ ದುಸ್ಥಿತಿ ಬಗ್ಗೆ ಓಪನ್ ಆಗಿ ಹೇಳಿರುವ ಬಸವರಾಜ ರಾಯರೆಡ್ಡಿಗೆ (Basavaraj Rayareddy) ನಮ್ಮ ಸರ್ಕಾರ ಬಂದ ನಂತರ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಗ್ಯಾರಂಟಿ ಬೇಕಾ, ರಸ್ತೆ ಬೇಕಾ ಎಂದು ರಾಯರೆಡ್ಡಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಪುಣ್ಯಾತ್ಮ ಅವರೊಬ್ಬರು ಕರೆಕ್ಟ್ ಆಗಿ ಹೇಳಿದ್ದಾರೆ. ಈ ಸರ್ಕಾರ ಹೋಗೋವಾಗ ಜನರ ಕೈಗೆ ಚಿಪ್ಪು ಕೊಟ್ಟೇ ಹೋಗೋದು. ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೇವೆ. ಸರ್ಕಾರದ ಬಗ್ಗೆ ರಾಯರೆಡ್ಡಿ ಸತ್ಯ ಹೇಳಿದ್ದಾರೆ. ಹಾಗಾಗಿ ಅವರಿಗೆ `ಸತ್ಯವಾನ್ ರಾಯರೆಡ್ಡಿ’ ಪ್ರಶಸ್ತಿ ಕೊಡ್ತೇವೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯವಾದಿಗಳ ಹೆಮ್ಮೆ ಮುಖರ್ಜಿ ಕನಸು ಮೋದಿಯಿಂದ ನನಸು: ಯಡಿಯೂರಪ್ಪ
ಹಾಸನದಲ್ಲಿ (Hassan) ಸರಣಿ ಹೃದಯಾಘಾತ ಹಾಗೂ ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಳೆ ಹಾಸನ ಭೇಟಿ ಕೊಡ್ತೇನೆ. ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ಸಿಎಂ ಹೃದಯಾಘಾತ ಬಗ್ಗೆ ಲಸಿಕೆ ಕಾರಣ ಅಂತ ಸುಳ್ಳು ಹೇಳಿದ್ದಾರೆ. ನಾಳೆ ಮಾಹಿತಿ ಪಡೆದುಕೊಂಡು ಮಾತಾಡ್ತೇನೆ. ಅಲ್ಲದೇ ಸಕಲೇಶಪುರಕ್ಕೆ ತೆರಳಿ ಕಾಫಿ ಬೆಳೆಗಾರರ ಭೇಟಿ ಮಾಡ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ಬಗೆಹರಿಸೋ ನೆಪದಲ್ಲಿ ಮಹಿಳೆ ಜೊತೆಗೆ ಲವ್ವಿ-ಡವ್ವಿ; ಪೊಲೀಸಪ್ಪನ ಕಾಮದಾಸೆಗೆ ಸುಂದರ ಕುಟುಂಬ ಬೀದಿಗೆ
ಶಿವಮೊಗ್ಗ ವಿಗ್ರಹಗಳಿಗೆ ಅವಮಾನ ವಿಚಾರ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಸಮುದಾಯವನ್ನು ಎರಡನೇ ದರ್ಜೆಯಾಗಿ ನೋಡ್ತಿದ್ದಾರೆ. ಇದು ಸಾಮಾನ್ಯವಾಗಿ ಹೋಗಿದೆ. ಶಿವಮೊಗ್ಗ ಅಷ್ಟೇ ಅಲ್ಲ, ಮಂಗಳೂರಲ್ಲೂ ಹಾಗೆ ಮಾಡ್ತಾರೆ. ಗೃಹ ಸಚಿವರು ಎಲ್ಲಿದ್ದಾರೆ ಅಂತ ಹುಡುಕಬೇಕು. ಈ ಸರ್ಕಾರ ಬಂದ ಮೇಲೆ ಯಾವಾಗಲೂ ಇದೇ ರೀತಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.